ಸಫಾಯಿ ಕರ್ಮಚಾರಿಗಳ ಆಯೋಗದ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳಾದ ಎಂ. ಶಿವಣ್ಣ ಕೋಟೆ ಅವರು ಫೆಬ್ರವರಿ ೧೦ ಮತ್ತು ೧೧ ರಂದು ಜಿಲ್ಲಾ ಪ್ರವಾಸ ಕೈ ಗೊಂಡು ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.
ಫೆ.೧೦ ಬೆಳಿಗ್ಗೆ ೦೭ ಗಂಟೆಗೆ ಬೆಂಗಳೂರಿನಿAದ ಹೊರಟು ಬೆಳಿಗ್ಗೆ ೧೦ ಗಂಟೆಗೆ ದಾವಣಗೆರೆಗೆ ಆಗಮಿಸಿ ಬೆಳಿಗ್ಗೆ ೧೧ ಗಂಟೆಗೆ ಪೌರಕಾರ್ಮಿಕರ ಮಕ್ಕಳ ಪ್ರತಿಭಾ ಪುರಸ್ಕಾರ ಮತ್ತು ಎಂ.ಎಸ್ ಕಾಯ್ದೆ ೨೦೧೩ ರ ಕುರಿತು ಅರಿವು ಮೂಡಿಸುವ ನಾಟಕ ಪ್ರದರ್ಶನ ಕಾರ್ಯಕ್ರಮದಲ್ಲಿ ಭಾಗವಹಿಸುವರು
ಫೆ. ೧೧ ರಂದು ಪೌರಕಾರ್ಮಿಕ ಮುಖಂಡರೊAದಿಗೆ ಚರ್ಚೆಯಲ್ಲಿ ಭಾಗವಹಿಸಿ, ಮಧ್ಯಾಹ್ನ ೨ ಗಂಟೆಗೆ ಬೆಂಗಳೂರಿಗೆ ಪ್ರಯಾಣ ಬೆಳೆಸಲಿದ್ದಾರೆ.