ಬಾಗಲಕೋಟೆಯ ಪತ್ರಿಕಾ ಭವನದಲ್ಲಿ ಶುಕ್ರವಾರದಂದು
ನಡೆದ ಸರ್ಕಾರದ ಯೋಜನೆಗಳು, ಅಭಿವೃದ್ಧಿ
ಕಾರ್ಯಕ್ರಮಗಳನ್ನು ನಾಡಿನ ಜನತೆಗೆ ತಲುಪಿಸಲು ಸಾಮಾಜಿಕ
ಜಾಲತಾಣಗಳು,ನವ ಮಾಧ್ಯಮಗಳ ಸಮರ್ಥ ಬಳಕೆಗೆ ಆದ್ಯತೆ
ನೀಡಲಾಗುತ್ತಿದೆ. ಮಾಧ್ಯಮಗಳಿಗೆ ಮಾಹಿತಿ ಪೂರೈಕೆಯಲ್ಲಿ
ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಯ ಕಾರ್ಯಕ್ಷಮತೆ
ಹೆಚ್ಚಿಸಿಕೊಳ್ಳಬೇಕು ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ
ಇಲಾಖೆಯ ಆಯುಕ್ತ ಡಾ.ಪಿ.ಎಸ್.ಹರ್ಷ ಹೇಳಿದರು.
ಪತ್ರಿಕಾ ಭವನದಲ್ಲಿ ಇಂದು ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳ
ವಾರ್ತಾಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು
ಮಾತನಾಡಿದರು. ಇಲಾಖೆಯ ಅಧಿಕಾರಿಗಳ ಕಾರ್ಯಸ್ವರೂಪ
ಪುನರ್ ರಚನೆಗೆ ಕ್ರಮವಹಿಸಲಾಗಿದೆ.ಸರ್ಕಾರದ ಹಂತದಲ್ಲಿ ಶೀಘ್ರ
ನಿರ್ಧಾರವಾಗಲಿದೆ.ಕೇಂದ್ರ ಕಚೇರಿ ಮತ್ತು ಜಿಲ್ಲಾ ಮಟ್ಟದ
ಕಚೇರಿಗಳ ನಡುವಿನ ಅಂತರ ಕಡಿಮೆ ಜಿಲ್ಲಾ ಮಟ್ಟದ ಸಿಬ್ಬಂದಿಯ
ಕಾರ್ಯಗಳಿಗೆ ಹೊಸ ಸ್ವರೂಪ ನೀಡಲು ವೃಂದ ಮತ್ತು
ನೇಮಕಾತಿ ನಿಯಮಗಳನ್ನು ಪರಿಷ್ಕರಿಸಲಾಗುತ್ತಿದೆ. ಸರ್ಕಾರದ
ಕಾರ್ಯಕ್ರಮಗಳ ಕುರಿತು ಬಾರ್ ಚಾರ್ಟ್,ಇನ್ಫೋ ಗ್ರಾಫಿಕ್ಸ್
ಮೂಲಕ ಪರಿಣಾಮಕಾರಿ ಸಂವಹನ ಕೌಶಲಗಳನ್ನು
ಅಳವಡಿಸಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ
ಸೂಚಿಸಿದರು.ಇಲಾಖೆಯ ಜಿಲ್ಲಾ ಕಚೇರಿಗಳಿಗೆ ಮೂಲ
ಸೌಕರ್ಯಗಳನ್ನು ಕಲ್ಪಿಸಲಾಗುವುದು ಎಂದರು.
ಬಾಗಲಕೋಟ, ವಿಜಯಪುರ,ವಿಜಯನಗರ,ಬಳ್ಳಾರಿ,ರಾಯಚೂರು,
ಕೊಪ್ಪಳ, ಗದಗ,ಧಾರವಾಡ,ಬೆಳಗಾವಿ,ಹಾವೇರಿ ಮತ್ತಿತರ
ಜಿಲ್ಲೆಗಳ ವಾರ್ತಾಧಿಕಾರಿಗಳು,ಸಿಬ್ಬಂದಿ ಸಭೆಯಲ್ಲಿ ಭಾಗವಹಿಸಿದ್ದರು.
ಬಾಗಲಕೋಟ ಜಿಲ್ಲಾ ವಾರ್ತಾಧಿಕಾರಿ ಮಂಜುನಾಥ ಸುಳ್ಳೊಳ್ಳಿ ಸ್ವಾಗತಿಸಿ
ವಂದಿಸಿದರು.