ನ್ಯಾಮತಿ: ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಘಟಕದ ಅಡಿಯಲ್ಲಿ ಮಾನಸ ಟ್ರಸ್ಟ್ ಕಟೀಲ್ ಅಶೋಕ್ ಸ್ಮಾರಕ ಕಾಲೇಜು ಶಿವಮೊಗ್ಗ ಇದರ ಸಂಯೋಗದಲ್ಲಿ ದ್ವಿತೀಯ ಪಿಯುಸಿ ಕಲಾ ,ವಾಣಿಜ್ಯ ಮತ್ತು ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಒತ್ತಡ ನಿರ್ವಹಣೆ ಮತ್ತು ಆಪ್ತ ಸಮಾಲೋಚನೆ ಉಪನ್ಯಾಸ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಉಪನ್ಯಾಸ ಕುರಿತು ಪ್ರಾಂಶುಪಾಲ ಡಾ. ಸಂಧ್ಯಾ ಹಾವೇರಿ ಮತ್ತು ಉಪನ್ಯಾಸಕ ನಾರಾಪಿಂಟೋ ವಿದ್ಯಾರ್ಥಿಗಳಿಗೆ ಮಾರ್ಗದರ್ಶನವನ್ನು ನೀಡುತ್ತಾ ವಿದ್ಯಾರ್ಥಿಗಳು ಓದುವ ಹಂತದಲ್ಲಿ ಒತ್ತಡ ಹೇಗೆ ನಿಭಾಯಿಸಬೇಕು, ಹೇಗೆ ಚೆನ್ನಾಗಿ ಅಧ್ಯಯನ ಮಾಡಲು ನಮ್ಮ ಸುತ್ತಮುತ್ತಲಿನ ಪರಿಸರ ಹೇಗಿರಬೇಕು, ಓದುವ ಬರೆಯುವ ನೆನಪಿಟ್ಟುಕೊಳ್ಳುವ ಸೂತ್ರವನ್ನು ಅನುಸರಿಸಿದರೆ ಪರೀಕ್ಷ ಸಮಯದಲ್ಲಿ ಮರೆಯುವುದಿಲ್ಲ ಹಾಗಾಗಿ ಆತ್ಮವಿಶ್ವಾಸದಿಂದ ಒತ್ತಡವನ್ನು ಕಡಿಮೆ ಮಾಡಿಕೊಂಡು ಸಾಧನೆಗೈಯಲು ಸಾಧ್ಯ ಎಂದು ತಿಳಿಸಿ, ವಿದ್ಯಾರ್ಥಿಗಳು ವಯೋಸಹಜ ಆಕರ್ಷಣೆಗೆ ಒಳಗಾಗದೆ ತಮ್ಮ ಜೀವನ ಹಾಳು ಮಾಡಿಕೊಳ್ಳದೆ, ಸತತ ವಿದ್ಯಾಭ್ಯಾಸದಲ್ಲಿ ತೊಡಗಿಸಿಕೊಂಡಾಗ ಯಶಸ್ಸು ಗಳಿಸಲಿಕ್ಕೆ ಸಾಧ್ಯ ಎಂದು ವಿದ್ಯಾರ್ಥಿಗಳಿಗೆ ಕಿವುಮಾತು ಹೇಳಿದರು.
ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲ ಬಿ ಪಿ ಪೂರ್ಣಾನಂದ, ಉಪನ್ಯಾಸಕ ಎ ಜಿ ಗಂಗಾಧರ್, ರಾಷ್ಟ್ರೀಯ ಸೇವಾ ಯೋಜನಾ ಘಟಕ ಅಧಿಕಾರಿ ಗಂಗಾಧರ್ ನವಲೆ, ಜಿಬಿ ಶಾಂತಲಾ, ರಾಜಶ್ರೀ, ಕೋಮಲಮ್ಮ, ಮಾನಸ ,ಶಿವಕುಮಾರ್, ಯೋಗೇಶ್ ,ನಾಗರಾಜ್, ಭವಾನಿ ಉಪಸ್ಥಿತಿಯಲ್ಲಿದ್ದರು.