ನ್ಯಾಮತಿ : ಚಾರಣ ಮಾಡುವುದರಿಂದ ಮಕ್ಕಳಲ್ಲಿ ಪರಿಸರಾಸಕ್ತಿ ಮೂಡುವುದರ ಜೊತೆಗೆ ಆರೋಗ್ಯ ವೃದ್ದಿಯಾಗಲಿದೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಹೇಳಿದರು.
ತಾಲೂಕಿನ ಕೊಡತಾಳು ಗುಡ್ಡದಲ್ಲಿ ಯೂತ್ ಹಾಸ್ಟಲ್ ಆಫ್ ಶಿವಮೊಗ್ಗ ವತಿಯಿಂದ ಹಮ್ಮಿಕೊಂಡಿದ್ದ ಚಾರಣಕ್ಕೆ ಹಸಿರು ನಿಶಾನೆ ತೋರಿಸಿ ಅವರು ಮಾತನಾಡಿದರು.
ಚಾರಣ ಎನ್ನುವ ಹವ್ಯಾಸ ದೇಹಕ್ಕೆ ಮನಸ್ಸಿಗೆ ಆರೋಗ್ಯಕ್ಕೆ ಸಹಕಾರಿಯಾಗಲಿದೆ ಎಂದ ರೇಣುಕಾಚಾರ್ಯ, ಚಾರಣ ಪ್ರಿಯರು ಪ್ರಕೃತಿ ಸೌಂದರ್ಯವನ್ನು ಆನಂದಿಸುವುದರ ಜೊತೆಗೆ ಸುರಕ್ಷಿತವಾಗಿರುವಂತೆ ಕಿವಿ ಮಾತು ಹೇಳಿದರು.
ಚಾರಣ ಪ್ರಿಯರು ಪ್ರಕೃತಿ ಸೌಂದರ್ಯ ಸವಿಯಲೆಂದು ಕಾಡು ಮೇಡು ಸುತ್ತಾಡುವುದರಿಂದ ಅವರಲ್ಲಿ ಧೈರ್ಯ, ಸಾಹಸ, ಆತ್ಮವಿಶ್ವಾಸ, ನಾಯಕತ್ವ ಬೆಳೆಸುವಲ್ಲಿ ಚಾರಣ ಅನುಕೂಲವಾಗಲಿದೆ ಎಂದರು.
ಚಾರಣ ಮಾಡುವುದರಿಂದ ಆರೋಗ್ಯ ಭಾಗ್ಯ ದೊರೆಯಲಿದ್ದು ಚಾರಣದಿಂದ ಹತ್ತಾರು ಬಗೆಯ ಅನುಕೂಲವಾಗಲಿದೆ ಎಂದರು.
ಆಧುನೀಕತೆ ಬೆಳೆದಂತೆ ಮಕ್ಕಳಲ್ಲಿ ಪರಿಸರಾಸಕ್ತಿ ಕಡಿಮೆಯಾಗುತ್ತಿದ್ದು ಮಕ್ಕಳಲ್ಲಿ ಪರಿಸರದ ಬಗ್ಗೆ ಜಾಗೃತಿ ಮೂಡಿಸಲು ಚಾರಣ ಅನುಕೂಲವಾಗಲಿದೆ ಎಂದ ರೇಣುಕಾಚಾರ್ಯ, ಮಕ್ಕಳು ಇದರ ಸದುಪಯೋಗ ಪಡೆದುಕೊಳ್ಳಿ ಎಂದರು.
ಯೂತ್ ಹಾಸ್ಟಲ್‍ವತಿಯಿಂದ 10 ರಿಂದ 15 ವರ್ಷದ ಒಳಗಿನ ಮಕ್ಕಳಿಗೆ ಚಾರಣ ಹಮ್ಮಿಕೊಂಡಿದ್ದು ಸುಮಾರು ಏಳು ಕಿಲೋ ಮೀಟರ್ ಕೊಡತಾಳ್ ಗುಡ್ಡವನ್ನು ಮಕ್ಕಳು ಏರಲಿದ್ದು ಜಾಗೃತಿಯಿಂದ ಚಾರಣ ಮಾಡುವಂತೆ ತಿಳಿ ಹೇಳಿದರು.
ಯೂತ್ ಹಾಸ್ಟ್‍ಲ್ ವತಿಯಿಂದ ಈಗಾಗಲೇ ಸಾಕಷ್ಟು 70 ಕ್ಕೂ ಹೆಚ್ಚು ಕಡೆ ಚಾರಣ ಮಾಡಿದ್ದು, ಇಂದು ಕೊಡತಾಳು ಗುಡ್ಡದಲ್ಲಿ ಚಾರಣ ಹಮ್ಮಿಕೊಂಡಿದ್ದು ಚಾರಣ ಯಶಸ್ವಿಯಾಗಲಿ ಎಂದರು.
ಯುವಕರು ಮುಂದಿನ ದಿನಗಳಲ್ಲಿ ಹಿಮಾಲಯ ಪರ್ವತ ಏರ ಮುಂದಾಗಿದ್ದು ಇದರಲ್ಲಿ ಯಶಸ್ವಿಯಾಗಿ ಶಿವಮೊಗ್ಗ ಜಿಲ್ಲೆಗೆ ಮಾತ್ರವಲ್ಲದೇ ರಾಜ್ಯಕ್ಕೆ ಕೀರ್ತಿತರಲಿ ಎಂದರು.
ಈ ಸಂದರ್ಭ ಯೂತ್ ಹಾಸ್ಟೆಲ್ ಚೇರ್ಮನ್ ವಾಗೀಶ್, ಹರೀಶ್ ಪಂಡಿತ್, ಸುರೇಶ್, ಪ್ರಶಾಂತ್, ದೊರೆಯ್ಯ, ಸರ್ಕಲ್ ಇನ್ಸ್‍ಪೆಕ್ಟರ್ ದೇವರಾಜ್ ಸೇರಿದಂತೆ ಮತ್ತಿತತರಿದ್ದರು.