ಕಾರ್ಯಕ್ರಮ

ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹಾಗೂ ಹೊನ್ನಾಳಿ
ಶಾಸಕರಾದ ಎಂ.ಪಿ. ರೇಣುಕಾಚಾರ್ಯ ಅವರು. ಏ.22 ರಿಂದ ಏ.26 ರವರೆಗೆ
ಜಿಲ್ಲೆಯಲ್ಲಿ ಪ್ರವಾಸ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.
   ರೇಣುಕಾಚಾರ್ಯ ಅವರು ಶು.22 ರಂದು ಬೆಂಗಳೂರು ನಿಂದ
ಹೊರಟು ರಾ.08ಕ್ಕೆ ಹೊನ್ನಾಳಿ ಪ್ರಯಾಣ ಮತ್ತು ವಾಸ್ತವ್ಯ
ಮಾಡುವರು.
     ಏ.23 ರಂದು ಬೆ.10.30ಕ್ಕೆ ನ್ಯಾಮತಿ ಪಟ್ಟಣದಲ್ಲಿ ಖಾಸಗಿ
ಕಾರ್ಯಕ್ರಮದಲ್ಲಿ ಭಾಗವಹಿಸುವರು. ಬೆ.11.15ಕ್ಕೆ ಹರಿಹರದ
ಪಂಚಮಸಾಲಿ ಜಗದ್ಗುರು ಪೀಠ,ಹರಿಹರ ಇವರು ಆಯೋಜಿಸಿರುವ
ಬೃಹತ್ ಉದ್ಯೋಗ ಮೇಳ ಹಾಗೂ ರಾಷ್ಟ್ರೀಯ ಶಿಕ್ಷಣ ಕೌಶಲ್ಯ
ಮತ್ತು ಕೃಷಿ ಸಮಾವೇಶ ಕಾರ್ಯಕ್ರಮದಲ್ಲಿ ಭಾಗವಹಿಸುವರು.
ಮ.02ಕ್ಕೆ ಹೊನ್ನಾಳಿಗೆ ಪ್ರಯಾಣ ಮತ್ತು ಸಾರ್ವಜನಿಕರ
ಕುಂದುಕೊರತೆಗಳನ್ನು ಅಹ್ವಾಲುಗಳನ್ನು ಸ್ವೀಕರಿಸುವರು.
ಸ.5.30 ರಿಂದ ರಾ.11.30ರ ವರೆಗೆ ವಿವಿಧ ಖಾಸಗಿ ಕಾರ್ಯಕ್ರಮದಲ್ಲಿ
ಭಾಗವಹಿಸುವರು.
     ಏ.24 ರಂದು ಬೆ.10 ರಿಂದ ಸ.04 ರವರೆಗೆ ಹೊನ್ನಾಳಿ ನ್ಯಾಮತಿ
ತಾಲ್ಲೂಕುಗಳ ವ್ಯಾಪ್ತಿಯ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ,
ಸ್ಥಳೀಯ ಕಾರ್ಯಕ್ರಮಗಳಲ್ಲಿ ಭಾಗವಹಿಸುವರು. ಸ.04.30ಕ್ಕೆ
ನೆಲಹೊನ್ನೆ ಗ್ರಾಮದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಜಯಂತಿ
ಕಾರ್ಯಕ್ರಮದಲ್ಲಿ ಭಾಗವಹಿಸುವರು. ರಾ.07.30ಕ್ಕೆ ಹೊನ್ನಾಳಿಗೆ
ಪ್ರಯಾಣ ಮತ್ತು ವಾಸ್ತವ್ಯ.
     ಏ.25 ರಂದು 10.30ಕ್ಕೆ ಹೊನ್ನಾಳಿ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆ
ಆವರಣದಲ್ಲಿ ತಾಲ್ಲೂಕು ಮಟ್ಟದ ಆರೋಗ್ಯ ಮೇಳದ ಉದ್ಘಾಟನೆ
ನೆರವೇರಿಸುವುದು. ಬೆ.11.30ಕ್ಕೆ ಹೊನ್ನಾಳಿ ನ್ಯಾಮತಿ ತಾಲ್ಲೂಕುಗಳ
ವ್ಯಾಪ್ತಿಯ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ, ಸ್ಥಳೀಯ
ಕಾರ್ಯಕ್ರಮಗಳಲ್ಲಿ ಭಾಗವಹಿಸುವ ನಂತರ ಹೊನ್ನಾಳಿಗೆ
ಪ್ರಯಾಣ ಮತ್ತು ವಾಸ್ತವ್ಯ.
     ಏ.26 ರಂದು ಬೆ.11ಕ್ಕೆ ಹೊನ್ನಾಳಿ ತಾಲ್ಲೂಕು ಪಂಚಾಯಿತಿ
ಸಭಾಂಗಣದಲ್ಲಿ ಹೊನ್ನಾಳಿ ಮತ್ತು ನ್ಯಾಮತಿ ತಾಲ್ಲೂಕು ಮಟ್ಟದ
ಅಧಿಕಾರಿಗಳ ಸಭೆ ನಡೆಸುವರು ನಂತರ ರಾ.08ಕ್ಕೆ ಬೆಂಗಳೂರಿಗೆ
ಪ್ರಯಾಣ ಬೆಳೆಸುವರು ಎಂದು ವಿಶೇಷ ಕರ್ತವ್ಯಾಧಿಕಾರಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You missed