ನ್ಯಾಮತಿ: ಪಟ್ಟಣದಲ್ಲಿ ಫೆ 16-17-18 ರಂದು ಮೂರು ದಿನಗಳ ಕಾಲ ನಡೆಯುವ ಶಿವ ಸಂಚಾರ ನಾಟಕೋತ್ಸವ ಕಾರ್ಯಕ್ರಮವು ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದ ಆವರಣದಲ್ಲಿ ನಡೆಯುತ್ತಿರುವ ಹಿನ್ನಲೆಯಲ್ಲಿ ಫೆ, 16ರಂದು ಸಂಜೆ 7.30 ಕ್ಕೆ ಸರಿಯಾಗಿ “ನೆಮ್ಮದಿ ಅಪಾರ್ಟ್ ಮೆಂಟ್ ಹಾಸ್ಯ ನಾಟಕ”, ಮತ್ತು ಫೆ. 17 ಶುಕ್ರವಾರ ಸಂಜೆ 7.30 ಕ್ಕೆ ಸರಿಯಾಗಿ “ಬಿಜ್ಜಳ ನ್ಯಾಯ ಸಾಮಾಜಿಕ ನಾಟಕ” ನಡೆಯಲಿದ್ದು, ಫೆ 18 ಶನಿವಾರ ಸಂಜೆ 4 ಗಂಟೆಗೆ ಸರಿಯಾಗಿ ಪಾದಯಾತ್ರೆಗಳ ಮೂಲಕ ಪ್ರಮುಖ ರಾಜಭೀದಿಗಳಲ್ಲಿ ಶ್ರೀ ಪರಮಪೂಜ್ಯ ಶ್ರೀ ಶ್ರೀ ಡಾ. ಪಂಡಿತರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳ ರಾಜ ಬೀದಿ ಉತ್ಸವ ನಡೆಯುತ್ತದೆ. ತದನಂತರ ಸಂಜೆ 6:30ಕ್ಕೆ É ನಾಟಕೋತ್ಸವÀ ಸಮಾರೋಪ ಸಮಾರಂಭವು ಸಹ ನಡೆಯುವುದರಿಂದ ಇದರ ದಿವ್ಯ ಸಾನಿಧ್ಯವನ್ನು ಶ್ರೀ ಪರಮಪೂಜ್ಯ ಶ್ರೀ ಶ್ರೀ ಪಂಡಿತರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ಶ್ರೀ ತರಳಬಾಳು ಜಗದ್ಗುರು ಶಾಖಾ ಮಠ ಸಾಣೆಹಳ್ಳಿ ಇವರು ವಹಿಸಲಿದ್ದು, ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಶ್ರೀ ಡಾ. ಸಿ ಆರ್ ಜಗದೀಶ್ ಕುಲಪತಿಗಳು ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾನಿಲಯ ಶಿವಮೊಗ್ಗ ಇವರನ್ನ ಸನ್ಮಾನಿಸಲಾಗುವುದು ಎಂದು ಶಿವ ಸಂಚಾರ ಸಮಿತಿಯ ಅಧ್ಯಕ್ಷರು ತಿಳಿಸಿದರು. ಫೆ 18 ಅದೇ ದಿನದ ಸಂಜೆ 8 ಗಂಟೆಗೆ ಸಮಯಕ್ಕೆ ಸರಿಯಾಗಿ “ಚಂದ್ರಹಾಸ ಪೌರಾಣಿಕ ನಾಟಕ” ನಡೆಯುತ್ತಿರುವ ಹಿನ್ನಲೆಯಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ತಿಳಿಸಿದ್ದಾರೆ.