ಹೊನ್ನಾಳಿ:-ಏ-28;- ಪಟ್ಟಣದ ದೇವನಾಯಕನಹಳ್ಳಿ ಗ್ರಾಮದಲ್ಲಿರುವ ಸರ್ಕಾರಿ ನೌಕರರ ಭವನದಲ್ಲಿ ಇಂದು ಕರ್ನಾಟಕ ರಾಜ್ಯ ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಹಾಗೂ ತಾಲೂಕು ಎಸ್ಡಿಎಂಸಿ ಇವರ ವತಿಯಿಂದ SDMC ಸಂಸ್ಥಾಪನ ದಿನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಇದರ ಉದ್ಘಾಟನೆಯನ್ನು ತಾಲೂಕು SDMC ಅಧ್ಯಕ್ಷರಾದ ಶಿವಲಿಂಗಪ್ಪ ಹುಣಘಟ್ಟ ರವರು ದೀಪ ಬೆಳಗಿಸುವುದರ ಮೂಲಕ ಚಾಲನೆಯನ್ನು ಕೊಡಲಾಯಿತು.
ಅಕ್ಷರ ದಾಸೋಹ ಅಧಿಕಾರಿಗಳಾದ ರುದ್ರಪ್ಪನವರು ನಂತರ ಮಾತನಾಡಿ 2000 ಸಾಲಿನಲ್ಲಿ ಎಸ್ಡಿಎಂಸಿ ಕಾನೂನು ಜಾರಿಗೆ ಬಂತು 2001ರಲ್ಲಿ ಅಂದಿನ ಶಿಕ್ಷಣ ಸಚಿವರಾದ ಎಚ್ ವಿಶ್ವನಾಥ್ ಅವರು ಎಸ್ಡಿಎಂಸಿ ಮತ್ತು ಮೇಲುಸ್ತುವಾರಿ ಕಾನೂನನ್ನು ಜಾರಿಗೆ ತಂದು ಸರ್ಕಾರಿ ಶಾಲೆಯಲ್ಲಿ ಓದುವಂತಹ ಮಕ್ಕಳ ಪೋಷಕರು ಅಧ್ಯಕ್ಷರಾಗಿ ಮತ್ತು ಶಿಕ್ಷಕರ ಸಹಕಾರ ದಿಂದ ಶಾಲೆಯ ಅಭಿವೃದ್ಧಿಗೊಳಿಸಬಹುದು ಎಂದು ಅಂದಿನ ಸರ್ಕಾರ ಜಾರಿಗೆ ತಂದಿದೆ ಎಂದು ಹೇಳಿದರು.
ಎಸ್ಡಿಎಂಸಿ ರಾಜ್ಯ ಸಂಘಟನಾ ಕಾರ್ಯದರ್ಶಿಯಾದ ರುದ್ರನಾಯಕ ರವರು ಮಾತನಾಡಿ ,ನಮ್ಮ ರಾಜ್ಯದಲ್ಲಿ ಸರ್ಕಾರಿ ಶಾಲೆಗಳು ಉಳಿಯಬೇಕು, ಆ ಶಾಲೆಗಳು ಉಳಿಯಬೇಕೆಂದರೆ ಒಬ್ಬ ಗ್ರಾಮ ಪಂಚಾಯಿತಿ ಸದಸ್ಯರು ಮಾಡುವ ಕೆಲಸವನ್ನು ಎಸ್ಡಿಎಂಸಿ ಅಧ್ಯಕ್ಷರು ಮತ್ತು ಸರ್ಕಾರಿ ಶಾಲೆಯ ಶಿಕ್ಷಕರುಗಳ ಸಹಕಾರದೊಂದಿಗೆ ಶಾಲಾ ಅಭಿವೃದ್ಧಿಯನ್ನು ಮಾಡಲಿಕ್ಕೆ ಸಾಧ್ಯ. ಅದರ ಜೊತೆಗೆ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣದಲ್ಲಿ ಹಳ್ಳಿ ಮಟ್ಟದಲ್ಲಿ ಉನ್ನತವಾದ ಶಿಕ್ಷಣವನ್ನು ಕೊಟ್ಟಾಗ ಮಕ್ಕಳುಗಳು ವಿದ್ಯಾಭ್ಯಾಸವನ್ನು ಕಲಿತು ಉನ್ನತ ವ್ಯಾಸಂಗವನ್ನು ಮಾಡಿ ಅಧಿಕಾರ ಹಿಡಿದು ಕೆಲಸ ಮಾಡಿದಾಗ ದೇಶದ ಅಭಿವೃದ್ಧಿ ಆಗಲಿಕ್ಕೆ ಸಾಧ್ಯ ಎಂದು ಹೇಳಿದರು.


ಅಧ್ಯಕ್ಷೀಯ ಭಾಷಣ ಮಾಡಿದ ಎಸ್ಡಿಎಂಸಿ ತಾಲೂಕ ಅಧ್ಯಕ್ಷ ಶಿವಲಿಂಗಪ್ಪ ಹುಣಸಘಟ್ಟ ರವರು ಮಾತನಾಡಿ ,ಎಸ್ಡಿಎಂಸಿ ಅವರು ಮತ್ತು ಶಿಕ್ಷಕರುಗಳು ಸಹಕಾರದಿಂದ ಅಭಿವೃದ್ಧಿಯ ಜೊತೆಗೆ ಪಟ್ಟಣದಲ್ಲಿರುವ ವಿದ್ಯಾರ್ಥಿಗಳಿಗೆ ಉನ್ನತಮಟ್ಟದ ಶಿಕ್ಷಣ ಹೇಗೆ ಸಿಗುತ್ತದೆಯೋ ಹಾಗೆಯೇ ಹಳ್ಳಿಯ ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳು ಗಳಿಗೆ ಪಟ್ಟಣದಲ್ಲಿರವ ಶಾಲೆಗಳಲ್ಲಿ ಸಿಗುವಂತಹ ಉನ್ನತಮಟ್ಟದ ಶಿಕ್ಷಣವೂ ಸಹ ಸರ್ಕಾರಿ ಶಾಲೆಯಲ್ಲಿ ಓದುವಂತಹ ಮಕ್ಕಳಿಗೆ ಉನ್ನತ ಗುಣಮಟ್ಟದ ಶಿಕ್ಷಣ ಹಳ್ಳಿಯಲ್ಲಿರುವ ವಿದ್ಯಾರ್ಥಿಗಳಿಗೆ ಕೊಟ್ಟಾಗ ಪ್ರವೇಟ್ ಸಂಸ್ಥೆಯನ್ನು ಬಿಟ್ಟು ಸರ್ಕಾರಿ ಶಾಲೆಯಲ್ಲಿ ಓದಬೇಕು ಎಂದು ಮಕ್ಕಳುಗಳು ಸರ್ಕಾರಿ ಶಾಲೆಗಳಿಗೆ ಬರುತ್ತಾರೆ. ಯಾವುದೇ ಸರ್ಕಾರಿ ಶಾಲೆಗಳಲ್ಲಿ ಎಸ್ಡಿಎಂಸಿ ಅಧ್ಯಕ್ಷರುಗಳು ಮತ್ತು ಸ್ಥಳೀಯ ಮುಖಂಡರುಗಳು ಜಾತಿ ರಾಜಕೀಯ ಹಾಗೂ ಸ್ಥಳೀಯ ಮುಖಂಡರುಗಳ ಒತ್ತಡ ಇರಬಾರದು ಎಂದು ಹೇಳುತ್ತ ಸರ್ಕಾರಿ ಶಾಲೆಯಲ್ಲಿ ಓದುತ್ತಿರುವ ಮಕ್ಕಳುಗಳಿಗೆ ಖಾಸಗಿ ಸಂಸ್ಥೆಯ ದಾನಿಗಳ ಸಹಕಾರದಿಂದ ಕೈಜೋಡಿಸಿ ಸೌಲತ್ತುಗಳನ್ನು ಕೊಡಿಸುವುದೇ ನಮ್ಮ ಉದ್ದೇಶ ಎಂದು ಹೇಳಿದರು.
ಉಪಸ್ಥಿತಿಯಲ್ಲಿ;- ತಾಲೂಕ ಎಸ್ಡಿಎಂಸಿ ಅಧ್ಯಕ್ಷ ಶಿವಲಿಂಗಪ್ಪ ಹುಣಸಘಟ್ಟ, ತಾಲೂಕ ಅಕ್ಷರದಾಸೋಹ ಅಧಿಕಾರಿಗಳಾದ ರುದ್ರಪ್ಪ ,ಮಹೇಶ್ವರಪ್ಪ ,ಈಶ್ವರಪ್ಪ, ಪಿಆರ್ ಪಿ ಅರುಣ್ ಕುಮಾರ್, ರಾಜ್ಯ ಸಂಘಟನಾ ಅಧಿಕಾರಿ ರುದ್ರನಾಯಕ, ಕಾರ್ಯದರ್ಶಿ ಸತೀಶ್, ಸಹಕಾರ್ಯದರ್ಶಿ ರಮೇಶ್, ಖಜಾಂಚಿ ಅಜಯ್, ಉಪಾಧ್ಯಕ್ಷೆ ಸಾವಿತ್ರಮ್ಮ, ಡಿಎಸ್ ಪಾರ್ವತಿ ಇನ್ನೂ ಮುಂತಾದವರಿದ್ದರು.

Leave a Reply

Your email address will not be published. Required fields are marked *