ಹೊನ್ನಾಳಿ : ಮಾತು ಸಾಧನೆಯಾಗ ಬಾರದು ಸಾಧನೆ ಮಾತಾಗ ಬೇಕು, ನಾನು ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದು, ಹೊನ್ನಾಳಿ ನ್ಯಾಮತಿ ಅವಳಿ ತಾಲೂಕನ್ನು ಮಾದರಿ ತಾಲೂಕುಗಳನ್ನಾಗು ಮಾಡುತ್ತೇನೆಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಹೇಳಿದರು.
ತಾಲೂಕಿನ ಕುಂದೂರು ಗ್ರಾಮದಲ್ಲಿ 7.70 ಕೋಟಿ ವೆಚ್ಚದಲ್ಲಿ ವಿವಿಧ ಅಭಿವೃದ್ದಿ ಕಾಮಗಾರಿಗಳನ್ನು ಉದ್ಘಾಟಿಸಿ, ಗುದ್ದಲಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ಕುಂದೂರು ಗ್ರಾಮದ ಕೆರೆಯ ರಸ್ತೆಯನ್ನು ಐದುವರೆ ಮೀಟರ್ ನಿಂದ ಏಳು ಮೀಟರ್ ವರೆಗೆ ರಸ್ತೆ ಅಗಲೀಕರಣ ಮಾಡುವುದರ ಜೊತೆಗೆ ಕೆರೆಗೆ ತಡೆಗೋಡೆ ನಿರ್ಮಾಣ ಮಾಡಲು 6.50 ಕೋಟಿ ರೂಪಾಯಿ ವೆಚ್ಚದ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಲಾಗಿದೆ ಎಂದರು.
ಅದೇ ರೀತಿ ಕುಂದೂರು ಗ್ರಾಮದ ಹೊರಬಾಗದಲ್ಲಿ 1.20 ಕೋಟಿ ರೂಪಾಯಿ ವೆಚ್ಚದಲ್ಲಿ ಬೈಪಾಸ್ ರಸ್ತೆ ಕಾಮಗಾರಿ ಪೂರ್ಣಗೊಂಡಿದ್ದು ಕಾಮಗಾರಿಯನ್ನು ಉದ್ಘಾಟಿಸಿದ್ದು, ಕುಂದೂರು ಗ್ರಾಮದಲ್ಲಿ 50 ಕೋಟಿ ರೂಪಾಯಿಗೂ ಹೆಚ್ಚಿನ ಅನುದಾನ ಹಾಕಿ ಗ್ರಾಮವನ್ನು ಅಭಿವೃದ್ದಿ ಮಾಡಲಾಗಿದೆ ಎಂದರು.
ಈಗಾಗಲೇ ಅವಳಿ ತಾಲೂಕಿನಾಧ್ಯಂತ ಸಾವಿರಾರು ಕೋಟಿಗೂ ಹೆಚ್ಚು ಅನುದಾನ ತಂದು ಅವಳಿ ತಾಲೂಕುಗಳನ್ನು ಅಭಿವೃದ್ದಿ ಮಾಡಲಾಗಿದೆ ಎಂದ ರೇಣುಕಾಚಾರ್ಯ, ಅವಳಿ ತಾಲೂಕನ್ನು ರಾಜ್ಯದಲ್ಲೇ ಮಾದರಿ ತಾಲೂಕುಗಳನ್ನಾಗಿ ಮಾಡುತ್ತೇನೆ ಎಂದರು.
ಈಗಾಗಲೇ ಅವಳಿ ತಾಲೂಕಿನಿಂದ ಸಾಕಷ್ಟು ಅಭಿವೃದ್ದಿ ಕೆಲಸಗಳು ಪ್ರಗತಿಯಲ್ಲಿದ್ದು ಅಭಿವೃದ್ದಿ ಕೆಲಸಗಳಿಗೆ ಅವಳಿ ತಾಲೂಕಿನಲ್ಲಿ ಕೊನೆ ಎಂಬುದೇ ಇಲ್ಲಾ ಎಂದರು.
ಈ ಸಂದರ್ಭ ಗ್ರಾ.ಪಂ ಅಧ್ಯಕ್ಷರಾದ ರೆಹಮತಿ, ಉಪಾಧ್ಯಕ್ಷರಾದ ರೇಖಾ ರೇವಣಸಿದ್ದಪ್ಪ, ಸದಸ್ಯರದ ಲತಮ್ಮ ಹಾಲೇಶಪ್ಪ, ರತ್ನಮ್ಮ, ಆಂಜನೇಯ, ಧನಂಜಯ್ಯ, ಸೇರಿದಂತೆ
ತಾಲೂಕು ಪಂಚಾಯಿತಿ ಮಾಜಿ ಸದಸ್ಯರಾಧ ತಿಪ್ಪೇಶಪ್ಪ,ಉಮಾಪತಿ, ಪಿಎಲ್‍ಡಿ ಬ್ಯಾಂಕ್ ನಿದೇರ್ಶಕರಾದ ಉಮಾಪತಿ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ಮುಖಂಡರಿದ್ದರು.