ಹೊನ್ನಾಳಿ,25: ಕೋವಿಡ್ ಸಂಕಷ್ಟ ಸಮಯದಲ್ಲಿ ನೆಚ್ಚಿನ ಪ್ರಧಾನಿ ನರೇಂದ್ರ ಮೋದಿಯವರ ಮುಂದಾಲೋಚನೆ ಹಾಗೂ ಮುಂಜಾಗ್ರತೆಯಿಂದಾಗಿ ಅಪಾರ ಪ್ರಮಾಣದಲ್ಲಿ ಆಗಬೇಕಿದ್ದ ಸಾವು ನೋವುಗಳು ತಪ್ಪಿತ್ತು ಎಂದು ಶಾಸಕ ಎಂ.ಪಿ.ರೇಣುಕಾಚಾರ್ಯ ಹೇಳಿದರು.
75 ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ ಅಂಗವಾಗಿ ತಾಲೂಕು ಆಡಳಿತ,ತಾ.ಪಂ.ಪುರಸಭೆ,ತಾಲೂಕು ಆಸ್ಪತ್ರೆ ಹಾಗೂ ತಾಲೂಕು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಚೇರಿ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮೊದಲನೇ ಹಾಗೂ ಎರಡನೇ ಕರೊನಾ ಅಲೆಯಲ್ಲಿ ಇಡೀ ವಿಶ್ವವೇ ಕಂಗಲಾಗಿದ್ದಾಗ ನಮ್ಮ ಪ್ರಧಾನಿ ಇಡೀ ದೇಶದ ಜನತೆಗೆ ಆತ್ಮಸ್ಥೈರ್ಯ ತುಂಬಿ ಸಾಮಾಜಿಕ ಅಂತರ,ಮಾಸ್ಕ್ ಕಡ್ಡಾಯ ಲಾಕ್‍ಡೌನ್ ಸೇರಿದಮತೆ ಅನೇಕ ಮುಂಜಾಗ್ರತೆಗಳನ್ನು ಮಾಡಿದ್ದರಿಂದ ಬಾರಿ ಸಂಖ್ಯೆಯಲ್ಲಿ ಆಗಬೇಕಿದ್ದ ಸಾವು ನೋವುಗಳು ತಪ್ಪಿದ್ದವು ಇದ್ದು ಅಚ್ಛೆ ದಿನ ಅಲ್ಲವೇ ಎಂದು ಪ್ರಶ್ನಿಸಿದ ಅವರು,ಮೋದಿ ಅಧಿಕಾರ ವಹಿಸಿಕೊಂಡ ನಂತರ ಗುರುತರವಾದ ಹಲವು ಯೋಜನೆಗಳನ್ನು ಜಾರಿಗೆ ತಂದು ನೇರ ರೈತರು,ನೇಕಾರರು,ಕೂಲಿ ಕಾಮಿಕರು ಸೇರಿದಮತೆ ಅನೇಕ ವಲಯಗಳಲ್ಲಿ ಸಾಮನ್ಯ ಜನತೆಗೆ ಯೋಜನೆಗಳನ್ನು ತಲುಪಿಸಿದ್ದು ಅಚ್ಛೇ ದಿನ ಅಲ್ಲವೇನು ಎಂದರು.
ಕರೊನಾ ಸಂದರ್ಭದಲ್ಲಿ ಇಡೀ ದೇಶ ಮೋದಿಯವರ ಆದೇಶ ಹಾಗೂ ಅವರ ಮನವಿಗೆ ಸ್ಪಂದಿಸಿ ಕರೊನಾ ಕಡಿಮೆ ಆಗಲಿಕ್ಕೆ ಒತ್ತು ನೀಡುತ್ತಿದ್ದರೆ ಇತ್ತ ವಿಪಕ್ಷಗಳು ಮುಗ್ದ ಜನರನ್ನು ದಾರಿ ತಪ್ಪಿಸುವುದಕ್ಕೆ ಬಾರೀ ಹುನ್ನಾರವೇ ಮಾಡುತ್ತಿದ್ದರು ಎಂದು ವಿಪಕ್ಷಗಳನ್ನು ತರಾಟೆಗೆ ತೆಗೆದುಕೊಂಡರು.
ಕರೊನಾ ಸಂಕಷ್ಟದಲ್ಲಿ ನಾನೂ ಗ್ರಾಮ ಗ್ರಾಮಗಳಿಗೆ ಭೇಟಿ ನೀಡಿ ಸಾಮಾಜಿಕ ಅಂತರ,ಮಾಸ್ಕ್ ಧರಿಸುವಂತೆ ಜಾಗ್ರತೆ ವಹಿಸುವಂತೆ ಮನವಿ ಮಾಡಿದಲ್ಲದೆ, ಅವಳಿ ತಾಲೂಕಿನ ಜನತೆ ಕರೊನಾ ಸೋಂಕಿನಿಂದ ಕೋವಿಡ್ ಸೆಂಟರ್‍ನಲ್ಲಿ ದಾಖಲಾಗಿದ್ದಾಗ ನಾನು,ಆಶಾ,ಅಂಗನವಾಡಿ ಹಾಗೂ ಆರೋಗ್ಯ ಇಲಾಖೆಯ ಎಲ್ಲಾ ಅಧಿಕಾರಿಗಳು ಸೋಂಕಿತರಿಗೆ ಆತ್ಮಸ್ಥೈರ್ಯ ತುಂಬುತ್ತಿದ್ದ ನಮ್ಮನ್ನು ಸಹ ಕೆಲವರು ವ್ಯಂಗ್ಯ ಮಾಡುತ್ತಿದ್ದರು,ಇದಕ್ಕೆ ನಾವು ತಲೆ ಕೆಡಿಸಿಕೊಳ್ಳದೆ ಸೋಂಕಿತರ ಆರೈಕೆ ಮಾಡಿದೇವು ಎಂದು ಅವರು ತಿಳಿಸಿದರು.
ಪುರಸಭೆ ಅಧ್ಯಕ್ಷ ಬಾಬು ಹೋಬಳದಾರ್,ಉಪಾಧ್ಯಕ್ಷೆ ರಂಜಿತಾ ಚನ್ನಪ್ಪ,ಡಾ,ಗಂಗಾಧರ್,ಡಾ.ಮುರುಳೀಧರ್,ಸ್ಥಾನಿಕ ವೈದ್ಯಾಧಿಕಾರಿ ಡಾ.ಚಂದ್ರಪ್ಪ,ತಾಲೂಕು ಪ್ರಬಾರಿ ವೈಧ್ಯಾಧಿಕಾರಿ ಡಾ.ಗಿರೀಶ್,ಡಾ.ಸುರೇಶ್,ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಕುಮಾರ್ ಹಾಗೂ ಇತರರು ಇದ್ದರು..