2022-23 ನೇ ಸಾಲಿನ ಶೇ 24.10%, 7.25% ಮತ್ತು 5% ಯೋಜನೆಯಡಿಯಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ಅಲ್ಪಸಂಖ್ಯಾತ ಮತ್ತು ದೈಹಿಕ ವಿಕಲಚೇತನ ಅರ್ಹ ಫಲಾನುಭವಿಗಳಿಂದ ವೈಯಕ್ತಿಕ ಸೌಲಭ್ಯಕ್ಕಾಗಿ ಅರ್ಜಿಯನ್ನು ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸಲು ಅಕ್ಟೋಬರ್ 25 ಕೊನೆಯ ದಿನವಾಗಿರುತ್ತದೆ. ಅರ್ಜಿ ನಮೂನೆಯನ್ನು ಕಛೇರಿ ಸಮಯದಲ್ಲಿ ಪಡೆಯಬೇಕು ಮತ್ತು ಫಲಾನುಭವಿಯು ಜಗಳೂರು ಪಟ್ಟಣದ ಖಾಯಂ ನಿವಾಸಿಯಾಗಿರಬೇಕು, ಫಲಾನುಭವಿಯ ಆಯ್ಕೆಯ ಅಂತಿಮ ತೀರ್ಮಾನ ಪಟ್ಟಣ ಪಂಚಾಯಿತಿಗೆ ಸೇರಿರುತ್ತದೆ.
ಹೆಚ್ಚಿನ ಮಾಹಿತಿಗಾಗಿ ಪಟ್ಟಣ ಪಂಚಾಯಿತಿ ಕಾರ್ಯಾಲಯ ಜಗಳೂರು ದೂರವಾಣಿ ಸಂಖ್ಯೆ 08196227343 ಗೆ ಸಂಪರ್ಕಿಸಬಹುದು ಎಂದು ಜಗಳೂರು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಸಿ ಲೋಕ್ಯಾನಾಯ್ಕ ತಿಳಿಸಿದ್ದಾರೆ.
