ಸಾಸ್ವೆಹಳ್ಳಿ ಯ ಶ್ರೀ ಚೌಡೇಶ್ವರಿ ದೇವಸ್ಥಾನದ ಮುಂಭಾಗದಲ್ಲಿರುವ ಹಳೆ ತಲೆಮಾರಿನ ಅಶ್ವತ ಮರವೊಂದು ಸೋಮವಾರ ರಾತ್ರಿ ಮೋಡಮುಸುಕಿದ ತಿಳಿ ಗಾಳಿಗೆ ಮರವು ಪಕ್ಕದ ಎರಡು ಮನೆಗಳ ಮೇಲೆ ಬಿದ್ದು ಮನೆ ಹಾಗು ಹಾಗು ಎರಡು ಬೈಕುಗಳು ಜಕ್ಕಂ ಗೊಂಡಿರುವ ಘಟನೆ ಸಾಸ್ವೆಹಳ್ಳಿ ಯಲ್ಲಿ ತಡ ರಾತ್ರಿ.ನಡೆದಿದೆ.
ಇತ್ತೀಚೆಗಷ್ಟೇ ಸಾಸ್ವೆಹಳ್ಳಿ ಯಲ್ಲಿ ಬಿರುಗಾಳಿ ಹಾಗೂ ಗುಡುಗು ಮಿಂಚಿನ ಮಳೆಯಾಗಿದ್ದು ಹೋಬಳಿಯ ವಿವಿಧ ಭಾಗಗಳಲ್ಲಿ ಮರ-ಗಿಡಗಳು ವಿದ್ಯುತ್ ಕಂಬಗಳು ಬಾಳೆ. ಅಡಿಕೆ .ತೆಂಗಿನ ಮರಗಳು ಧರೆಗೆ ಉರುಳಿದ ಘಟನೆ ಮಾಸುವ ಮುನ್ನವೇ ಸೋಮವಾರ ಗ್ರಾಮದ ಶ್ರೀ ಚೌಡೇಶ್ವರಿ ದೇವಸ್ಥಾನದ ಮುಂಭಾಗದಲ್ಲಿರುವ ನೂರು ವರ್ಷಗಳ ಬೇವಿನ ಹಾಗೂ ಅರಳಿ ಜೋಡಿ ಮರಗಳು ರಾತ್ರಿ ಸುಮಾರು 10:00 ಗಂಟೆ ಸಮಯದಲ್ಲಿ ಪಕ್ಕದಲ್ಲೇ ಇದ್ದ ದೇವೇಂದ್ರಪ್ಪ ಇವರ ಮನೆಯಲ್ಲಿ ತಿಪ್ಪೇರುದ್ರಸ್ವಾಮಿ ಧಾರ್ಮಿಕ ಕಾರ್ಯಕ್ರಮ ನಡೆಯುತ್ತಿದ್ದು ಈ ಕಾರ್ಯಕ್ರಮಕ್ಕೆ ನೆಂಟರು ಬೀಗರು ಹಾಗೂ ಅಕ್ಕಪಕ್ಕದ ಮನೆಯವರು ಸೇರಿ ಊಟ ಮಾಡಿದ ನಂತರ ಅವರವರ ಮನೆಗೆ ತೆರಳಿದ ನಂತರ ದಿಡೀರನೆ ದೊಡ್ಡಗಾತ್ರದ ಮರದ ಕೊಂಬೆ ಮನೆಯ ಮೇಲೆ ಬಿದ್ದೊಡನೆ ಮನೆಯ ಅಂಚುಗಳು ಹಾಗೂ ಮನೆಯ ಮುಂದೆ ನಿಲ್ಲಿಸಿದ್ದ ಎರಡು ಬೈಕುಗಳು ಸಹ ಜಖಂಗೊಂಡು ಹಾನಿಯಾಗಿವೆ. ಯಾವುದೇ ಪ್ರಾಣ ಹಾನಿ ಆಗಿಲ್ಲ.