ನ್ಯಾಮತಿ : ಗ್ರಾಮ ಪಂಚಾಯಿತಿಗಳು ಮನಸು ಮಾಡಿದರೇ ಹಳ್ಳಿಗಳನ್ನು ನಗರಕ್ಕಿಂತ ಹೆಚ್ಚು ಅಭಿವೃದ್ದಿ ಮಾಡ ಬಹುದೆಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಹೇಳಿದರು.
ತಾಲೂಕಿನ ಕೆಂಚಿಕೊಪ್ಪ ಹಾಗೂ ಬೆಳಗುತ್ತಿ ಗ್ರಾಮ ಪಂಚಾಯಿತಿಗಳ ಸಂಯುಕ್ತಾಶ್ರದಲ್ಲಿ ಹಮ್ಮಿಕೊಂಡಿದ್ದ ಪಂಚಾಯತ್ ರಾಜ್ ದುವಸ್ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
1992 ರಲ್ಲಿ ಕಲಂ 73 ಅನ್ನು ತಿದ್ದುಪಡಿ ಮಾಡಿದ ಸರ್ಕಾರ ಗ್ರಾಮೀಣಾಭಿವೃದ್ದಿಗೆ ಹೆಚ್ಚು ಅವಕಾಶ ಮಾಡಿಕೊಟ್ಟಿದ್ದು, ಕಲಂ ತಿದ್ದುಪಡಿಯಾದ ಏ.24 ರಂದು ದೇಶದಾಧ್ಯಂತ ಪಂಚಾಯತ್ ರಾಜ್ ದಿವಸವನ್ನಾಗಿ 2010 ರಿಂದ ಆಚರಿಸಿಕೊಂಡು ಬರಲಾಗುತ್ತಿದೆ ಎಂದರು.
ಗ್ರಾಮ ಪಂಚಾಯಿತಿಗಳನ್ನು ಬಲ ಪಡಿಸಿ ಅವುಗಳನ್ನು ಸ್ವಾವಲಂಬಿಗಳನ್ನಾಗಿ ಮಾಡ ಬೇಕೆಂದು ಸರ್ಕಾರ ಚಿಂತನೆ ನಡೆಸಿದೇ ಎಂದ ರೇಣುಕಾಚಾರ್ಯ ಸದ್ಯದರಲ್ಲೇ ಅದು ಕಾರ್ಯರೂಪಕ್ಕೆ ಬರಲಿದೆ ಎಂದರು.
ರಾಜ್ಯ ಸರ್ಕಾರ ಸಾಮಾಜಿಕ, ಆರ್ಥಿಕತೆ ಸೇರಿದಂತೆ ಒಂಬತ್ತು ಸುಸ್ಥಿರ ಅಭಿವೃದ್ದಿ ಗುರಿಯೊಂದಿಗೆ ಅನೇಕ ಯೋಜನೆಗಳನ್ನು ಕೈಗೊಂಡು ಹಳ್ಳಿಗಳ ಸಮಗ್ರ ಅಭಿವೃದ್ದಿಗೆ ಶ್ರಮಿಸುತ್ತಿದೆ ಎಂದರು.
ಇಂದು 13 ನೇ ಪಂಚಾಯತ್ ರಾಜ್ ದಿವಸ್ ಅನ್ನು ಆಚರಣೆ ಮಾಡಲಾಗುತ್ತಿದೆ ಎಂದ ಶಾಸಕರು, ಪಂಚಾಯಿತಿಗಳು ಸ್ವಚ್ಚತೆಗೆ ಹೆಚ್ಚಿನ ಒತ್ತು ನೀಡ ಬೇಕೆಂದು ಕಿವಿ ಮಾತು ಹೇಳಿದರು.
ಅವಳಿ ತಾಲೂಕಿನ ಪ್ರತಿಯೊಂದು ಗ್ರಾಮ ಪಂಚಾಯಿತಿಗಳಲ್ಲೂ ಘನತ್ಯಾಜ್ಯ ವಿಲೇವಾರಿ ಘಟಕಗಳನ್ನು ನಿರ್ಮಾಣ ಮಾಡಲಾಗುತ್ತಿದ್ದು ಜನರು ಗ್ರಾಮ ಪಂಚಾಯಿತಿಗಳೊಂದಿಗೆ ಕೈಜೋಡಿಸುವ ಮೂಲಕ ಹಳ್ಳಿಗಳನ್ನು ಸ್ವಚ್ಚವಾಗಿಟ್ಟುಕೊಳ್ಳುವಂತೆ ಕಿವಿ ಮಾತು ಹೇಳಿದರು.
ಗ್ರಾಮ ಪಂಚಾಯಿತಿಗಳಿಗೆ ಸರ್ಕಾರದಿಂದ ಸಾಕಷ್ಟು ಅನುದಾನ ಬರುತ್ತಿದ್ದು ಇದನ್ನು ಬಳಸಿಕೊಂಡು ಗ್ರಾಮಗಳನ್ನು ಅಭಿವೃದ್ದಿ ಮಾಡುವಂತೆ ಸಲಹೆ ನೀಡಿದರು.
ಈ ಸಂದರ್ಭ ಇಓ ರಾಮಬೋವಿ, ಗ್ರಾ.ಪಂ ಅಧ್ಯಕ್ಷರಾದ ಪ್ರಕಾಶ್.ಬಿ.ವಿ, ಬೆಳಗುತ್ತಿ ಗ್ರಾ.ಪಂ ಅಧ್ಯಕ್ಷರಾದ ಪ್ರೇಮಾ ಉಪಾದ್ಯಕ್ಷರು ಗುತ್ಯಮ್ಮ ಅಶೋಕ್, ಬೆಳಗುತ್ತಿ ಉಪಾಧ್ಯಕ್ಷರಾದ ಚಂದ್ರಪ್ಪ, ಸದಸ್ಯರಾದ ವಿರೇಶ್, ತಿಮ್ಮೇಶ್, ಕಾವೇರಿ, ಕವಿತಾ, ಲಕ್ಷ್ಮಮ್ಮ,ಗಿರೀಶ್, ಶಿಲ್ಪಾ, ಚಂಧ್ರಮ್ಮ ಜಾನಮ್ಮ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳಿದ್ದರು.