ಹೊನ್ನಾಳಿ:
ಸಮಾಜ ಸುಧಾರಣೆಯಲ್ಲಿ ದಾಸರು, ಶರಣರ ಪಾತ್ರ ಮಹತ್ವದ್ದು ಎಂದು ತಿಮ್ಲಾಪುರ ಗ್ರಾಪಂ ಸದಸ್ಯ ತರಗನಹಳ್ಳಿ ಟಿ.ಜಿ. ರಮೇಶ್‍ಗೌಡ ಹೇಳಿದರು.
ತಾಲೂಕಿನ ತಿಮ್ಲಾಪುರ ಗ್ರಾಪಂ ಕಚೇರಿಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕನಕದಾಸರ ಜಯಂತ್ಯುತ್ಸವ ಸಮಾರಂಭದಲ್ಲಿ ಕನಕದಾಸರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು ಅವರು ಮಾತನಾಡಿದರು.
ಹಣ, ಅಂತಸ್ತು, ಒಡವೆ ಮತ್ತಿತರ ದೈಹಿಕ ಸುಖ ಭೋಗಗಳಿಂದ ದೂರ ಇದ್ದು ಪಾರಮಾರ್ಥಿಕ ಸಾಧನೆ ಮಾಡಿ ಮೋಕ್ಷ ಹೊಂದುವ ಮೂಲಕ ಮನುಷ್ಯ ಜೀವನವನ್ನು ಸಾರ್ಥಕಪಡಿಸಿಕೊಳ್ಳಬೇಕು ಎಂದು ಕನಕದಾಸರು ಶತಮಾನಗಳ ಹಿಂದೆಯೇ ಮನಮುಟ್ಟುವಂತೆ ವಿವರಿಸಿದ್ದಾರೆ. ಇದನ್ನು ನಾವೆಲ್ಲರೂ ಅರ್ಥ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಸಮಾಜ ಸುಧಾರಕರು, ದಾರ್ಶನಿಕರನ್ನು ಒಂದು ಜಾತಿಗೆ ಸೀಮಿತಗೊಳಿಸಬಾರದು. ಕನಕದಾಸ ಜಯಂತ್ಯುತ್ಸವದ ಸಂದರ್ಭದಲ್ಲಿ ಅವರ ತತ್ವ-ಆದರ್ಶಗಳನ್ನು ನಾವೆಲ್ಲರೂ ನಮ್ಮ ಬದುಕಿನಲ್ಲಿ ಅಳವಡಿಸಿಕೊಂಡರೆ ಅದುವೇ ನಾವು ಅವರಿಗೆ ಸಲ್ಲಿಸುವ ಬಹು ದೊಡ್ಡ ಗೌರವ ಎಂದು ವಿವರಿಸಿದರು.
ತಿಮ್ಲಾಪುರ ಗ್ರಾಪಂ ಸದಸ್ಯರಾದ ಸಿಂಗಟಗೆರೆ ಜಯಪ್ಪ, ಎ.ಕೆ. ಚಂದ್ರಮ್ಮ ರಾಜು, ಅಶ್ವಿನಿ ನಟರಾಜ್, ಟಿ. ಶೇಖರಪ್ಪ, ನೇರಲಗುಂಡಿ ಹನುಮಂತಪ್ಪ, ಎನ್.ಜಿ. ಮಹೇಶ್, ಪ್ರಭಾರ ಪಿಡಿಒ ಹನುಮಂತನಾಯ್ಕ, ಎಲ್ಲಾ ಸಿಬ್ಬಂದಿ, ಮುಖಂಡರಾದ ತಿಮ್ಲಾಪುರದ ಟಿ.ಜಿ. ವೀರೇಂದ್ರ, ಶಕೀಲ್‍ಸಾಬ್, ಸಿದ್ಧೇಶ್, ಎ.ವಿ. ಕುಬೇರಪ್ಪ ಇತರರು ಇದ್ದರು.

Leave a Reply

Your email address will not be published. Required fields are marked *