ಹೊನ್ನಾಳಿ,21: ಕನ್ನಡ ಸಾಹಿತ್ಯ ಪರಿಷತ್‍ನ ರಾಜ್ಯಧ್ಯಾಕ್ಷ ಜೋಶಿಯವರು ತಮ್ಮ ಅವದಿಯಲ್ಲಿ ಒಂದು ಕೋಟಿಗೂ ಹೆಚ್ಚು ಪರಿಷತ್ತಿನ ಸದಸ್ಯರನ್ನು ಮಾಡುವ ಗುರಿ ಹೊಂದಿದ್ದು ಈವರೆಗೂ ಎರಡು ಸಾವಿರ ಸದಸ್ಯರು ಮಾತ್ರ ಇದ್ದು ಇದಕ್ಕಾಗಿ ಸದಸ್ಯತ್ವದ ಮೊತ್ತವನ್ನು 250 ರೂ.ಗಳಿಗೆ ಸಿಮೀತಗೊಳಿಸಿದೆ ಇದರ ಸದುಪಯೋಗ ಪಡೆದುಕೊಳ್ಳುವಂತೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮುರುಗೆಪ್ಪಗೌಡ ಹೇಳಿದರು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಹಾಗೂ ಎಜೆವಿಪಿ ಶಿಕ್ಷಣ ಮಹಾವಿದ್ಯಾಲಯದ ಆಶ್ರಯದಲ್ಲಿ ನಡೆದ ಮೂರು ದತ್ತಿ ಕಾರ್ಯಕ್ರಮಗಳನ್ನು ಉದ್ದೇಶಿಸಿ ಮಾತನಾಡಿದರು.
ಪರಿಷತ್‍ನ ಅಭಿವೃದ್ದಿ ಕಾರ್ಯಗಳಲ್ಲಿ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಸಹಕರಿಸಬೇಕೆಂದು ಅವರು ವಿದ್ಯಾರ್ಥಿಗಳಲ್ಲಿ ಪರಿಷತ್‍ನ ಅರಿವು ಹೆಚ್ಚಿಸಲು ಶಾಲಾ ಹಾಗೂ ಕಾಲೇಜು ಹಂತದ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ದೆ ಹಮ್ಮಿಕೊಳ್ಳಲಾಗುವುದು ಎಂದರು.
ಕುಂದೂರು ಪಂಚಾಕ್ಷರಯ್ಯ,ಕಮಲಮ್ಮ ಎಂಬುವರ ದತ್ತಿದಾನಿ ಎಂ.ಪಿ.ರೇಣುಕಾಚಾರ್ಯರ ತಮ್ಮ ತಂದೆ-ತಾಯಿಯ ದತ್ತಿಯಲ್ಲಿ ಶರಣರ ದೃಷ್ಟಿಯಲ್ಲಿ ಸಾಮಾಜಿಕ ಪ್ರಜ್ಞೆ ಎಂಬ ವಿಷಯವಾಗಿ ಪರಿಷತ್ತಿನ ಮಾಜಿ ಅಧ್ಯಕ್ಷ ಕೆ.ರುದ್ರಪ್ಪ ಮಾತನಾಡಿ ಶರಣರಲ್ಲಿನ ಸಮಾಜಿಕ ಪ್ರಜ್ಞೆಗೆ ಮುಖ್ಯ ಕಾರಣದ ಅಂಶವನ್ನು ವಿವರಿಸಿ ಇದಕ್ಕೆ ಉತ್ತೇಜನ,ಪ್ರೇರಣೆ ಅದರ ಹಿಂದಿನ ಶಕ್ತಿ ಇರುವದರ ಬಗ್ಗೆ ತಿಳಿಸಿ, 12ನೇ ಶತಮಾನದ ಎಲ್ಲಾರಿಗೂ ವಿಷಯ ತಲುಪುವಂತೆ ನದಿಯೋಪಾದಿಯಲ್ಲಿ ಶರಣದ ಸರಳ ನುಡಿಗಳು ಅರಿದು ಬಂದಿವೆ ಎಂದು ವಿವರಿಸಿದರು.
ದತ್ತಿ ದಾನಿ ಯಕ್ಕನಹಳ್ಳಿ ಸರೋಜನಮ್ಮ ಕರಿಬಸಪ್ಪನವರ ಹೆಸರಿನಲ್ಲಿ ಸಮಾಜಕ್ಕೆ ಕನಕದಾಸ ಕೊಡುಗೆ ವಿಷಯವಾಗಿ ವಿಶ್ರಾಂತ ಉಪನ್ಯಾಸಕ ಎಸ್.ಆರ್.ಹನುಮಂತಪ್ಪ ಮಾತನಾಡಿದರು.
ದತ್ತಿದಾನಿ ದಾವಣಗೆರೆ ಸುನಂದದೇವಿ ಸಂಗಮೇಶ್‍ರಗೌಡ ಇವರ ಶರಣರ ಜೀವನ ದರ್ಶನ ವಿಷಯವಾಗಿ ದಾವಣಗೆರೆ ಶಾಂತರಾಜ್ ಅವರು ಮಾತನಾಡಿದರು.
ಸಮಾಂಭದ ಅಧ್ಯಕ್ಷತೆಯನ್ನು ಉಪಪ್ರಾಂಶುಪಾಲ ಅಶೋಕ ಮಟ್ಟಿಮನಿ ವಹಿಸಿದ್ದರು.ಉದ್ಘಾಟನೆ ಎನ್.ಹೆಚ್. ಗೋವಿಂದಪ್ಪ ನೆರವೆರಿಸಿದರು.ಸಮಾರಂಭದಲ್ಲಿ ಪರಿಷತ್‍ನ ಮಾಜಿ ಅಧ್ಯಕ್ಷ ರೇವಣಪ್ಪ,ಮಾಗನೂರು ಉಪನ್ಯಾಸಕ ಶಾಂತರಾಜ್, ಬಸವರರಾಜಪ್ಪ,ಪಿ.ಎಂ.ಸಿದ್ದಯ್ಯ.ಕೆ.ಪಿ.ದೇವೇಂದ್ರಪ್ಪ,ಚನ್ನಬಸಯ್ಯ,ಧನಂಜಯ್ಯ,ಶಾರದಕಣಗಟಗಿ,ಬಿ.ಎನ್.ಮಹೇಶ್ವರಪ್ಪ,ಕುಂದೂರು ಬಸವರಾಜಪ್ಪ ಪರಿಷತ್‍ನ ಪದಾಧಿಕಾರಿಗಳು ಬಿಎಡ್ ಕಾಲೇಜಿನ ಪ್ರಶಿಕ್ಷಣಾರ್ಥಿಗಳು ಇದ್ದರು.

Leave a Reply

Your email address will not be published. Required fields are marked *