ನ್ಯಾಮತಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತುಕಾರ್ಯಕಾರಿ ಸಮಿತಿ ಪ್ರತಿಯೊಬ್ಬ ಸದಸ್ಯರ ಮನೆಯ ಮೇಲೆ ಕನ್ನಡಧ್ವಜಹಾರಿಸಿ, ಕನ್ನಡಜಾಗೃತಿ ಮೂಡಿಸುವ ಸಲುವಾಗಿ ಕಸಾಪ ಅಧ್ಯಕ್ಷ ಹಾಲಾರಾಧ್ಯಅವರ ಮನೆಯ ಮೇಲೆ ಬುಧವಾರ ಪ್ರಥಮವಾಗಿಕನ್ನಡಧ್ವಜವನ್ನು ಹಾರಿಸುವ ಮೂಲಕ ಚಾಲನೆ ನೀಡಲಾಯಿತು.
ಪ್ರತಿಯೊಬ್ಬರ ಮನೆಯ ಮೇಲೆ ಕನ್ನಡಧ್ವಜ ಹಾರಿಸಬೇಕು
ನ್ಯಾಮತಿ:
ಕನ್ನಡ, ಕನ್ನಡಿಗ, ಕರ್ನಾಟಕ ಎಂಬುದನ್ನು ಜನರಲ್ಲಿ ಅರಿವು ಮೂಡಿಸುವ ನಿಟ್ಟಿನಲ್ಲಿ ನ್ಯಾಮತಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಪ್ರತಿಯೊಬ್ಬಕಾರ್ಯಕಾರಿ ಸಮಿತಿ ಸದಸ್ಯರ ಮನೆಯ ಮೇಲೆ ಕನ್ನಡ ಧ್ವಜವನ್ನು ವರ್ಷವಿಡಿ ಹಾರಿಸುವಂತೆಕಾರ್ಯಕ್ರಮ ಹಮ್ಮಿಕೊಂಡಿದೆಎಂದು ನ್ಯಾಮತಿತಾಲ್ಲೂಕುಕನ್ನಡ ಸಾಹಿತ್ಯ ಪರಿಷತ್ತುಅಧ್ಯಕ್ಷಡಿ.ಎಂ. ಹಾಲಾರಾಧ್ಯ ತಿಳಿಸಿದರು.
ಪಟ್ಟಣದಅವರ ಮನೆಯಲ್ಲಿ ಬುಧವಾರಕನ್ನಡ ಸಾಹಿತ್ಯ ಪರಿಷತ್ತುಕಾರ್ಯಕಾರಿ ಸದಸ್ಯರು ಮತ್ತು ಸಾರ್ವಜನಿಕರೊಂದಿಗೆ ಪ್ರಥಮವಾಗಿಕನ್ನಡಧ್ವಜವನ್ನು ಹಾರಿಸುವ ಮೂಲಕ ಚಾಲನೆ ನೀಡಲಾಯಿತು.
ಕನ್ನಡಅಭಿಮಾನವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಈ ವಿನೂತನಕಾರ್ಯಕ್ರಮ ಹಮ್ಮಿಕೊಂಡಿದ್ದು, ಮುಂದಿನ ದಿನಗಳಲ್ಲಿ ಅಜೀವ ಸದಸ್ಯರ ಮನೆ, ಗ್ರಾಮದ ಪ್ರತಿಯೊಂದು ಮನೆ, ಅಂಗಡಿ, ಸರ್ಕಾರಿ ಕಚೇರಿಗಳ ಕಟ್ಟಡಗಳ ಮೇಲೆ ಶಾಶ್ವತವಾಗಿಕನ್ನಡಧ್ವಜ ಹಾರುವಂತೆಕಾರ್ಯಕ್ರಮರೂಪಿಸಲಾಗುವುದುಎಂದರು.
ಸುರಹೊನ್ನೆ ಮಹಿಳಾ ಸದಸ್ಯರಾದಯು.ಮಂಜುಳಾ ಗಣೇಶಅವರ ಮನೆಯ ಮೇಲೆ ಕನ್ನಡಧ್ವಜವನ್ನು ಹಾರಿಸಲಾಯಿತು.
ಕನ್ನಡ ಸಾಹಿತ್ಯ ಪರಿಷತ್ತು ನಿಕಟಪೂರ್ವಅಧ್ಯಕ್ಷ ಜಿ. ನಿಜಲಿಂಗಪ್ಪ, ಕಾರ್ಯದರ್ಶಿ ಎಸ್.ಜಿ.ಬಸವರಾಜಪ್ಪ, ಕೋಶಾಧ್ಯಕ್ಷ ಕೆ. ಬಸವರಾಜಪ್ಪ, ಸದಸ್ಯರಾದ ಎಂ.ಲೋಕೇಶ್ವgಯ್ಯ, ಯು. ಮಂಜುಳಾ, ಬಂಡಿಈಶ್ವರಪ್ಪ, ಜಿ.ತೀರ್ಥಲಿಂಗಪ್ಪ, ಜಿ. ಕುಬೇರಪ್ಪ, ಆಚೆಮನೆ ತಿಪ್ಪೇಸ್ವಾಮಿ, ವೆಂಕಟೇಶನಾಯ್ಕ, ಗೃಹರಕ್ಷಕದಳ ಪ್ಲಟೂನ್ ಎಂ. ರಾಘವೇಂದ್ರ, ತಾಲ್ಲೂಕು ಪಂಚಾಯಿತಿ ಮಾಜಿಉಪಾಧ್ಯಕ್ಷಎಂ.ಕೃಷ್ಣಾಚಾರ್, ರಾಜುರಾಯ್ಕರ್ ಹಾಜರಿದ್ದರು.