ರಾಜ್ಯದ 12 ಜಿಲ್ಲೆಗಳಲ್ಲಿ ರಚಿಸಲಾದ ನೂತನ ಕಂದಾಯ ಗ್ರಾಮಗಳ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆ ಕಾರ್ಯಕ್ರಮ ಇದೇ ಫೆಬ್ರವರಿ ಮಾಹೆಯಲ್ಲಿ ಜಿಲ್ಲೆಯಲ್ಲಿ ಆಯೋಜಿಸುವ ನಿರೀಕ್ಷೆ ಇದ್ದು, ಎಲ್ಲಾ ಅಧಿಕಾರಿಗಳು ತಮಗೆ ವಹಿಸಿದ ಕಾರ್ಯಗಳನ್ನು ಜವಾಬ್ದಾರಿಯುತವಾಗಿ ನಿರ್ವಾಹಿಸುವಂತೆ ಜಿಲ್ಲಾಧಿಕಾರಿ ಶಿವಾನಂದ ಕಾಪಾಶಿ ಅವರು ಸೂಚನೆ ನೀಡಿದರು.
      ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಹಕ್ಕುಪತ್ರ ವಿತರಣೆ ರಾಜ್ಯಮಟ್ಟದ ಕಾರ್ಯಕ್ರಮ ಕುರಿತಂತೆ ಶನಿವಾರ  ಪೂರ್ವ ಸಿದ್ದತೆ ಸಭೆ ನಡೆಸಿದ ಅವರು ಜಿಲ್ಲೆಯ ಹೊನ್ನಾಳಿ ತಾಲ್ಲೂಕಿನಲ್ಲಿ ಕಾರ್ಯಕ್ರಮ ಆಯೋಜನೆಗೆ ಚರ್ಚಿಸಲಾಗಿದೆ. ಶೀಘ್ರವೇ ದಿನಾಂಕ ಅಂತಿಮಗೊಳಿಸಲಾಗುವುದು ಕಾರ್ಯಕ್ರಮದ ಸಿದ್ದತೆಗಾಗಿ ವಿವಿಧ 11 ಸಮಿತಿಗಳನ್ನು ರಚಿಸಲಾಗಿದೆ ಸಮಿತಿಯ ಸದಸ್ಯರು ಕಾರ್ಯಕ್ರಮದ ಸಿದ್ದತೆಗೆ ಕ್ರಮವಹಿಸುವಂತೆ ಸೂಚನೆ ನೀಡಿದರು.
  ರಾಜ್ಯದ  ಧಾರವಾಡ, ಹಾವೇರಿ, ಗದಗ, ವಿಜಯನಗರ, ಬಳ್ಳಾರಿ, ಶಿವಮೊಗ್ಗ, ಚಿಕ್ಕಮಂಗಳೂರು, ಸೇರಿದಂತೆ 12 ಜಿಲ್ಲೆಗಳಲ್ಲಿ ನೂತನವಾಗಿ ರಚಿಸಲಾದ ಕಂದಾಯ ಗ್ರಾಮಗಳ 50 ಸಾವಿರ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆ ನಡೆಯಲಿದೆ. ಸಮಾರಂಭದಲ್ಲಿ ಅಂದಾಜು ಒಂದು ಲಕ್ಷ ಜನ ಭಾಗವಹಿಸುವ ನಿರೀಕ್ಷೆ ಇದೆ. ಆಯಾ ಜಿಲ್ಲೆಯ ಕಂದಾಯ ಗ್ರಾಮಗಳ ಫಲಾನುಭವಿಗಳ ಮಾಹಿತಿಯನ್ನು  ಸಂಬಂಧಿಸಿದ ಜಿಲ್ಲೆಗಳ ಅಧಿಕಾರಿಗಳ ಸಂಪರ್ಕ ಸಾಧಿಸಿ ಪಡೆಯಬೇಕು. ಎಂದು ತಿಳಿಸಿದರು.
   ಕಾರ್ಯಕ್ರಮಕ್ಕೆ ಫಲಾನುಭವಿಗಳಿಗೆ ಆಸನ ವ್ಯವಸ್ಥೆ ಕುಡಿಯುವ ನೀರಿನ ವ್ಯವಸ್ಥೆ, ಕಾರ್ಯಕ್ರಮಕ್ಕೆ ಅಗತ್ಯವಾದ ವೇದಿಕೆ ನಿರ್ಮಾಣ, ಶಾಮಿಯಾನದ ವ್ಯವಸ್ಥೆ, ಧ್ವನಿಬೆಳಕು ಮತ್ತು ಎಲ್‍ಇಡಿ ಟಿ.ವಿ , ಬಯೋಟೈಲೆಟ್ ಹೆಲಿಪ್ಯಾಡ್ ನಿರ್ಮಾಣದ ವ್ಯವಸ್ಥೆಯನ್ನು ವೇದಿಕೆ ಕಾರ್ಯಕ್ರಮಗಳ ನಿರ್ವಾಹಣೆ ಶಿಷ್ಠಚಾರ ವ್ಯವಸ್ಥೆ  ಕಾನೂನು ಸುವ್ಯವಸ್ಥೆ ಹಾಗೂ ಸುಗಮ ಸಂಚಾರ ವ್ಯವಸ್ಥೆ, ಪಾರ್ಕಿಂಗ್ ವ್ಯವಸ್ಥೆ, ವಿವಿಐಪಿ ಪಾರ್ಕಿಗ್ ವ್ಯವಸ್ಥೆ, ಬಸ್ ಪಾರ್ಕಿಂಗ್ ವ್ಯವಸ್ಥೆ, ಜನರಲ್ ಪಾರ್ಕಿಂಗ್ ವ್ಯವಸ್ಥೆಯನ್ನು ಆಯಾ ಆಯಾ ಸಮಿತಿಗಳಿಗೆ ನಿಯೋಜಿತ ಅಧಿಕಾರಿಗಳು ನಿರ್ವಹಿಸುವಂತೆ ಸೂಚಿಸಿದರು.
ಕಾರ್ಯಕ್ರಮಕ್ಕೆ ಆಗಮಿಸುವ ಮುಖ್ಯ ಅತಿಥಿಗಳಿಗೆ ಊಟದ ವ್ಯವಸ್ಥೆ, ಅಲ್ಪ ಉಪಹಾರ/ಟೀ, ಕಾಫಿ ಇತ್ಯಾದಿಗಳನ್ನು ಶಿಷ್ಠಾಚಾರದ ನಿಯಮಗಳನ್ನು ಪಾಲಿಸಬೇಕೆಂದರು. ಮುನ್ನೆಚ್ಚರಿಕಾ ಕ್ರಮವಾಗಿ ಅಗ್ನಿಶಾಮಕ ದಳದ ವಾಹನಗಳನ್ನು ಕಾರ್ಯಕ್ರಮ ನಡೆಸುವ ಸ್ಥಳದಲ್ಲಿ ಹಾಗೂ ಪಾರ್ಕಿಂಗ್ ವ್ಯವಸ್ಥೆಯಲ್ಲಿ ನಿಯೋಸುವುದು. ಅಂಬ್ಯೂಲೆನ್ಸ್ ವ್ಯವಸ್ಥೆ ಸೇರಿದಂತೆ ಕಾರ್ಯಕ್ರಮ ಆಯೋಜನೆಯಲ್ಲಿ ಯಾವುದೇ ಲೋಪವಾಗದಂತೆ ಸಮಿತಿ ಸದಸ್ಯರು ಎಚ್ಚರ ವಹಿಸುವಂತೆ ಸಲಹೆ ನೀಡಿದರು.
   ಸಮಿತಿ ರಚನೆ ಕಾರ್ಯಕ್ರಮದ ವ್ಯವಸ್ಥೆಗಾಗಿ ಸ್ವಾಗತ ಸಮಿತಿ, ವೇದಿಕೆ ನಿರ್ಮಾಣ ಹಾಗೂ ನಿರ್ವಾಹಣಾ ಸನಮಿತಿ ಹಾಗೂ ಕಾನೂನು ಸಂಚಾರ ವ್ಯವಸ್ಥೆ ಸಮಿತಿ ಆಹಾರ ಹಾಗೂ ಕುಡಿಯುವ ನೀರಿನ ಸಮಿತಿ ಹಕ್ಕುಪತ್ರ ನಿರ್ವಾಹರಣಾ ಸಮಿತಿ ಆರೋಗ್ಯ ಸಮಿತಿ ವಸತಿ ಸಮಿತಿ ಅಗ್ನಿಶಾಮಕ ಸಮಿತಿ ಒಳಗೊಂಡಂತೆ 11 ಸಮಿತಿಗಳನ್ನು ರಚಿಸಲಾಯಿತು.
  ಇದೇ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ ರಿಷ್ಯಂತ್, ಜಿ.ಪಂ ಉಪಕಾರ್ಯದರ್ಶಿ ಕೃಷ್ಣನಾಯಕ್,ಪಾಲಿಕೆ ಆಯುಕ್ತೆ ಶ್ರೀಮತಿರೇಣುಕಾ ಉಪವಿಭಾಗಾಧಿಕಾರಿ ಶ್ರೀಮತಿದುಗಾಶ್ರೀ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರಾದ ನಾಗರಾಜ, ಹೊನ್ನಾಳಿ ತಹಶೀಲ್ದಾರ್ ತಿರುಪತಿ, ದೂಡ ಆಯುಕ್ತರಾದ ಪ್ರಕಾಶ್, ತಹಶೀಲ್ದಾರ್ ಅಶ್ವಥ್, ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.

Leave a Reply

Your email address will not be published. Required fields are marked *