ಕೇಂದ್ರ ಸರ್ಕಾರವು ರಾಷ್ಟೀಯ ಆಹಾರ ಭದ್ರತಾ ಕಾಯ್ದೆಯಡಿ ಓಈSಂ ಪಡಿತರ ಚೀಟಿಗಳ ಪ್ರತಿ ಫಲಾನುಭವಿಗಳಿಗೆ ಜನವರಿ ಯಿಂದ ಡಿಸೆಂಬರ್ ಅಂತ್ಯದವರೆಗೆ ಆಹಾರ ಧಾನ್ಯಗಳನ್ನು ಉಚಿತವಾಗಿ ವಿತರಿಸುವುದರೊಂದಿಗೆ ರಾಜ್ಯಸರ್ಕಾರದ ವೆಚ್ಚದಲ್ಲಿ 1ಕೆ.ಜಿ ಅಕ್ಕಿಯನ್ನು ಹೆಚ್ಚುವರಿಯಾಗಿ ವಿತರಿಸಲಾಗುತ್ತಿದೆ.
ನ್ಯಾಯಬೆಲೆ ಅಂಗಡಿಗಳಲ್ಲಿ ಅಂತ್ಯೋದಯ ಪ್ರತಿ ಕಾರ್ಡುದಾರರಿಗೆ 35 ಕೆ.ಜಿ ಅಕ್ಕಿ ಹಾಗೂ ಬಿ.ಪಿ.ಎಲ್ ಕಾರ್ಡುದಾರರಿಗೆ ತಲಾ 7ಕೆ.ಜಿ ಅಕ್ಕಿ ಮತ್ತು ಒಪ್ಪಿಗೆ ನೀಡಿದ ಏಕಸದಸ್ಯ ಎ.ಪಿ.ಎಲ್ ಪಡಿತರ ಚೀಟಿದಾರರಿಗೆ 15ರೂಗಳಂತೆ 10 ಕೆ.ಜಿಯ ವರೆಗೆ ಪಡಿತರ ನೀಡಲಾಗುತ್ತದೆ.
ಪಡಿತರ ಚೀಟಿದಾರರು ಅಂತರ್ ರಾಜ್ಯ/ಜಿಲ್ಲೆಗಳ ನ್ಯಾಯಬೆಲೆ ಅಂಗಡಿಗಳಲ್ಲಿ ಉಚಿತವಾಗಿ ಪಡಿತರ ಪಡೆಯಲು ಅವಕಾಶ ಕಲ್ಪಿಸಿದ್ದು, ಪಡಿತರ ಚೀಟಿದಾರರು ನ್ಯಾಯಬೆಲೆ ಅಂಗಡಿಗಳಲ್ಲಿ ವಿಳಾಸ ನೀಡಿದ ತಕ್ಷಣ ರಶೀದಿ ಪಡೆದು ಅದರಂತೆ ಆಹಾರ ಧಾನ್ಯಗಳನ್ನು ಪಡೆÉಯಬೇಕು ಎಂದು ತಹಶೀಲ್ದಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.