ಮಾನ್ಯ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಇವರು
ಏಪ್ರಿಲ್ 23 ರಂದು ದಾವಣಗೆರೆ ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ
ಏಪ್ರಿಲ್ 23 ರಂದು ಮದ್ಯಾಹ್ನ 12 ಗಂಟೆಗೆ ಬೆಂಗಳೂರಿನಿಂದ
ಹೊರಡುವ ಅವರು ಮಧ್ಯಾಹ್ನ 1.10ಕ್ಕೆ ದಾವಣಗೆರೆ ಜಿ.ಎಂ.ಐ.ಟಿ.ಹೆಲಿಪ್ಯಾಡ್
ತಲುಪಲಿದ್ದಾರೆ.
ಮಧ್ಯಾಹ್ನ 1.15 ಕ್ಕೆ ಹೆಲಿಪ್ಯಾಡ್‍ನಿಂದ ಹೊರಟು 1.30 ಕ್ಕೆ ಹರಿಹರದ
ಪಂಚಮಶಾಲಿ ಜಗದ್ಗುರು ಪೀಠ, ಹರಿಹರ ಇವರು ಆಯೋಜಿಸಿರುವ
ಬೃಹತ್ ಉದ್ಯೋಗ ಮೇಳ ಹಾಗೂ ರಾಷ್ಟ್ರೀಯ ಶಿಕ್ಷಣ ಕೌಶಲ್ಯ
ಮತ್ತು ಕೃಷಿ ಸಮಾವೇಶ ಕಾರ್ಯಕ್ರಮದಲ್ಲಿ ಭಾಗವಹಿಸುವರು.
ಮಧ್ಯಾಹ್ನ 3.30 ಕ್ಕೆ ಪಂಚಮಶಾಲಿ ಗುರುಪೀಠ ಹರಿಹರದಿಂದ ಹೊರಟು
ಮಧ್ಯಾಹ್ನ 3.35 ಕ್ಕೆ ಜಿ.ಎಂ.ಐ.ಟಿ ಹೆಲಿಪ್ಯಾಡ್ ಆಗಮಿಸಿ 3.45 ಕ್ಕೆ ಜಿ.ಎಂ.ಐ.ಟಿ.
ಹೆಲಿಪ್ಯಾಡ್‍ನಿಂದ ಬೆಂಗಳೂರಿಗೆ ತೆರಳಲಿದ್ದಾರೆ ಎಂದು
ಮುಖ್ಯಮಂತ್ರಿಗಳ ವಿಶೇಷ ಕರ್ತವ್ಯ ಅಧಿಕಾರಿ ಪ್ರಕಟಣೆಯಲ್ಲಿ
ತಿಳಿಸಿದ್ದಾರೆ.