ಹೊನ್ನಾಳಿ;-ಏ-25;- ಪಟ್ಟಣದಲ್ಲಿರುವ ದೇವನಾಯಕನಹಳ್ಳಿ ಗ್ರಾಮದಲ್ಲಿರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ ದೇವನಾಯಕನಹಳ್ಳಿಯಲ್ಲಿರುವ ನಿವೃತ್ತ ಸರ್ಕಾರಿ ನೌಕರರ ಸಂಘದ ಸಭಾ ಭವನದಲ್ಲಿ ಇಂದು ಪ್ರಥಮ ಬಾರಿಗೆ ಈ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಸನ್ಮಾನ್ಯ ಶ್ರೀ ಬಿ ಎಚ್ ಕುಮಾರ್ ರವರನ್ನು ಮತ್ತು ಉಪಾಧ್ಯಕ್ಷರಾಗಿ ಡಿ ಎಂ ವಿನೋದ್ ರವರರನ್ನು ಆಯ್ಕೆ ಮಾಡಲಾಯಿತು.
ನೂತನ ಸಹಕಾರ ಸಂಘದ ಅಧ್ಯಕ್ಷರಾಗಿ ಆಯ್ಕೆಯಾದ ಬಿಎಚ್ ಕುಮಾರ್ ನಂತರ ಮಾತನಾಡಿ ನನಗೆ ಈ ಸಹಕಾರ ಸಂಘಕ್ಕೆ ಅಧ್ಯಕ್ಷರಾಗಿ ಆಯ್ಕೆ ಮಾಡಲಿಕ್ಕೆ ಪ್ರತ್ಯಕ್ಷವಾಗಿ-ಪರೋಕ್ಷವಾಗಿ ಸಹಕಾರ ನೀಡಿದ ಮುಖಂಡರುಗಳಿಗೆ ಹಾಗೂ ಶೇರುದಾರರಿಗೆ ಮತ್ತು ನಿರ್ದೇಶಕರುಗಳಿಗೆ ಼ಹಾಗೂ ಆತ್ಮೀಯ ಸ್ನೇಹಿತರು ಗಳಿಗೂ ಸಹ ಧನ್ಯವಾದಗಳನ್ನು ತಿಳಿಸುತ್ತಾ ಮಾತನ್ನು ಮುಂದುವರಿಸಿ, ನಮ್ಮ ಈ ಕೃಷಿಪತ್ತಿನ ಸಹಕಾರ ಸಂಘವು ಪ್ರಾರಂಭವಾಗಿ ಕೇವಲ 11 ತಿಂಗಳಾಗಿದೆ ಅಲ್ಪ ಅವಧಿಯಲ್ಲಿ ಸಾವಿರದ ಮುನ್ನೂರು(1300)ಶೇರುದಾರರನ್ನು ಹೊಂದಿದೆ. ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿಯಮಿತ ಈ ಸಹಕಾರ ಸಂಘಕ್ಕೆ ಸುಮಾರು ಆರು ಗ್ರಾಮಗಳು ಬರುತ್ತವೆ. ಅದರಲ್ಲಿ ಬಿದರಗಡ್ಡೆ ಗ್ರಾಮ ಮಾದಾಪುರ ‌,ದಿಡಗೂರು ,ಹರಳಹಳ್ಳಿ ಸುಂಕದಕಟ್ಟೆ ದೇವನಾಯಕನಹಳ್ಳಿ ಸೇರಿದಂತೆ ಗ್ರಾಮಗಳು ಒಳಪಟ್ಟಿವೆ. ಮೊದಲನೇದಾಗಿ ನಾನು ಅಧ್ಯಕ್ಷರಾದ ನಂತರ ಆರು ಗ್ರಾಮಗಳಿಗೆ ಭೇಟಿ ನೀಡಿ ನಾನು ಮತ್ತು ಉಪಾಧ್ಯಕ್ಷರು ಸೇರಿದಂತೆ ರೈತರುಗಳಿಂದ ಶೇರು ಹಾಕಿಸುವುದರ ಜೊತೆಗೆ ರೈತರುಗಳ ಜಮೀನಿಗೆ ಅನುಸಾರವಾಗಿ ಸರ್ಕಾರದಿಂದ ಹಾಗೂ ನಬಾರ್ಡ್ ಯೋಜನೆಯಿಂದ ಸಾಲವನ್ನು ಪಡೆದು ರೈತರುಗಳಿಗೆ ಜೀರೋ ಪರ್ಸೆಂಟ್ ರೂಪದಲ್ಲಿ ಈ ಸಹಕಾರ ಸಂಘದ ಮೂಲಕ ಒದಗಿಸಲಾಗುವುದು. ಇದರ ಜೊತೆಗೆ ಈ ನಮ್ಮ ಸಹಕಾರ ಸಂಘಕ್ಕೆ ಸೇರಿದ ವ್ಯಾಪ್ತಿಯ ಹಳ್ಳಿಗಳು ಸೇರಿದಂತೆ ಎಲ್ಲ ರೈತರುಗಳು ನೇರವಾಗಿ ನಮ್ಮ ಸಹಕಾರ ಸಂಘಕ್ಕೆ ಬಂದು ಸಲಹೆ-ಸೂಚನೆಗಳನ್ನು ಪಡೆದುಕೊಳ್ಳುವುದರ ಮೂಲಕ ನಿಮ್ಮೆಲ್ಲರ ಸಹಕಾರದಿಂದ ಈ ಸಹಕಾರ ಸಂಘವನ್ನು ಉನ್ನತ ಮಟ್ಟದಲ್ಲಿ ತೆಗೆದುಕೊಂಡು ಹೋಗೋಣ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಉಪಾಧ್ಯಕ್ಷರಾದ ಡಿ ಎಂ ವಿನೋದ್ ಅವರು ಮಾತನಾಡಿ ಅಧ್ಯಕ್ಷರಾದ ಬಿಎಚ್ ಕುಮಾರ್ ಅವರು ಮತ್ತು ಉಪಾಧ್ಯಕ್ಷರಾಗಿ ನಾನು ಈ ಸಹಕಾರ ಸಂಘಕ್ಕೆ ಮತ್ತು ರೈತರ ಪರ ಕಾಳಜಿಯನ್ನು ವಹಿಸಿ ಹಗಲು ಇರುಳು ಎನ್ನದೆ ದುಡಿದು ಸರ್ಕಾರದಿಂದ ಬರುವ ಯೋಜನೆಗಳನ್ನು ರೈತರುಗಳಿಗೆ ಕೊಡಿಸುವಂತೆ ಪ್ರಾಮಾಣಿಕ ವಾಗಿ ಕೆಲಸವನ್ನು ಮಾಡುತ್ತೇವೆ ಎಂದು ತಿಳಿಸಿದರು .
ಉಪಸ್ಥಿತಿಯಲ್ಲಿ ;-ಅಧ್ಯಕ್ಷರಾದ ಬಿಎಚ್ ಕುಮಾರ್, ಉಪಾಧ್ಯಕ್ಷರಾದ ಡಿ ಎಂ ವಿನೋದ್, ಹಿರಿಯರಾದ ಗೋಪಾಲಪ್ಪ,ದಿಡಗೂರು, ನಿರ್ದೇಶಕರುಗಳಾದ ಬಿಎಚ್ ಗಣೇಶ್, ಡಿ ಕೆ ಚಂದ್ರಪ್ಪ ,ಎ ಪಿ ಗುರುಬಸಪ್ಪ, ಎ ಜಿ ಪ್ರಕಾಶ್, ಡಿ ಬಿ ಮಹೇಂದ್ರ ಬಿದರಗಡ್ಡೆ, ಪರಮೇಶ್ವರಪ್ಪ ಎ ಕೆ, ರಮೇಶ್ ಓಕೆ ,ಮಲ್ಲೇಶಪ್ಪ ಟಿ, ಮಾರುತಿ ಎಸ್ ಎಚ್, ಸುಶೀಲಮ್ಮ ಶಿವಮೂರ್ತಪ್ಪ ಹಾಗೂ ಶೇರುದಾರರ ಆದ ಡಿಎಂ ಸುರೇಶ್, ಬಿದರಗಡ್ಡಿ ಬಿ ಎಚ್ ನಾಗಣ್ಣ, ಸುತ್ತಮುತ್ತಲ ಗ್ರಾಮಸ್ಥರು ಹಾಗೂ ಶೇರುದಾರರು ಸಹ ಭಾಗಿಯಾಗಿದ್ದರು.

Leave a Reply

Your email address will not be published. Required fields are marked *