ನ್ಯಾಮತಿ: ತಾಲೂಕಿನ ಸವಳಂಗ ಗ್ರಾಮದಲ್ಲಿರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಇಂದು ಚುನಾವಣೆ ಪ್ರಕ್ರಿಯೆ ನಡೆಯಿತು. ಈ ಸಂಘದ ಅಧ್ಯಕ್ಷರ ಗಾದೆಗೆ ಬೇರೆ ಯಾವ ನಿರ್ದೇಶಕರುಗಳು ನಾಮಪತ್ರ ಅರ್ಜಿ ಸಲ್ಲಿಸದೇ ಇರುವ ಕಾರಣ ಅಧ್ಯಕ್ಷರಾಗಿ ಟಿ ಮಲ್ಲೇಶಪ್ಪ ಸೋಗಿಲು, ಉಪಾಧ್ಯಕ್ಷರಾಗಿ ಎ ಬಿ ರಂಗಪ್ಪ ಮಾದಾಪುರ ಇವರುಗಳನ್ನು ಹೊನ್ನಾಳಿಯ ಚುನಾವಣಾ ಅಧಿಕಾರಿ ಸಿಡಿಒ ರಮೇಶ್ ರವರು ಅವಿರೋಧವಾಗಿ ಘೋಷಣೆ ಮಾಡಿದರು.
ಈ ಸಂದರ್ಭದಲ್ಲಿ ದಾವಣಗೆರೆ ಡಿಸಿಸಿ ಬ್ಯಾಂಕಿನ ನಿರ್ದೇಶಕರಾದ ಷಣ್ಮುಖಪ್ಪ ,ಮಾಜಿ ಶಾಸಕರಾದ ಡಿ ಜಿ ಶಾಂತನಗೌಡ್ರು,ನ್ಯಾಮತಿ ತಾಲೂಕು ಕಾಂಗ್ರೇಸ್ ಪಕ್ಷದ ಅಧ್ಯಕ್ಷ ಡಿ.ಜಿ ವಿಶ್ವನಾಥ್, ನ್ಯಾಮತಿ ತಾಲೂಕ್ ಡಿಸಿಸಿ ಬ್ಯಾಂಕ್ ಶಾಖೆಯ ವ್ಯವಸ್ಥಾಪಕರಾದ ನಾಗರಾಜ್ ,ಕ್ಷೇತ್ರ ವಿಸ್ತರಣಾಧಿಕಾರಿ ಸುರೇಶ್, ಕಾರ್ಯ ಕಾರಿ ಮಂಡಳಿಯ ಎಲ್ಲಾ ನಿರ್ದೇಶಕರುಗಳು ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೆಚ್ ಜಿ ಗಣೇಶ್ ಹಾಗೂ ಆಡಳಿತ ಮಂಡಳಿ ಸಿಬ್ಬಂದಿ ವರ್ಗದವರು ಮತ್ತು ಶೇರುದಾರರು ಸಹ ಉಪಸ್ಥಿತಿಯಲ್ಲಿದ್ದರು.

Leave a Reply

Your email address will not be published. Required fields are marked *