ಡಾ! ಬಿಆರ್ ಅಂಬೇಡ್ಕರ್ ಅವರನ್ನು ಒಂದು ಜಾತಗೆ ಸೀಮಿತ ಮಾಡದೇ ಅವರು ಎಲ್ಲ ಜನಾಂಗದವರಿಗೂ ಸೇರಿದ ವ್ಯಕ್ತಿಯಾಗಿದ್ದಾರೆ ಅವರು ಹುಟ್ಟಿನಿಂದ ಬಾಲ್ಯ ಕಳೆದು ಹೆಚ್ಚಿನ ವಿದ್ಯಾಭ್ಯಾಸ ಮಾಡಿದರು ಸಹ ಮೇಲ್ವರ್ಗದವರ ದಬ್ಬಾಳಿಕೆ ದೌರ್ಜನ್ಯಕ್ಕೆ ಒಳಗಾದವರು ಎಂದು ಹೊನ್ನಾಳಿಯ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕ ಎಂ ಸಿ ಮೋಹನ್ ಕುಮಾರ್ ತಿಳಿಸಿದರು.
ಅವರು ಬುಳ್ಳಾಪುರ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಡಾ. ಬಿಆರ್ ಅಂಬೇಡ್ಕರ್ ಜಯಂತಿ ಹಾಗೂ ಅಂಬೇಡ್ಕರ್ ಯುವಕ ಸಂಘದ ನಾಮಫಲಕ ಅನಾವರಣಗೊಳಿಸಿ ಮಾತನಾಡಿ ಅಂಬೇಡ್ಕರ್ ಅವರು ಎಲ್ಲ ಜನಾಂಗದವರಿಗೂ 18 ವರ್ಷದ ಮೇಲ್ಪಟ್ಟವರಿಗೆ ಮತದಾನ ಮಾಡುವ ಅವಕಾಶವನ್ನುಅವರನ್ನು ನೀಡಿದವರು ಸಂವಿಧಾನ ರಚನೆ ಮಾಡಿ ಸಂವಿಧಾನಶಿಲ್ಪಿ ವಿಶ್ವ ರತ್ನ ದಲಿತರ ಸೂರ್ಯ ಮುಂತಾದ ಬಿರುದುಗಳನ್ನು ಸಹ ಪಡೆದಿದ್ದು ದೀನದಲಿತರ ಮಹಿಳೆಯರ ಹಾಗೂ ಎಲ್ಲಾ ಜನಾಂಗದವರ ಏಳಿಗೆಗೆ ಕಾನೂನು ರಚನೆಯಲ್ಲಿ ಅವಕಾಶ ಕಲ್ಪಿಸಿದ್ದಾರೆ
ದಲಿತರು ಶಿಕ್ಷಣದಿಂದ ಸಂಘಟನೆಯಾಗಿ ಹೋರಾಟದ ಮೂಲಕ ತಮ್ಮ ಸೌಲಭ್ಯಗಳನ್ನು ಪಡೆಯುವಂತಾಗಬೇಕು ಶಿಕ್ಷಣ ಎಂಬುದು ಹುಲಿಯ ಹಾಲಿದ್ದಂತೆ ಅದನ್ನ ಕುಡಿದವನು ಹುಲಿಯಂತೆ ಘರ್ಜಿಸುತ್ತಾ ನೆ ಶಿಕ್ಷಣ ಪಡೆದವನು ಅನ್ಯಾಯದ ವಿರುದ್ಧ ಸ್ವಾಭಿಮಾನದಿಂದ ಹೋರಾಡುತ್ತಾನೆ ಎಂದು ಮೋಹನ್ ತಿಳಿಸಿದರು.
ಜಿಲ್ಲಾ ಬಿಎಸ್ ಪಿ. ಜಿಲ್ಲಾ ಅಧ್ಯಕ್ಷ ಹನುಮಂತಪ್ಪ ಡಿ ಮಾತನಾಡಿ ಬಾಬು ಜಗಜೀವನ್ ರಾಂ ಅವರು ಸಹ ಅಂಬೇಡ್ಕರ್ ಅವರಂತೆಯೇ ದೀನದಲಿತರ ಏಳಿಗೆಗಾಗಿ ಹೋರಾಟ ಮಾಡುತ್ತಾ ಸಂಸದರಾಗಿ ರಾಷ್ಟ್ರಪತಿ ಯಾಗಿ ಹಾಗೂ 50 ವರ್ಷಗಳ ಸುದೀರ್ಘ ಮಂತ್ರಿಗಳಾಗಿ ಸಂಸದರಾಗಿ ರಾಜಕೀಯ ಕೆಲಸ ಮಾಡಿದ್ದಾರೆ.
ಹೊನ್ನಾಳಿ ಅವಳಿ ತಾಲೂಕಿನ ಶಾಸಕ ಎಂ ಪಿ ರೇಣುಕಾಚಾರ್ಯ ಪರಿಶಿಷ್ಟ ಜಾತಿ ಸೌಲಭ್ಯ ಪಡೆಯಲು ಪ್ರಮಾಣಪತ್ರವನ್ನು ಪಡೆದಿದ್ದು ನಾವು ಊಟ ಮಾಡುವ ತಟ್ಟೆಯಲ್ಲಿ ಕೈ ಹಾಕಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು
ಈ ಭಾಗದ ಎಲ್ಲಾ ಜನರು ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಅವರಿಗೆ ತಕ್ಕ ಪಾಠ ಕಲಿಸಬೇಕು ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ರಘು ಆರ್. ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಂಗನಾಥ್ ವಕೀಲ ತಿಮ್ಮೆಶ್ ಮಾತನಾಡಿದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೇಖಾ ಹಾಲೇಶ್. ಉಪಾಧ್ಯಕ್ಷ ಶ್ರೀನಿವಾಸ್. ಸದಸ್ಯರಾದ ಮಹಿ ಬುಲ್ಲ. ತಾಲೂಕ ಬಿಎಸ್ಪಿ ಉಪಾಧ್ಯಕ್ಷ ಕುಬೇರ ಆರ್. ಇತರರು ಪಾಲ್ಗೊಂಡಿದ್ದರು.