ದಾವಣಗೆರೆ: ರಾಜೀವ್‍ಗಾಂಧಿ ಪಂಚಾಯತ್‍ರಾಜ್ ಸಂಘಟನೆ ಮೂಲಕ ಕಾಂಗ್ರೆಸ್ ಪಕ್ಷವನ್ನು ಗ್ರಾಮಾಂತರ ಪ್ರದೇಶಗಳಲ್ಲಿ ಇನ್ನಷ್ಟು ಬಲಪಡಿಸಲಾಗುವುದು ಎಂದು ಜಿಲ್ಲಾ ಸಂಚಾಲಕರಾದ ಜಿ.ಆರ್. ರಾಘವೇಂದ್ರ ಗೌಡ ಉರಲಕಟ್ಟೆ ತಿಳಿಸಿದರು.
ಇಂದು ಬೆಳಿಗ್ಗೆ ರಾಜೀವ್‍ಗಾಂಧಿ ಪಂಚಾಯತ್‍ರಾಜ್ ಸಂಘಟನ್ ಪದಾಧಿಕಾರಿಗಳ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.
ಈ ಸಂಘಟನೆಯು ಕಾಂಗ್ರೆಸ್ ಪಕ್ಷದ ಅವಿಬಾಜ್ಯ ಅಂಗವಾಗಿದೆ ಈ ಸಂಘಟನೆಯು ಶ್ರೀಮತಿ ಸೋನಿಯಾ ಗಾಂಧಿಯವರು ಪಂಚಾಯತ್ ಮತ್ತು ಸ್ಥಳೀಯ ಸಂಸ್ಥೆಗಳಲ್ಲಿ ಚುನಾಯಿತಾ ಪ್ರತಿನಿದಿಗಳ ನಾಯಕತ್ವದ ಶಕ್ತಿಯನ್ನು ಬೆಳೆಸಲು ಸ್ಥಾಪಿಸಿದ್ದಾರೆ ಎಂದರು.
ಈಗಿನ ರಾಜಕೀಯ ಪರಿಸ್ಥಿತಿಯಲ್ಲಿ ಸ್ಥಳೀಯ ಸಂಸ್ಥೆಗಳು ಮತ್ತು ಪಂಚಾಯತ್‍ಗಳ ದ್ವನಿಯನ್ನು ವ್ಯಕ್ತಪಡಿಸುವ ವೇದಿಕೆಯಾಗಿದ್ದು, ನಮ್ಮ ಧ್ಯೇಯೋದ್ದೇಶವೆಂದರೆ ಅಧಿಕಾರ ವಿಕೇಂದ್ರೀಕರಣಕ್ಕೆ ಬೆಂಬಲ ಮತ್ತು ಪಂಚಾಯತ್ ಪ್ರತಿನಿಧಿಗಳ ಸಬಲೀಕರಣ ಆಗಿದೆ, ಹಾಗೂ ಪ್ರತಿನಿಧಿಗಳಿಗೆ ತಮ್ಮ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸುವುದು ಮತ್ತು ಅಗತ್ಯವಾದ ನಿಯಮದಲ್ಲಿ ಸುಧಾರಣೆ ತರುವ ಪ್ರಯತ್ನ ಮಾಡುವುದು ಆಗಿದೆ ಎಂದರು.
ಚುನಾವಣಾ ಪೂರ್ವ ಬೆಂಬಲ ಕಾರ್ಯಕ್ರಮಗಳನ್ನು ಕೈಗೆತ್ತಿಕೊಳ್ಳುವುದು ಚುನಾವಣೆಯ ನಂತರ ಕಾಂಗ್ರೆಸ್ ಮನೋಭಾವದ ಚುನಾಯಿತಾ ಪ್ರತಿನಿಧಿಗಳ ಸಂವಾದವನ್ನು ಮಾಡುವುದು ಅವರಲ್ಲಿ ವೀಕೆಂದ್ರಿಕರಣದ ಬಗ್ಗೆ ಅರಿವು ಮೂಡಿಸುವುದು ಮತ್ತು ಹಾಲಿ ಬಿಜೆಪಿ ಸರ್ಕಾರವು ಮಾಡಿರುವ ಪಂಚಾಯತ್ ಪ್ರತಿನಿಧಿಗಳ ಹಕ್ಕುಗಳ ಕಡಿತದ ಬಗ್ಗೆ ಅರಿವು ಮೂಡಿಸುವುದು ಆಗಿದೆ, ತಳಮಟ್ಟದಿಂದ ಕಾಂಗ್ರೆಸ್ ಮನೋಭಾವವುಳ್ಳ ಪಂಚಾಯತ್ ಸದಸ್ಯರುಗಳ ಮೂಲಕ ಕಾಂಗ್ರೆಸ್‍ನ್ನು ಬಲಪಡಿಸುವ ಬಗ್ಗೆ ಹೇಳಿದರು.
ಜಿಲ್ಲೆಯ ಎಲ್ಲಾ ತಾಲೂಕು ಹಾಗೂ ಗ್ರಾಮಪಂಚಾಯತ್‍ಗಳಲ್ಲೂ ಗ್ರಾಮ ಸ್ವರಾಜ್ಯದ ಬಗ್ಗೆ ಪಂಚಾಯತ್ ರಾಜ್ ಜಾಗೃತಿ ಸಮ್ಮೇಳನ ಹಾಗೂ ಸ್ವರಾಜ್ ಸಂವಾದವನ್ನು ನಡೆಸಲು ಕರೆ ನೀಡಿದ ಅವರು
ಇಡೀ ಜಿಲ್ಲೆಯಲ್ಲಿ ಶಾಮನೂರು ಮಲ್ಲಣ್ಣನವರ ನೇತೃತ್ವದಲ್ಲಿ 7 ಕ್ಷೇತ್ರಗಳಲ್ಲಿ ಗೆಲ್ಲುವ ಮೂಲಕ ಕೈ ಬಲಪಡಿಸಬೇಕೆಂದು ತಿಳಿಸಿದರು.
ಇದೇ ವೇಳೆ ಮಾಯಕೊಂಡ ವಿಧಾನಸಭಾ ಕ್ಷೇತ್ರದ ಸಂಚಾಲಕರನ್ನಾಗಿ ಮಂಜುನಾಥಯ್ಯ ಕತ್ತಲಗೆರೆಮಟ್ಟ್, ಹರಿಹರ ವಿಧಾನಸಭಾ ಕ್ಷೇತ್ರದ ಸಂಚಾಲಕರನ್ನಾಗಿ ಮಾರುತಿ ದಾಸರ್, ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಸಂಚಾಲಕರನ್ನಾಗಿ ಆವರಗೆರೆ ಮಂಜುನಾಥ್, ಸಂತೆಬೆನ್ನೂರ್ ಬ್ಲಾಕ್ ಸಂಚಾಲಕರನ್ನಾಗಿ ವೆಂಕಟೇಶ್ (ಗ್ರಾಮ ಪಂಚಾಯತ್ ಸದಸ್ಯರು), ಚನ್ನಗಿರಿ ಬ್ಲಾಕ್ ಸಂಚಾಲಕರನ್ನಾಗಿ ಹಾರೊನ್ ಮಿರಜಾ ಕರೆಕಟ್ಟೆ(ಗ್ರಾಮ ಪಂಚಾಯತ್ ಉಪಾಧ್ಯಕ್ಷರು), ಅರಸೀಕೆರೆ, ಬಿಳಿಚೋಡು ಬ್ಲಾಕ್ ಸಂಚಾಲಕರನ್ನಾಗಿ ಮಾದಿಹಳ್ಳಿ ಗೋಣೆಶ್, ಜಗಳೂರು ಬ್ಲಾಕ್ ಸಂಚಾಲಕರನ್ನಾಗಿ ಕೆ.ಜಿ.ಚೌಡಪ್ಪ ಖಿಲಾಕಣಕುಪ್ಪೆ, ಹೊನ್ನಾಳಿ ವಿಧಾನಸಭಾ ಕ್ಷೇತ್ರದ ಸಂಚಾಲಕರನ್ನಾಗಿ ಕಿರಣ್ ಕುಮಾರ್ ಅವರುಗಳನ್ನು ನೇಮಕ ಮಾಡಲಾಯಿತು.