ಸಿಟಿ ಪತ್ತಿನ ಸಹಕಾರ ಸಂಘ ನಿ., ಹರಿಹರ ಈ ಸಹಕಾರ ಸಂಘವು ಸಹಕಾರ ಸಂಘಗಳ ಕಾಯ್ದೆ ಹಾಗೂ ಬೈಲಾ ರೀತ್ಯಾ ಹಾಗೂ ಸ್ಥಾಪನೆ ಉದ್ದೇಶಗಳ ರೀತ್ಯಾ ಕಾರ್ಯ ಚಟುವಟಿಗಳನ್ನು ನಡೆಸದೆ ಸ್ಥಗಿತಗೊಂಡಿದ್ದರ ಮೇರೆಗೆ ಸಂಘವನ್ನು ಸಮಾಪನೆಗೂಳಿಸಿ ಸಮಾಪನಾಧಿಕಾರಿಯನ್ನು ನೇಮಕ ಮಾಡಲಾಗಿರುತ್ತದೆ.
ಈ ಸಂಘವನ್ನು ಪುನ:ಶ್ಚೇತನಗೊಳಿಸಲು ಯಾರು ಮುಂದೆ ಬಂದಿರುವುದಿಲ್ಲ. ಈ ಸಹಕಾರ ಸಂಘದ ಲೆಕ್ಕ ಪುಸ್ತಕಗಳು, ಚರ ಮತ್ತು ಸ್ಥಿರಾಸ್ತಿಯ ಇರುವಿಕೆಯ ಬಗ್ಗೆ ಮಾಹಿತಿ ದೊರೆಯದ ಪ್ರಯುಕ್ತ ಸದಸ್ಯರಾಗಲೀ, ಆಡಳಿತ ಮಂಡಳಿ ನಿರ್ದೇಶಕರಾಗಲೀ ಅಥವಾ ಸಾರ್ವಜನಿಕರಿಂದಾಗಲೀ, ಈ ಸಂಘದ ಲೆಕ್ಕ ಪುಸ್ತಕ ಗಳ ಇರುವಿಕೆಯ ಬಗ್ಗೆ ಮಾಹಿತಿ ಇದ್ದಲ್ಲಿ ದಾಖಲೆಗಳ ಸಹಿತ ಸಮಾಪಕರು, ಸಿಟಿ ಪತ್ತಿನ ಸಹಕಾರ ಸಂಘ ನಿ., ಹರಿಹರ ಹಾಗೂ ಸಹಕಾರ ಅಭಿವೃದ್ಧಿ ಅಧಿಕಾರಿ, ಹರಿಹರ ಇವರಿಗೆ ಈ ಪ್ರಕಟಣೆಯ ದಿನಾಂಕದಿಂದ 10 ದಿನಗಳೊಳಗಾಗಿ ಸಲ್ಲಿಸುವುದು.