.
ಹೊನ್ನಾಳಿ :
ಹುಬ್ಬಳ್ಳಿಯಲ್ಲಿ ನಡೆದ ಗಲಬೆ ಪ್ರಕರಣಕ್ಕೆ ಸಂಬಂದಿದಂತೆ ಸಿದ್ದರಾಮಯ್ಯನವರು ಗಲಬೆ ಕೋರರನ್ನು ಅಮಾಯಕರು ಎಂದು ಕರೆದಿದ್ದು ಅವರಿಗೆ ನಾಚಿಕೆಯಾಗ ಬೇಕೆಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಸಿದ್ದರಾಮಯ್ಯ ವಿರುದ್ದ ವಾಗ್ದಳಿ ನಡೆಸಿದರು.
ಹೊನ್ನಾಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು ಅವರು, ಕಳೆದ ನಾಲ್ಕು ದಿನಗಳ ಹಿಂದೆ ಹುಬ್ಬಳಿಯಲ್ಲಿ ನಡೆದ ಘಟನೆಗೆ ನೇರವಾಗಿ ಕಾಂಗ್ರೇಸ್ ನವರೇ ಕಾರಣ, ಕೂಡಲೇ ಕಾಂಗ್ರೇಸ್ ನವರು
ನಾಡಿನ ಜನತೆಯ ಬೇಷರತ್ ಕ್ಷಮೆ ಕೇಳುವಂತೆ ಆಗ್ರಹಿಸಿದರು.
ಯರು ದೇಶದ್ರೋಹದ ಕೆಲಸ ಮಾಡುತ್ತಾರೆ ಅವರನ್ನು ಬಂದಿಸುವುದು ಮಾತ್ರವಲ್ಲಾ, ಅವರನ್ನು ಗಲ್ಲಿಗೇರಿಸ ಬೇಕೆಂದು ಆಗ್ರಹಿಸಿದ ರೇಣುಕಾಚಾರ್ಯ, ದೇಶದ್ರೋಹದ ಕೆಲಸ ಮಾಡಿದವರ ಹಾಘು ಅವರ ಕುಟುಂಬಸ್ಥರ ಮತದಾನದ ಹಕ್ಕನ್ನು ಮೊಟಕುಗೊಳಿಸುವುದರ ಜೊತೆಗೆ ಸರ್ಕಾರಿ ಸವಲತ್ತುಗಳನ್ನು ಮೊಟಕುಗೊಳಿಸ ಬೇಕು, ಆಗ ಅವರಿಗೆ ತಕ್ಕ ಪಾಠ ಕಲಿಸಿದಂತಾಗುತ್ತದೆಂದು ಎಂದರು.
ಹುಬ್ಬಳ್ಳಿಯಲ್ಲಿ ನಡೆದ ಘಟನೆ ಪೂರ್ವ ನಿಯೋಜಿತ ಎಂದ ರೇಣುಕಾಚಾರ್ಯ, ಪೊಲೀಸರು ಹಾಗೂ ಪೊಲೀಸ್ ಠಾಣೆಯ ಮೇಲೆ ದಾಳಿ ಮಾಡಿದವರ ಎಡೆಮುರಿ ಕಟ್ಟುವ ಕೆಲವನ್ನು ನಮ್ಮ ಸರ್ಕಾರ ಮಾಡುತ್ತಿದೆ ಎಂದರು.
ಮುಖ್ಯಮಂತ್ರಿಗಳು ಹಾಗೂ ಗೃಹ ಸಚಿವರಿಗೆ ನಾನು ಒತ್ತಾಯ ಮಾಡುತ್ತೇನೆ ಉತ್ತರ ಪ್ರದೇಶದ ಮಾದರಿಯಲ್ಲಿ ದೇಶದ್ರೋಹಿಗಳ ಎಡೆಮುರಿ ಕಟ್ಟುವ ಕೆಲಸ ಮಾಡ ಬೇಕೆಂದರು.
ಈ ಹಿಂದೆ ನಾನು ದೇವಸ್ಥಾನಗಳಲ್ಲಿ ತೀರ್ಥ ಪ್ರಸಾದ ನೀಡುತ್ತಾರೆ ಆದರೇ ಮಸೀದಿಗಳಲ್ಲಿ ಮದ್ದು ಗುಂಡು ಸಂಗ್ರಹಿಸುತ್ತಾರೆಂದು ಹೇಳಿದ್ದೇ, ಅದು ಈಗ ನಿಜವಾಗಿದೆ ಎಂದ ರೇಣುಕಾಚಾರ್ಯ
ಬೇರೆ ಬೇರೆ ರಾಜ್ಯಗಳಿಂದ, ಹಳ್ಳಿಗಳಿಂದ ಬಂದ ಅಲ್ಪಸಂಖ್ಯಾತರು ಗಲಬೆ ಉಂಟು ಮಾಡಲು ಪ್ರಚೋದನೆ ನೀಡುತ್ತಿದ್ದಾರೆ ಎಂದರು.
ಮದರಸಗಳಲ್ಲಿ ಮಕ್ಕಳ ಮನಸ್ಸಿನ ಮೇಲೆ ದೇಶದ್ರೋಹ ಬಿತ್ತು ಕೆಲಸ ಮಾಡುತ್ತಿದ್ದರೇ, ನಮ್ಮ ನಮ್ಮ ಶಿಕ್ಷಣ ಸಂಸ್ಥೆಗಳಲ್ಲಿ ದೇಶಪ್ರೇಮ ಬಿತ್ತುವ ಕೆಲಸ ಮಾಡುತ್ತೆನೆ, ಕೂಡಲೇ ಮದರಸಗಳನ್ನು ಬ್ಯಾನ್ ಮಾಡುವಂತೆ ಒತ್ತಾಯ ಮಾಡಿದರು.
ಹಿಂದು,ಮುಸ್ಲಿಂ,ಕ್ರೈಸ್ಥರು ನಾವೆಲ್ಲಾ ಭಾರತ ಮಾತೆಯ ಮಕ್ಕಳು ಎಂದ ರೇಣುಕಾಚಾರ್ಯ
ಡಿಜಿಹಳ್ಳಿ, ಟಿಜಿಹಳ್ಳಿ ಗಲಭೆಗಳಿಗೆ ಕಾಂಗ್ರೇಸ್ ನವರು ಕಾರಣ, ಕಾಂಗ್ರೇಸ್ ಮುಖಂಡರಿಗೆ ನಾನು ಕೇಳಲು ಇಚ್ಚೆ ಪಡುತ್ತೇನೆ ನಿಮಗೆ ರಾಜಕೀಯ ಮುಖ್ಯವೋ ದೇಶಪ್ರೇಮ ಮುಖ್ಯವೂ ಇದನ್ನು ಮೊದಲು ನೀವು ಸಾಬೀತು ಪಡಿಸಿ ಎಂದರು.
ಅಲ್ಪ ಸಂಖ್ಯಾತರಲ್ಲಿ ಸಂತಶಿಶುನಾಳ ಶರೀಪರು,ಅಬ್ದುಲ್ ಕಲಾಂ ಅವರನ್ನು ನಾವು ಗೌರವಿಸುತ್ತೇವೆ. ಎಲ್ಲಾ ಅಲ್ಪಸಂಖ್ಯಾರನ್ನು ನಾವು ದೇಶದ್ರೋಹಿ ಎಂದು ಕರೆಯುವುದಿಲ್ಲಾ, ಆದರೇ ಕೆಲವರು
ದೇಶದ್ರೋಹಿಗಳಿದ್ದು ಅವರಿಂದ ಶಾಂತಿ ಕದಡುವ ಕೆಲಸ ನಡೆಯುತ್ತಿದ್ದು ಅಂತಹವನ್ನು ಬಂಧಿಸಿದರೆ ಸಾಲದು ಅವರನ್ನು ಗಲ್ಲಿಗೇರಿಸ ಬೇಕು ಎಂದರು.