ಹೊನ್ನಾಳಿ-ಏ -21 ;- ಇಂದು ಹೊನ್ನಾಳಿ ತಾಲೂಕು ಎಸ್ಡಿಎಂಸಿ ಅಧ್ಯಕ್ಷರಾದ ಶಿವಲಿಂಗಪ್ಪ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ ರಾಜ್ಯ ಸರ್ಕಾರದ ಶಿಕ್ಷಣ ಸಚಿವರಾದ ನಾಗೇಶ್ ರವರು ಹೇಳಿಕೆ ಹಾಸ್ಯಸ್ಪದವಾಗಿದೆ ಸರ್ಕಾರ ಮಾಡಿರುವ ತಪ್ಪುಗಳನ್ನು ಮರೆಮಾಚಲು ಅಭಿವೃದ್ಧಿ ಕಳಪೆ ಗುಣಮಟ್ಟದ ಸಮವಸ್ತ್ರ ನೀಡಿರುವ ಎಸ್.ಡಿ.ಎಮ್.ಸಿ ಗಳ ದತ್ತಾಂಶ ಇದ್ದರೇ, ಬಿಡುಗಡೆ ಮಾಡಲಿ ಎಂದು ಹೇಳಿಕೆಯ ವಿರುದ್ದ ತಮ್ಮ ಹಂತದಲ್ಲಿ ಆಗಿರುವ ಹಗರಣವನ್ನು ಮರೆಮಾಚಲು ಸಚಿವರು ಎಸ್.ಡಿ.ಎಮ್.ಸಿಗಳ ಮೇಲೆ ಅನ್ಯತ ಆರೋಪ ಮಾಡುತ್ತಿದ್ದಾರೆ. ಸರ್ಕಾರಿ ಶಾಲೆಗಳಿಗೆ ಕೊಡುವಂತಹ 2ನೇ ಹಂತದ ಸಮವಸ್ತ್ರಗಳನ್ನು ಕೊಟ್ಟಿರುವುದಿಲ್ಲ. ಅನಾವಶ್ಯಕವಾಗಿ ಎಸ್.ಡಿ.ಎಮ್.ಸಿರವರ ಮೇಲೆ ಮೇಲನೋಟದಲ್ಲಿ ಖರೀದಿ ಮಾಡಿರುವ ಕಾರಣ ಕನಿಷ್ಟ 1 ವರ್ಷ ಮಕ್ಕಳು ಉಪಯೋಗಿಸಲು ಪ್ರಸ್ತಾವಾಗುತ್ತಿದ್ದು, ಸರ್ಕಾರ ಮಟ್ಟದಲ್ಲಿ ಖರೀದಿ ಮಾಡುವ ಸಮವಸ್ತ್ರ ಬಟ್ಟೆಯ ಕ್ವಾಲೀಟಿ ಬಗ್ಗೆ ಎಸ್.ಡಿ.ಎಮ್.ಸಿಗಳು ಮೊದಲಿನಿಂದಲೂ ಶಿಕ್ಷಣ ಸಚಿವರಿಗೆ ದೂರು ನೀಡುತ್ತಾ ಬಂದಿದ್ದರು ಸಹ ಈಗ ಸರ್ಕಾರದ ಮಟ್ಟದಲ್ಲಿ ನಡೆದಂತಹ ಯೂನಿಪಾರ್ಮ್ ಹಗರಣದ ತನಿಕೆಯ ದಿಕ್ಕನ್ನು ತಿರಿಗಿಸುವ ನಿಟ್ಟಿನಲ್ಲಿ ಸರ್ಕಾರಿ ಶಾಲೆಗಳ ಉಳುವಿಗೆ ಕಾರಣರಾದ ಪೋಷಕ ಪ್ರತಿನಿದಿಗಳ ಮೇಲೆ ಯಾವುದೇ ರೀತಿಯ ಆಧಾರ ರಹಿತ ಅಪವಾಧನೆಯನ್ನು
ತಗೆಯಬೇಕು. ಇಲ್ಲದಿದ್ದರೆ ಇದರ ಬಗ್ಗೆ ರಾಜ್ಯ ಜಿಲ್ಲಾ ಹಾಗೂ ತಾಲ್ಲೂಕು ಸಮನ್ವಯ ವೇದಿಕೆಯು ಹೋರಾಟಕ್ಕೆ ಕೈಜೊಡಿಸಬೇಕಾಗುತ್ತದೆ, ಎಂದು ಎಸ್.ಡಿ.ಎಮ್.ಸಿ ಸಮನ್ವಯ ವೇದಿಕೆಯ ಅಧ್ಯಕ್ಷರಾದ ಎ.ಎಸ್ ಶಿವಲಿಂಗಪ್ಪ, ಹಾಗೂ ರಾಜ್ಯ ಸಂಘಟನ ಕಾರ್ಯದರ್ಶಿಯಾದ ಎಲ್ ರುದ್ರನಾಯ್ಕ, ಹಾಗೂ ನ್ಯಾಮತಿ ತಾಲ್ಲೂಕು ಅಧ್ಯಕ್ಷರಾದ ರಾಜಶೇಖರ ಬಿ.ವಿ ಹಾಗೂ ಕಾರ್ಯದರ್ಶಿಯಾದ ಸತೀಶ ಕೆ ಬಿ ಹಾಗೂ ಸಂಘಟನಾ ಕಾರ್ಯದರ್ಶಿ ಎ.ಕೆ ರಮೇಶ ಸರ್ವ ಸದಸ್ಯರು ಎಲ್ಲರೂ ಸೇರಿದಂತೆ ರಾಜ್ಯದಲ್ಲಿ ಕಟ್ಟಡ ನಿರ್ಮಾಣ ಮಾಡಲಿಕ್ಕೆ ಮಂಜೂರಾಗಿದ್ದು, ಎಸ್.ಡಿ.ಎಮ್.ಸಿ ಯವರಿಗೆ ಬಿಟ್ಟು ಹೊರಗಿನವಿರಗೆ ಕಾಮಗಾರಿ ಕೊಟ್ಟ ವಿಚಾರ ಹಾಗೂ ಹೊನ್ನಾಳಿ ಮತ್ತು ನ್ಯಾಮತಿ ತಾಲ್ಲೂಕುನಲ್ಲಿ 43 ಶಾಲೆಗಳಲ್ಲಿ ನಡೆದ ಆಟದ ಸಾಮಾಗ್ರಿಗಳ ರೂ.50000/-ರೂಗಳ ಸರ್ಕಾರ ದೊಡ್ಡಮಟ್ಟದ ಹಣವನ್ನು ಕೊಟ್ಟಿದ್ದರೂ ಸಹ ಅದರ ಬದಲಾಗಿ ಕಡಿಮೆ ಮೊತ್ತದ 13500/- ರೂಗಳ ಆಟದ ಸಾಮಾಗ್ರಿಗಳನ್ನು ಒದಗಿಸಿ, ಉಳಿದ 36500/ ರೂಗಳನ್ನು ಸೇರಿ ಬಿಲ್ಲ ಮಾಡಿರುವ ಬಗ್ಗೆ ಶಿಕ್ಷಣ ಸಚಿವರ ಗಮನಕ್ಕೆ ತಂದರೂ ಸಹ . ಸಚಿವರಾಗಿ ನೀವು ಈ ರೀತಿ ಎಸ್.ಡಿ.ಎಮ್.ಸಿಗಳ ಮೇಲೆ ಆಪಾಧನೆ ಮಾಡುತ್ತಿರುವುದನ್ನು ನಾವುಗಳು ಅದನ್ನು ಖಂಡಿಸಿ ಈ ಹೇಳಿಕೆಯನ್ನು ವಾಪಸ್ ಪಡೆಯದಿದ್ದರೆ ಮುಂದಿನ ದಿನಮಾನಗಳಲ್ಲಿ ಉಗ್ರ ಹೋರಾಟವನ್ನು ರಾಜ್ಯ ಮಟ್ಟದಲ್ಲಿ ಹೋರಾಟ ಮಾಡಬೇಕಾಗುತ್ತದೆ ಎಂದು ರಾಜ್ಯ ಶಿಕ್ಷಣ ಸಚಿವರಿಗೆ ಎಚ್ಚರಿಕೆಯನ್ನು ತಿಳಿಸುವುದರ ಮೂಲಕ ಆಗ್ರಹಿಸಿ ರಾಜ್ಯಪಾಲರಿಗೆ ಈ ಮನವಿ ಪತ್ರವನ್ನು ಕಳಿಸಿಕೊಡುವಂತೆ ಒತ್ತಾಯಿಸಿ ಹೊನ್ನಾಳಿ ಉಪ ತಹಶೀಲ್ದಾರ್ ಸುರೇಶ್ ರವರಿಗೆ ಮನವಿ ಪತ್ರ ಸಲ್ಲಿಸಿದರು.
ಉಪಸ್ಥಿತಿಯಲ್ಲಿ ಶಿವಲಿಂಗಪ್ಪ ಹುಣಸಘಟ್ಟ ಎಸ್ ಡಿ ಎಂ ಸಿ ತಾಲೂಕ ಅಧ್ಯಕ್ಷರು ಬಿ ಸತೀಶ್ ತಾಲೂಕು ಪ್ರಧಾನ ಕಾರ್ಯದರ್ಶಿ ಉಮೇಶ್ ಎ ಕೆ ತಾಲೂಕು ಸಂಘಟನಾ ಕಾರ್ಯದರ್ಶಿ ರಾಜಶೇಖರ್ ಬಿವಿ ನ್ಯಾಮತಿ ತಾಲೂಕಿನ ಎಸ್ಡಿಎಂಸಿ ಅಧ್ಯಕ್ಷರು ರುದ್ರನಾಯಕ ರಾಜ್ಯ ಸಂಘಟನಾ ಕಾರ್ಯದರ್ಶಿ ಚಂದ್ರಶೇಖರ್ ಬೆನಕನಹಳ್ಳಿ ಇನ್ನು ಮುಂತಾದವರು ಸಹ ಭಾಗಿಯಾಗಿದ್ದರು.