ಶಿಕ್ಷಣದಿಂದ ದಲಿತರ ಪ್ರಗತಿ ಸಾಧ್ಯ ಎಂದು ಹೊಟ್ಯ ಪುರ ಹಿರೇಮಠದ ಗಿರಿ ಸಿದ್ದೇಶ್ವರ ಶಿವಾಚಾರ್ಯ ಸ್ವಾಮಿಗಳು ಹೇಳಿದರು.

ಅವರು ಸಾಸ್ವೆಹಳ್ಳಿ ಸಮೀಪದ ಬಾಗೇವಾಡಿ ಗ್ರಾಮದಲ್ಲಿ ಅಂಬೇಡ್ಕರ್ ಅವರ 131ನೇ ಜಯಂತಿ ಹಾಗೂ ಅಂಬೇಡ್ಕರ್ ಅವರ ಪುತ್ತಳಿ ಅನಾವರಣದ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದರು

ಅಂಬೇಡ್ಕರ್ ಅವರ ಪುತ್ತಳಿ ನಿರ್ಮಾಣ ಮಾಡಿದರೆ ಸಾಲದು ಅಂಬೇಡ್ಕರ್ ಅವರ ಆದರ್ಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಅವರ ಮಾರ್ಗದಲ್ಲಿ ಮುನ್ನಡೆಯುವಂತೆ ತಿಳಿಸಿದರು.

ಹೊನ್ನಾಳಿ ತಾಲೂಕಿನ ಮಾಜಿ ಶಾಸಕ ಡಿಜೆ ಶಾಂತನ ಗೌಡ ಅಂಬೇಡ್ಕರ್ ಅವರ ಪುತ್ಥಳಿ ಅನಾವರಣಗೊಳಿಸಿ ಮಾತನಾಡಿ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಜನಾಂಗದವರು ತಮ್ಮ ಕುಟುಂಬಗಳು ಆರ್ಥಿಕವಾಗಿ ಹಾಗೂ ಶೈಕ್ಷಣಿಕವಾಗಿ ಅಭಿವೃದ್ಧಿ ಕಾಣಬೇಕಾದರೆ ಮಕ್ಕಳಿಗೆ ಶಿಕ್ಷಣವನ್ನು ಒದಗಿಸಬೇಕು ಅಂಬೇಡ್ಕರ್ ಅವರನ್ನು ಒಂದು ಜಾತಿಗೆ ಸೀಮಿತಗೊಳಿಸದೆ ವಿಶಾಲ ಪ್ರಪಂಚಕ್ಕೆ ಮಾದರಿಯಾಗಿದ್ದಾರೆ ಅವರ ಹೋರಾಟದ ಪ್ರತಿಫಲವಾಗಿ ಇಂದು ಮೀಸಲಾತಿ ಹಾಗೂ ಸೌಲಭ್ಯಗಳನ್ನು ಸರ್ಕಾರದ ವತಿಯಿಂದ ಪಡೆಯುತ್ತಿದ್ದಾರೆ. ಹೆಣ್ಣು ಮಕ್ಕಳಿಗೂ ಸಹ ಮತದಾನ ಮಾಡುವ ಹಕ್ಕನ್ನು ಅವರು ನೀಡಿದ ಫಲವಾಗಿ ಇಂದು ಎಲ್ಲಾ ಮಹಿಳೆಯರು ಯುವತಿಯರು ಮತದಾನವನ್ನು ಮಾಡುವುದರ ಮೂಲಕ ತಮ್ಮ ಹಕ್ಕನ್ನು ಚಲಾಯಿಸುತ್ತಿದ್ದಾರೆ.

ದಾವಣಗೆರೆ ಜಿಲ್ಲಾ ಪಂಚಾಯಿತಿ ಮಾಜಿ ಜಿಲ್ಲಾ ಅಧ್ಯಕ್ಷ ಮಾತನಾಡಿ. ನಮ್ಮ ದೇಶದಲ್ಲಿ ಐದು ಸಾವಿರ ವರ್ಷಗಳಿಂದಲೂ ದುರ್ಗಮ್ಮ ಕಾಳಮ್ಮ ಮರಿಯಮ್ಮ ಮುಂತಾದ ಮುಕ್ಕೋಟಿ ದೇವರುಗಳು ಇದ್ದರೂ ಸಹ ಯಾವ ದೇವರು ಸಹ ನಮ್ಮನ್ನು ಕೈಹಿಡಿದು ಉದ್ಧಾರ ಮಾಡಲಿಲ್ಲ. ಡಾ, ಅಂಬೇಡ್ಕರ್ ಅವರ ಹೋರಾಟದ ಫಲವಾಗಿ ಇಂದು ಸರ್ಕಾರದ ಸೌಲಭ್ಯ ಪಡೆಯುವುದರ ಜೊತೆಗೆ ತಮ್ಮ ಮಕ್ಕಳಿಗೂ ಸಹ ಶಿಕ್ಷಣವನ್ನು ನೀಡುತ್ತಿದ್ದೇವೆ
ನನ್ನ ಮನೆಯಲ್ಲಿ ಪ್ರಥಮ ಶಿಕ್ಷಣ ಪಡೆದವನು ನಾನು ಒಂದು ವೇಳೆ ನಾನು ಶಿಕ್ಷಣ ಪಡೆಯದಿದ್ದರೆ ಬೇರೆಯವರ ಮನೆಯಲ್ಲಿ ಜೀತ ಮಾಡಬೇಕಾಗಿತ್ತು ಎಂದರು

ಕಾರ್ಯಕ್ರಮದಲ್ಲಿ. ಉಪನ್ಯಾಸಕ ಎಂ ಸಿ ಮೋಹನ್ ಕುಮಾರ್. ಕೊಡತಾಳ ರುದ್ರೇಶ್. ಆರ್ ಕುಬೇರ. ಗ್ರಾಮ ಪಂ ಸದಸ್ಯ ರಮೇಶ್. ತಟ್ಟೆಹಳ್ಳಿ ಲಕ್ಷ್ಮಣ್. ಮಂಜುನಾಥ್ ಮೋರೆ. ಬಸವರಾಜಪ್ಪ ಗೌಡ್ರು. ಮಂಜುನಾಥ ಪಾಟೀಲ್. ಕೃಷ್ಣಪ್ಪ ಕೆಂಚಪ್ಪ ಪ್ರದೀಪ ಬಸವರಾಜ್ ದೇವರಾಜ್ ಮಂಜಪ್ಪ. ಮುಂತಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *