ಮಹಾನಗರ ಪಾಲಿಕೆಯಲ್ಲಿ ಖಾಲಿ
ಇರುವ ಪೌರ ಕಾರ್ಮಿಕರ ಹುದ್ದೆಗಳನ್ನು ಪಾಲಿಕೆಯಲ್ಲಿ
ಕಾರ್ಯನಿರ್ವಹಿಸುತ್ತಿರುವ ನೇರ ಪಾವತಿ
/ಕ್ಷೇಮಾಭಿವೃದ್ಧಿ/ದಿನಗೂಲಿ/ಗುತ್ತಿಗೆ/ಸಮಾನ ಕೆಲಸಕ್ಕೆ
ಸಮಾನ ವೇತನ/ಹೊರಗುತ್ತಿಗೆ ನೌಕರರನ್ನು
ಖಾಯಂಗೊಳಿಸಲು ನೇರ ನೇಮಕಾತಿಗಾಗಿ ಅರ್ಹ
ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ನೇಮಕಾತಿ ಪ್ರಕ್ರಿಯೆಯು ಸರ್ಕಾರದ
ಅಧಿಸೂಚನೆಯಂತೆ ಸಂಪೂರ್ಣ ಪಾರದರ್ಶಕವಾಗಿ
ನಡೆಯುತ್ತಿದ್ದು, ಅರ್ಜಿದಾರರು ಯಾವುದೇ
ಮಧ್ಯವರ್ತಿ/ಅನ್ಯ ವ್ಯಕ್ತಿಗಳಿಗೆ ಹಣ ನೀಡಿದ್ದಲ್ಲಿ ಇದಕ್ಕೆ
ಪಾಲಿಕೆಯು ಜವಾಬ್ದಾರಿಯಾಗಿರುವುದಿಲ್ಲ ಎಂದು ಮಹಾನಗರ
ಪಾಲಿಕೆ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.