ದೇಶದ ಪ್ರತಿ ಮಗುವನ್ನು ಜಂತುಹುಳು ಮುಕ್ತಗೊಳಿಸುವ ಒಂದು ಹೆಜ್ಜೆ  ಎಂದು ಹಿರಿಯ ಆಡಳಿತ ವೈದ್ಯಾಧಿಕಾರಿಗಳಾದ ಡಾ.ವೆಂಕಟೇಶ್ ಎಲ್ ಡಿ. ಹೇಳಿದರು.
ಅವರಗೊಳ್ಳ.ದ ಮೂರಾರ್ಜಿ ದೇಸಾಯಿ ಪಿಯು ಕಾಲೇಜಿನಲ್ಲಿ ಫೆ. 10 ರಂದು ನಡೆದ ರಾಷ್ಟ್ರೀಯ ಜಂತುಹುಳು ನಿವಾರಣ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು  ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿ ಇಡಿ. ಪಾದರಕ್ಷೆಗಳನ್ನು ಧರಿಸಿ. ಉಗುರುಗಳನ್ನು ಕತ್ತರಿಸಿ ಸ್ವಚ್ಛವಾಗಿ ಇಟ್ಟುಕೊಳ್ಳಬೇಕು. ಆಹಾರ ಪದಾರ್ಥಗಳನ್ನು ಸದಾ ಮುಚ್ಚಿಡುವುದು,  ಊಟಕ್ಕೂ ಮೊದಲು ಮತ್ತು ಶೌಚಾಲಯ ಬಳಸಿದ ನಂತರ ಕೈಗಳನ್ನು ಸಾಬೂನಿನಿಂದ ತೊಳೆಯುವುದು ಹಾಗೂ ಹಣ್ಣು ಮತ್ತು ತರಕಾರಿಗಳನ್ನು ಶುದ್ಧ ನೀರಿನಿಂದ ತೊಳೆಯಬೇಕು.
ದಿನ ನಿತ್ಯ ವ್ಯಾಯಾಮ ಮಾಡಿ, ಒತ್ತಡ ನಿವಾರಣೆಗಾಗಿ ಧ್ಯಾನ ಮಾಡುವ ಮೂಲಕ  ಆರೋಗ್ಯಕರ ದೇಹದ ತೂಕವನ್ನು ಕಾಪಾಡಿಕೊಳ್ಳಬೇಕು. ಸಂಸ್ಕರಿಸಿದ ಮತ್ತು ಕರಿದ ಆಹಾರ ಸೇವನೆ, ಹಾಗೂ ಧೂಮಪಾನ ತ್ಯಜಸಬೇಕು ಎಂದು, ಈ ದಿನದಂದು ನಮ್ಮ ಹೃದಯವನ್ನು ಪ್ರೀತಿಸಲು ನಾವೆಲ್ಲರೂ ಪ್ರತಿಜ್ಞೆ ಮಾಡೋಣ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮೂರಾರ್ಜಿ ದೇಸಾಯಿ ಪಿಯುಸಿ ಕಾಲೇಜಿನ ಪ್ರಾಂಶುಪಾಲರು, ಸಿಬ್ಬಂದಿಯವರು,  ಆರೋಗ್ಯ ಸಿಬ್ಬಂದಿ ವರ್ಗ, ವಿದ್ಯಾರ್ಥಿಗಳು ಆಶಾ ಕಾರ್ಯಕರ್ತೆಯರು ಹಾಗೂ ವಿದ್ಯಾರ್ಥಿಗಳು ಉಪಸ್ಥಿರಿದ್ದರು.

Leave a Reply

Your email address will not be published. Required fields are marked *