ನ್ಯಾಮತಿ : ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆಯಾಗಿದ್ದು ಪ್ರತಿಯೊಬ್ಬರೂ ಪರಿಸರ ರಕ್ಷಣೆಗೆ ಹೆಚ್ಚಿನ ಒತ್ತು ನೀಡುವಂತೆ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಹೇಳಿದರು.
ತಾಲೂಕಿನ ಅರಬಗಟ್ಟೆಯಲ್ಲಿರುವ ಇಂದಿರಗಾಂಧಿ ವಸತಿ ಶಾಲೆಯಲ್ಲಿ ಅರಣ್ಯ ಇಲಾಖೆ,ತಾಲೂಕುಪಂಚಾಯಿತಿ,ಅರಬಗಟ್ಟೆ ಗ್ರಾ.ಪಂ ವತಿಯಿಂದ ವನಮಹೋತ್ಸವ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಕಾರ್ಯಕ್ರಮಕ್ಕೆ ಗಿಡ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದರು.
ಪ್ರಧಾನಮಂತ್ರಿ ಮಂತ್ರಿ ನರೇಂದ್ರ ಮೋದಿಜಿಯವರು ಸ್ವಚ್ಚ ಪರಿಸರಕ್ಕೆ ಹೆಚ್ಚಿನ ಒತ್ತು ನೀಡಿದ್ದು ಖುದ್ದು ಪೊರಕೆ ಹಿಡಿದು ಅವರೇ ಸ್ವಚ್ಚತೆ ಮಾಡುವ ಮೂಲಕ ಸ್ವಚ್ಚಭಾರತ್ ಅಭಿಯಾನಕ್ಕೆ ಚಾಲನೆ ನೀಡಿದರು ಎಂದರು.
ನರೇಂದ್ರ ಮೋದಿಜಿಯವರು ಕೃಷಿಕರ, ದುರ್ಬಲರ, ಬಡವರ ಕಲ್ಯಾಣ, ಆತ್ಮನಿರ್ಬರ ಭಾರತ ಬಗ್ಗೆ ಹೋರಾಟ ಮಾಡಿಕೊಂಡು ಬಂದು, ಸಾಕಷ್ಟು ಜನಪರ ಯೋಜನೆಗಳನ್ನು ನೀಡುವ ಮೂಲಕ ಉತ್ತಮ ಆಡಳಿತ ನೀಡಿ ಯಶಸ್ವಿಯಾಗಿ ಎಂಟು ವರ್ಷಗಳ ಸದೃಢ ಆಡಳಿತ ನೀಡಿದ್ದಾರೆ ಎಂದರು.
ಕೇಂದ್ರ ಸರ್ಕಾರ ರೈತರ ಯಶಸ್ವಿ ಯೋಜನೆಗಳಲ್ಲಿ ಒಂದಾಗಿರುವ ಪಿಎಂ ಕಿಸಾನ್ ಸನ್ಮಾನ್ ಯೋಜನೆಯಡಿ 2018 ರಿಂದ 2022ರವರೆಗೆ 4.17 ಕೋಟಿ ಫಲಾನುಭವಿಗಳಿಗೆ 8704.29 ಕೋಟಿ ಅನುದಾನ ಬಿಡಗಡೆ ಮಾಡಿದೇ ಎಂದ ಶಾಸಕರು, ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ 23.09 ಲಕ್ಷ ಫಲಾನುಭವಿಗಳಿಗೆ 2.111ಕೋಟಿ ಯಾಗಿದೆ ಎಂದರು.
ಅದೇ ರೀತಿ ಹೊನ್ನಾಳಿ ವಿಧಾನಸಭಾ ಕ್ಷೇತ್ರಕ್ಕೆ 2021-22 ನೇ ಸಾಲಿನಲ್ಲಿ ರೈತರಿಗೆ ಕೃಷಿಯಂತ್ರಿಕರಣಕ್ಕೆ 463.04 ಲಕ್ಷಗಳನ್ನು 742 ಜನರ ಫಲಾನುವಿಗಳಿಗೆ ನೀಡಲಾಗಿದೆ, ಸೂಕ್ಷ್ಮನೀರಾವರಿ ಯೋಜನೆಯಡಿ 4.47 ಲಕ್ಷ ರೂಪಾಯಿಯನ್ನು 1654 ಫಲಾನುಭವಿಗಳಿಗೆ ನೀಡಲಾಗಿದೆ, ಕೃಷಿ ಉತ್ಪನ್ನಗಳ ಸಂಸ್ಕರಣೆ 6.76 ಲಕ್ಷ ರೂಪಾಯಿಗಳನ್ನು 623 ಜನ ಫಲಾನುಭವಿಗಳಿಗೆ ನೀಡಲಾಗಿದೆ. ರಾಷ್ಟ್ರೀಯ ಕೃಷಿವಿಕಾಸ್ ಯೋಜನೆಯಡಿ 17.08 ಲಕ್ಷ ರೂಪಾಯಿಯನ್ನು 1250 ಫಲಾನುಭವಿಗಳಿಗೆ ನೀಡಲಾಗಿದೆ. ಪಿಎಂ ಕಿಸಾನ್ ಸನ್ಮಾನ ಯೋಜನೆಯಡಿ 5120.34 ಲಕ್ಷ ರೂಪಾಯಿಗಳನ್ನು 33,249 ಫಲಾನುಭವಿಗಳಿಗೆ ವಿತರಿಸಲಾಗಿದೆ ಅಷ್ಟೇ ಅಲ್ಲದೇ ರೈತ ವಿದ್ಯಾನಿಧಿ ಮೂಲಕ 41.39 ಲಕ್ಷ ರೂಪಾಯಿಗಳನ್ನು 1731 ಫಲಾನುಭವಿಗಳಿಗೆ ನೀಡಲಾಗಿದೆ ಎಂದರು.
ಕೇಂದ್ರ ಹಾಗೂ ರಾಜ್ಯದಲ್ಲಿರುವ ಭಾರತ ಜನತಾ ಪಾರ್ಟಿಯ ಸರ್ಕಾರ ಎಲ್ಲಾ ವರ್ಗದ ಜನರಿಗೆ ಅನೇಕ ಜನಪರವಾದ ಯೋಜನೆಗಳನ್ನು ನೀಡಿವ ಮೂಲಕ ಬಡವರ,ರೈತರ ಪರವಾಗಿದೇ ಎಂದರು.
ಈ ಸಂದರ್ಭ ಎಸಿ ತಿಮ್ಮಣ್ಣ ಹುಲುಮನಿ, ಇಓ ರಾಮಬೋವಿ, ಆರ್‍ಎಫ್‍ಓ ಚೇತನ್ ಸೇರಿದಂತೆ ಎಸ್‍ಸಿ,ಎಸ್ಟಿ ಶಾಲೆಯ ಪ್ರಾಂಶುಪಾಲರು, ಗ್ರಾ.ಪಂ ಅಧ್ಯಕ್ಷರು,ಉಪಾಧ್ಯಕ್ಷರು,ಸದಸ್ಯರು ಸೇರಿದಂತೆ ಮುಖಂಡರಿದ್ದರು.
