ನ್ಯಾಮತಿ: 20:- ತಾಲೂಕಿನ ಕೆಂಚಿಕೊಪ್ಪ ಗ್ರಾಮದಲ್ಲಿ ಯುವಕನೊಬ್ಬ, ತಾನು ಪ್ರೀತಿಸುತ್ತಿದ್ದ ಯುವತಿಯ ಕುಟುಂಬ ಒಡ್ಡಿತನ್ನಲಾದ ಜೀವ ಬೆದರಿಕೆಯಿಂದ ಬೇಸರಗೊಂಡು ಗುರುವಾರ ರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಬಿ.ಕೆ. ರಾಕೇಶ್ (25) ಆತ್ಮಹತ್ಯೆ ಮಾಡಿಕೊಂಡ ಯುವಕ. ಎರಡು ವರ್ಷಗಳಿಂದ ಸಮೀಪದ ಗ್ರಾಮವೊಂದರ ಯುವತಿಯನ್ನು ಪ್ರೀತಿಸುತ್ತಿದ್ದ.
ವಿಷಯ ತಿಳಿದ ಯುವತಿ ಕುಟುಂಬದವರು ದೂರವಿರುವಂತೆ ಎಚ್ಚರಿಕೆ ನೀಡಿದ್ದರು. ಐದಾರು ತಿಂಗಳ ಬಳಿಕ ಯುವತಿಯೇ ಕರೆ ಮಾಡಿದಾಗ ನಿಮ್ಮ ಕುಟುಂಬವನ್ನು ಒಪ್ಪಿಸಿದರೆ ಮದುವೆ ಆಗುವುದಾಗಿ ರಾಕೇಶ್ ಹೇಳಿದ್ದ. ಮೊಬೈಲ್‌ನಲ್ಲೇ ಇಬ್ಬರ ನಲ್ಲಿ ಸಂಪರ್ಕ ಮುಂದುವರಿದಿತ್ತು ಎನ್ನಲಾಗಿದೆ. ಆಕೆಯ ಕುಟುಂಬದವರು ಹಲ್ಲೆ ನಡೆಸಿ, ಜೀವ ಬೆದರಿಕೆ ಹಾಕಿದ್ದರಿಂದಲೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಮೃತನ ತಂದೆ ಕೊಮೇಶ್ವರಪ್ಪ ನ್ಯಾಮತಿ ಪೊಲೀಸ್ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.