ಹೊನ್ನಾಳಿ:- ಏಪ್ರಿಲ್- 19;- ಪಟ್ಟಣದಲ್ಲಿರುವ ಪ್ರವಾಸಿ ಮಂದಿರದಲ್ಲಿ ಇಂದು ಸಾಸ್ವೆಹಳ್ಳಿ ಬ್ಲಾಕ್ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ ಎಚ್ ಎ ಗದ್ದಿಗೇಶರವರು ಮತ್ತು ಹೊನ್ನಾಳಿ ಬ್ಲಾಕ್ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ ಸಣ್ಣಕ್ಕಿ ಬಸವನಗೌಡ್ರು ರವರು ಜಂಟಿಯಾಗಿ ಸುದ್ದಿಗೋಷ್ಠಿಯನ್ನು ನಡೆಸಿದರು.
ಸಾಸ್ವೆಹಳ್ಳಿ ಬ್ಲಾಕ್ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ ಎಚ್ ಎ ಗದ್ದಿಗೇಶರವರು ನಂತರ ಮಾತನಾಡಿ ನಾವುಗಳು ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ಮೂರು ವರ್ಷ ಅವಧಿ ಮುಗಿದಿದ್ದರೂ ಸಹ ನಮ್ಮ ಹೊನ್ನಾಳಿ ತಾಲೂಕಿನ ಮಾಜಿ ಶಾಸಕರಾದ ಡಿ ಜಿ ಶಾಂತನಗೌಡ್ರು ರವರು ಮತ್ತು ದಾವಣಗೆರೆ ಜಿಲ್ಲಾ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ ಎಚ್ಪಿ ಮಂಜಪ್ಪನವರು ಮತ್ತು ಕಾಂಗ್ರೆಸ್ ಪಕ್ಷದ ಮುಖಂಡರುಗಳು ಸೇರಿದಂತೆ ನೀವು ಇನ್ನೂ ಒಂದು ವರ್ಷಗಳ ಕಾಲ ಪಕ್ಷದ ಅಧ್ಯಕ್ಷ ಸ್ಥಾನದಲ್ಲಿದ್ದು ಕೆಲಸ ಮಾಡಿ ಮುಂದುವರೆಯಿರಿ ಅಂತ ಹೇಳಿದ್ದರು ಹಾಗಾಗಿ ಮುಂದುವರೆದು ಕೆಲಸವನ್ನು ಪಕ್ಷದ ಮುಖಂಡರುಗಳು ಮತ್ತು ಕಾರ್ಯಕರ್ತರುಗಳ ಸಹಕಾರದೊಂದಿಗೆ ಒಂದು ಕಪ್ಪು ಚುಕ್ಕೆ ಇಲ್ಲದೆ ಕೆಲಸವನ್ನು ಮಾಡಿದ್ದೇವೆ ಅದು ನಮಗೆ ಸಮಾಧಾನ ಮತ್ತು ತೃಪ್ತಿಯೂ ಸಹ ತಂದಿದೆ. ಹಾಗಾಗಿ ನಾವುಗಳು ಇಂದು ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇವೆ .ಅಷ್ಟೇ ಹಾಗಾಗಿ ಪಕ್ಷದ ಕಾರ್ಯಕರ್ತರುಗಳು ಅನ್ಯತಾ ಭಾವಿಸ ಬಾರದು ಪಕ್ಷದ ಕಾರ್ಯಕರ್ತರಿಗೆ ಮನವಿ ಮಾಡಿಕೊಳ್ಳುತ್ತಾ, ಪಕ್ಷದ ಬಲವರ್ಧನೆಗೆ ಬೇರೆಯವರಿಗೆ ಅಧ್ಯಕ್ಷ ಸ್ಥಾನಗಳಿಗೆ ಅವಕಾಶ ಮಾಡಿಕೊಟ್ಟರೆ ಪಕ್ಷ ಸಂಘಟನೆ ಮಾಡಲಿಕ್ಕೆ ಸಾಧ್ಯ ಎಂದರು. ನಮಗೆ ನಾಲ್ಕು ವರ್ಷಗಳ ಕಾಲ ಅಧ್ಯಕ್ಷರಾಗಿ ಸೇವೆ ಸಲ್ಲಿಸಲು ಅವಕಾಶ ಮಾಡಿಕೊಟ್ಟಂತಹ ಮಾಜಿ ಶಾಸಕರಾದ ಡಿ ಜಿ ಶಾಂತನಗೌಡ್ರು ರವರಿಗೆ ಮತ್ತು ಜಿಲ್ಲಾಧ್ಯಕ್ಷರು ಮಂಜಪ್ಪನವರಿಗೆ ಹೊನ್ನಾಳಿ ತಾಲೂಕಿನ ಅಹಿಂದ ಮುಖಂಡರುಗಳಿಗೂ ಅವಳಿ ತಾಲೂಕಿನ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರುಗಳು ಧನ್ಯವಾದಗಳನ್ನು ತಿಳಿಸುತ್ತೇನೆ ಎಂದು ಹೇಳಿದರು. ನಮ್ಮ ಅಧ್ಯಕ್ಷರ ಅವಧಿಯಲ್ಲಿ ತಾಲೂಕಿನ ಮುಖಂಡರುಗಳು ಮತ್ತು ಕಾರ್ಯಕರ್ತರುಗಳಿಗೂ ನಮ್ಮಿಂದ ಕಿಂಚಿತ್ತು ತೊಂದರೆಯಾದರೂ ಸಹ ನಮ್ಮನ್ನ ಕ್ಷಮಿಸಿ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ನಂತರ ಹೊನ್ನಾಳಿ ಬ್ಲಾಕ್ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ ಸಣ್ಣಕ್ಕಿ ಬಸವನಗೌಡ ರವರು ಸುದ್ದಿಗೋಷ್ಠಿಯನ್ನುದ್ದೇಶಿ ಮಾತನಾಡಿ ನಾವು ಅಧ್ಯಕ್ಷ ಸ್ಥಾನದಲ್ಲಿ ಇದ್ದ ಸಂದರ್ಭದಲ್ಲಿ ನಾವುಗಳು ಕೆಲವೊಂದು ಬಾರಿ ಹಳ್ಳಿಗಳಿಗೆ ಹೋಗದೆ ಫೋನಿನ ಮೂಲಕ ಕಾರ್ಯಕರ್ತರಿಗೆ ತಿಳಿಸಿದಾಗ ಕಾಂಗ್ರೆಸ್ ಪಕ್ಷದ ಹೋರಾಟಕ್ಕೆ ತಾವುಗಳು ಬಂದು ಮುಷ್ಕರದಲ್ಲಿ ಭಾಗಿಯಾಗಿ ಸಹಕಾರವನ್ನು ನೀಡಿದ್ದಾರೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರುಗಳಿಗೆ ಹೃದಯಪೂರ್ವಕ ಧನ್ಯವಾದಗಳನ್ನು ತಿಳಿಸುತ್ತೇನೆ ಎಂದು ಹೇಳುತ್ತ, ನಮಗೆ ವಹಿಸಿರುವ ಜವಾಬ್ದಾರಿಯನ್ನು ನಾಲ್ಕು ವರ್ಷಗಳ ಕಾಲ ಯಾವುದೇ ಅಡಚಣೆ ಇಲ್ಲದೆ ಕಾಂಗ್ರೆಸ್ ಪಕ್ಷದ ಮುಖಂಡರುಗಳು ಆಶೀರ್ವಾದ ಜಿಲ್ಲಾ ಮುಖಂಡರುಗಳ ಆಶೀರ್ವಾದ ಕಾರ್ಯಕರ್ತರುಗಳು ಆಶೀರ್ವಾದದಿಂದ ಅಧ್ಯಕ್ಷರಾಗಿ ಮುಂದುವರಿಯಲಿಕ್ಕೆ ಸಾಧ್ಯವಾಯಿತು. ಈ ನಾಲ್ಕು ವರ್ಷಗಳ ಅವಧಿಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇವೆಸಲ್ಲಿಸಿದ ತೃಪ್ತಿ ನಮಗಿದೆ. ಹಾಗಾಗಿ ಕಾಂಗ್ರೆಸ್ ಪಕ್ಷದ ಜಿಲ್ಲಾ ನಾಯಕರುಗಳಿಗೆ ರಾಜ್ಯಮಟ್ಟದ ಕಾಂಗ್ರೆಸ್ ಪಕ್ಷದ ನಾಯಕರುಗಳಿಗೆ ತಾಲೂಕು ಮಟ್ಟದ ಕಾಂಗ್ರೆಸ್ ಪಕ್ಷದ ಮುಖಂಡರಿಗೂ ಕಾರ್ಯಕರ್ತರಿಗೂ ಧನ್ಯವಾದಗಳನ್ನು ತಿಳಿಸುತ್ತೇನೆ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಇನ್ನು ಮಾತನ್ನು ಮುಂದುವರಿಸಿ ಪಕ್ಷದಲ್ಲಿ ಅಧ್ಯಕ್ಷ ಸ್ಥಾನ ಇಲ್ಲದಿದ್ದರೆ ಪಕ್ಷ ಸಂಘಟನೆ ಮಾಡಲಿಕ್ಕೆ ಅಸಾಧ್ಯ ಹಾಗಾಗಿ ನೂತನ ಅಧ್ಯಕ್ಷರು ಗಳನ್ನು ಬೇಗನೆ ನೇಮಕಮಾಡಿ ಅವರುಗಳಿಗೆ ಪಕ್ಷ ಸಂಘಟಿಸುವ ಕೆಲಸವನ್ನು ಮಾಡಲಿಕ್ಕೆ ಪಕ್ಷದ ಮುಖಂಡರುಗಳು ಮಾಡಬೇಕು ಎಂದು ಮನವಿ ಮಾಡಿದರು.
ಎರಡು ಬ್ಲಾಕ್ ಕಾಂಗ್ರೆಸ್ ಪಕ್ಷದ ಅಧ್ಯಕ್ಷರುಗಳು ಅವರು ಮಾಡಿರುವ ವಿಶೇಷತೆಯೇನೆಂದರೆ ಇಂದು ತಮ್ಮ ಅಧ್ಯಕ್ಷರ ಗಾದಿಗೆ ರಾಜೀನಾಮೆ ಕೊಟ್ಟ ಆದ ನಂತರ ಅಲ್ಲಿ ಪತ್ರಿಕಾಗೋಷ್ಠಿಯಲ್ಲಿ ಸೇರಿರುವ ಪತ್ರಕರ್ತ ಮಿತ್ರರಿಗೆ ಶಾಲನ್ನು ಹೊದಿಸಿ ಸನ್ಮಾನಿಸಿದ್ದು ವಿಶೇಷತೆಯಾಗಿತ್ತು. ಪಕ್ಷದ ಅಧ್ಯಕ್ಷ ಸ್ಥಾನದಿಂದ ವಿದಾಯ ಹೇಳಿದ ಅಧ್ಯಕ್ಷರುಗಳಿಗೆ ಪತ್ರಕರ್ತ ಮಿತ್ರರು ಅವರುಗಳಿಗೆ ಧನ್ಯವಾದಗಳನ್ನು ತಿಳಿಸಿದರು .ಈ ಅಧ್ಯಕ್ಷರುಗಳು ಇಂತಹ ಕಾರ್ಯ ಮಾಡಿದ್ದು ಹೊನ್ನಾಳಿ ತಾಲೂಕಿನಲ್ಲಿ ಮೊದಲನೆಯದು ಎನಿಸಿಕೊಂಡಿತು.
ಉಪಸ್ಥಿತಿಯಲ್ಲಿ ;-ಸಾಸ್ವೆಹಳ್ಳಿ ಬ್ಲಾಕ್ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ ಎಚೆ ಎ ಗದ್ದಿಗೇಶ, ಹೊನ್ನಾಳಿ ಬ್ಲಾಕ್ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ ಸಣ್ಣಕ್ಕಿ ಬಸನಗೌಡ ಹಾಗೂ ಮಾಜಿ ಎಪಿಎಂಸಿ ಸದಸ್ಯ ಮಾದೇನಹಳ್ಳಿ ಸೋಮಶೇಖರ್ ಸಹ ಈ ಸಂದರ್ಭದಲ್ಲಿ ಭಾಗಿಯಾಗಿದ್ದರು.

Leave a Reply

Your email address will not be published. Required fields are marked *