ಹೊನ್ನಾಳಿ ತಾಲೂಕು ಬೀರಗೊಂಡನಹಳ್ಳಿ ಗ್ರಾಮ ಪಂಚಾಯಿತಿಗೆ ಇಂದು ನೂತನ ಅಧ್ಯಕ್ಷರ ಗಾದೆಗೆ ಚುನಾವಣೆ ಪ್ರಕ್ರಿಯೆ ನಡೆಯಿತು .ಈ ಹಿಂದೆ ಅಧ್ಯಕ್ಷರಾಗಿದ್ದ ಕವಿತಾ ರಮೇಶ್ ಇವರ ತೆರವಾದ ಸ್ಥಾನಕ್ಕೆ ಇಂದು ಚುನಾವಣೆ ನಡೆಯಿತು. ಅಧ್ಯಕ್ಷರ ಗಾದಿಗೆ ಕವಿತಾ ಮಂಜಪ್ಪನವರು ನಾಮಪತ್ರ ಅರ್ಜಿಯನ್ನು ಸಲ್ಲಿಸಿದ್ದರು .ಈ ಅಧ್ಯಕ್ಷರ ಗಾದೆಗೆ ಬೇರೆ ಯಾವ ಗ್ರಾಮ ಪಂಚಾಯಿತಿ ಸದಸ್ಯರು ಅರ್ಜಿ ಸಲ್ಲಿಸದೆ ಇರುವ ಹಿನ್ನೆಲೆಯಲ್ಲಿ ಹೊನ್ನಾಳಿ ಚುನಾವಣೆ ಅಧಿಕಾರಿ ಸಿಡಿಪಿಓ ಮಹಾಂತೇಶ್ ಪೂಜಾರ್ ರವರು ಅಧ್ಯಕ್ಷರಾಗಿ ಕವಿತಾ ಮಂಜಪ್ಪನವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು ಎಂದು ಘೋಷಣೆ ಮಾಡಿದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷರಾದ ಲೋಹಿತ್. ಸದಸ್ಯರುಗಳಾದ ಎಚ್ ಎ ಹಾಲಪ್ಪ ಹಿರೇಬಾಸೂರ್, ರಾಜು ಬಿ ವೈ. ಮಹೇಂದ್ರ ಎಸ್. ಪಾರ್ವತಮ್ಮ. ಶ್ವೇತ ಎಂ ಜಿ. ಶೋಭಾ. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಂಜುಳ ಮತ್ತು ಪೊಲೀಸ್ ರಕ್ಷಣಾ ಇಲಾಖೆಯವರು ಪಂಚಾಯಿತಿ ಸಿಬ್ಬಂದಿ ವರ್ಗದವರು ಸಹ ಉಪಸ್ಥಿತಿಯಲ್ಲಿದ್ದರು.