ನ್ಯಾಮತಿ: ತಾಲೂಕು ಮುಸ್ಸೇನಾಳ ಗ್ರಾಮದಲ್ಲಿ ಎರಡು ದಿನಗಳ ಹಿಂದೆ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಶಿವರಾಂ ನಾಯ್ಕ ಮನೆ ಹಿಂದುಗಡೆ ದನದ ಕೊಟ್ಟಿಗೆಯಲ್ಲಿ ಕಟ್ಟಿದ ಹಸುವನ್ನ ಸಂಜೆ ಸುಮಾರು 6,30 ರಿಂದ 7 ಗಂಟೆ ಸಮಯಕ್ಕೆ ಸರಿಯಾಗಿ ಚಿರತೆ ಮನೆ ಹಿಂದಗಡೆ ದನದ ಕೊಟ್ಟಿಗೆಗೆ ಬಂದು ಹಸುವಿನ ಮೇಲೆ ದಾಳಿ ಮಾಡಿ ಗಂಟಲಿಗೆ ಕಚ್ಚಿ ರಕ್ತವನ್ನು ಹೀರಿ ಸುಮಾರು 50 ಮೀಟರ್ ನಷ್ಟು ಎಳೆದುಕೊಂಡು ಹೋಗಿರುವ ಘಟನೆ ನಡೆದಿದೆ . ಏನೋ ಶಬ್ದ ಬರುತ್ತದೆ ಎಂದು ಪಕ್ಕದ ಮನೆಯವರು ನೋಡಿ ಭಯ ಭೀತರಾಗಿ ಚೀರಿಕೊಂಡು ಶಬ್ದ ಕೇಳಿದ ತಕ್ಷಣ ಊರಿನ ಜನರು ಸೇರಿ ಚಿರತೆನ ಓಡಿಸಿದ ಘಟನೆ ನಡೆಯಿತು ಎಂದು ಮಸ್ಸೇನಾಳ ಗ್ರಾಮ ಪಂಚಾಯಿತಿ ಸದಸ್ಯರಾದ ಪ್ರಕಾಶ್ ನಾಯ್ಕ ತಿಳಿಸಿದರು.

Leave a Reply

Your email address will not be published. Required fields are marked *