ನ್ಯಾಮತಿ: ತಾಲೂಕಿನ ಸೂರಗೊಂಡನಕೊಪ್ಪದಲ್ಲಿರುವ ಶ್ರೀ ಸಂತ ಸೇವಾಲಾಲ್ ರವರ 284ನೇ ಜನ್ಮದಿನದ ಜಾತ್ರಾ ಮಹೋತ್ಸವದ ಅಂಗವಾಗಿ ಸೋಮವಾರದಂದು ಇಂದು ಬೆಳಗ್ಗೆ ಮರಿಯಮ್ಮ ದೇವಿ ದೇವಸ್ಥಾನದಿಂದ ಪಲ್ಲಕ್ಕಿಯಲ್ಲಿ ಶ್ರೀ ಸಂತ ಸೇವಾಲಾಲ್ ಮತ್ತು ಮರಿಯಮ್ಮ ದೇವಿಯ ಉತ್ಸವ ಮೂರ್ತಿಯೊಂದಿಗೆ ಅಡ್ಡ ಪಲ್ಲಕ್ಕಿಯಲ್ಲಿ ಇಟ್ಟುಕೊಂಡು ಗಂಗಾ ಪೂಜೆಗೆ ತೆರಳಿದರು.
(ದೂದ್ಯಾಯ ತಳಾವ್ )ಹಾಲಿನ ಕೆರೆಯಲ್ಲಿ ಶ್ರೀ ಸಂತ ಸೇವಾಲಾಲ್ ಬೆಳ್ಳಿ ಉತ್ಸವ ಮೂರ್ತಿ ಮತ್ತು ಮರಿಯಮ್ಮ ದೇವಿ ಉತ್ಸವ ಮೂರ್ತಿಗಳನ್ನು ಗಂಗಾಜಲದಲ್ಲಿ ಸ್ನಾನವನ್ನು ಮಾಡಿಸಿ ಮಠದ ಸ್ವಾಮಿಗಳು ಮತ್ತು ಅರ್ಚಕರ ನೇತೃತ್ವದಲ್ಲಿ ಪೂಜಾ ಕೈಂಕರ್ಯದೊಂದಿಗೆ ಮುತ್ತೈದೆಯರು ಕುಂಭವನ್ನು ತೆಗೆದುಕೊಂಡು ಕೆಂಪು ಮತ್ತು ಬಿಳಿ ಕಾಟಿ ಗೆ ಗಂಗಾಜಲವನ್ನು ಪೆÇ್ರೀಕ್ಷಿಸಿ ಅಲ್ಲಿಂದ ಮುತ್ತೈದರು ಕುಂಭಮೇಳವನ್ನು ಹೊತ್ತುಕೊಂಡು ಸನಾಯಿ ಬಾಜಾ ಬಜಂತ್ರಿಯೊಂದಿಗೆ ಮೆರವಣಿಗೆ ಮುಖಾಂತರ ಬಿಳಿ ಮತ್ತು ಕೆಂಪು ಕಾಟೆಯನ್ನು ಹಿಡಿದುಕೊಂಡು ಸಂತ ಸೇವಾಲಾಲ್ ಅವರ ಜಪವನ್ನು ಮಾಡುತ್ತಾ ಶ್ರೀ ಮಠದ ಮಹದ್ವಾರಕ್ಕೆ ಬಂದು ಮಹಾಮಡ್ ಸಮಿತಿಯ ಉಪಾಧ್ಯಕ್ಷರಾದ ಎಲ್ ಈಶ್ವರ್ ನಾಯ್ಕ್ ಅಧ್ಯಕ್ಷತೆಯಲ್ಲಿ ಸಮಾಜದ ಪ್ರಮುಖ ಮುಖಂಡರೊಂದಿಗೆ ಕಾಟಿ ಧ್ವಜಾರೋಹಣವನ್ನು ನೆರವೇರಿಸಿದರು.
ತದಾದ ನಂತರ ಕುಂಭಮೇಳದೊಂದಿಗೆ ಮುತ್ತೈದೆಯರು ಶ್ರೀ ಸಂತ ಸೇವಾಲಾಲ್ ಮತ್ತು ಮರಿಯಮ್ಮ ದೇವಿ ದೇವಸ್ಥಾನಗಳಿಗೆ ತೆರಳಿ ಕುಂಭದಲ್ಲಿ ತಂದಿರುವಂತಹ ಗಂಗಾಜಲವನ್ನು ಅರ್ಪಿಸಿ ನಂತರ ಕುಂಭವನ್ನು ನಾಗರಕಟ್ಟಿಗೆ ವಿಸರ್ಜನೆ ವಿಸರ್ಜಿಸಿದರು. 12 ಗಂಟೆಗೆ ಸರಿಯಾಗಿ ರಾಜ್ಯ ಮಟ್ಟದ ಕಬಡ್ಡಿ ಆಟದ ವನ್ನ ಹಮ್ಮಿಕೊಂಡಿದ್ದರು ಕಬಡ್ಡಿ ಉದ್ಘಾಟನೆಯನ್ನು ಮಾಜಿ ಮುಜರಾಯಿ ಸಚಿವರಾದ ರುದ್ರಪ್ಪ ಲಮಾಣಿ ಅವರು ನೆರವೇರಿಸಿದರು. ನಿರ್ವಹಣೆಯನ್ನು ಸೋಮ್ಲಾ ನಾಯ್ಕ ಪಿ ಎಲ್ ಡಿ ಬ್ಯಾಂಕಿನ ಮಾಜಿ ಅಧ್ಯಕ್ಷರು ನಡೆಸಿಕೊಟ್ಟರು .ಮುಖ್ಯ ಅತಿಥಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಶಿವರಾಮ ನಾಯ್ಕ್ ಭಾಗವಹಿಸಿದ್ದರು.
ಪ್ರಥಮ ಬಾರಿಗೆ ಬಂಜಾರ ಮಹಿಳಾ ಮಹಿಳಾ ಗೋಷ್ಠಿಯನ್ನು ಹಮ್ಮಿಕೊಳ್ಳಲಾಯಿತು ಹಂಪಿ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾಕ್ಟರ್ ಮಲ್ಲಿಕಾ ಘಂಟಿ ಉದ್ಘಾಟಿಸಿದರು ಮಾಜಿ ಶಾಸಕಿ ಶಾರದಾಪೂರ್ಯಾನಾಯ್ಕ ಸಹ ಭಾಗವಹಿಸಿದ್ದರು ಡಾ.ನಾಗವೇಣಿ ಡಾ. ಜ್ಯೋತಿ ಹಾಗೂ ಡಾ. ಕಾಳಮ್ಮ ಮಹಿಳಾ ವಿಷಯದ ಬಗ್ಗೆ ಗೋಷ್ಠಿಯನ್ನು ನಡೆಸಿ ಕೊಟ್ಟರು.
ಬಂದಂತ ಭಕ್ತಾದಿಗಳಿಗೆ ಬೆಳಗಿನ ಉಪಹಾರ ಕೇಸರಿಬಾತ್ ಉಪ್ಪಿಟ್ಟು ಕಾಫಿ ಮತ್ತು ಮಧ್ಯಾಹ್ನದ ಶಾವಿಗೆ ಪಾಯಸ ಪಲಾವು ಅನ್ನ ಸಾಂಬಾರು ಉಪ್ಪಿನಕಾಯಿ ವ್ಯವಸ್ಥೆ ಮಾಡಲಾಗಿತ್ತು ರಾತ್ರಿ ಊಟಕ್ಕೆ ಸಬ್ಬಕ್ಕಿ ಪಾಯಸ ಅನ್ನ ಸಾಂಬಾರ್ ತಿಳಿ ಸಾರು ಮಾಡಲಾಗುವುದು ಎಂದು ಅಭಿವೃದ್ಧಿ ಅಧಿಕಾರಿ ಪ್ರಕಾಶ್ ನಾಯ್ಕ ತಿಳಿಸಿದರು.