ನ್ಯಾಮತಿ: ತಾಲೂಕು ಬಾಯ್‍ಗಡ್ ಶ್ರೀ ಸಂತ ಸೇವಾಲಾಲ್ ರವರ 284ನೇ ಜನ್ಮ ದಿನದ ಅಂಗವಾಗಿ ಕೊನೆ ದಿನವಾದ ಇಂದು ವಿಶೇಷ ಮತ್ತು ಅರ್ಥಪೂರ್ಣ ಶ್ರೇಷ್ಠ ಕಾರ್ಯಕ್ರಮ ನಡೆಯಿತು. ಗುರುಗಳಾದ ಶ್ರೀ ಬಾಬು ಸಿಂಗ್ ಮಹಾರಾಜ್ ಪೌರಾಗಡ್ ಇವರ ಅಧ್ಯಕ್ಷತೆಯಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಸಹ ಬೆಳಗ್ಗೆ 8:30 ಕ್ಕೆ ಸರಿಯಾಗಿ (ಭೂಗ್) ಹೋಮ ಕಾರ್ಯಕ್ರಮವನ್ನು ಬಣಜಾರ ಸಮಾಜದ ಧಾರ್ಮಿಕ ವಿಧಿ ವಿಧಾನಗಳ ಮೂಲಕ ಪೂಜಾ ಕೈಂ ಕೈರ್ಯದಲ್ಲಿ ಅಲ್ಲಿ ಸೇರಿರುವ ಲಕ್ಷಾಂತರ ಭಕ್ತಾದಿಗಳು ಪಾಲ್ಗೊಂಡು ತಮ್ಮ ಕಷ್ಟಗಳು ದೂರವಾಗಿ ಸಕಲ ಇಷ್ಟಾರ್ಥಗಳು ನೆರವೇರಿಸಲಿ ಎಂದು ಶ್ರೀ ಸಂತ ಸೇವಾಲಾಲ್ ರವರನ್ನ ಪ್ರಾರ್ಥನೆ ಗೈದರು.
ಮಾಜಿ ಸಚಿವ ರುದ್ರಪ್ಪ ಲಮಾಣಿ ಮತ್ತು ಮಹಾಮಡ್ ಸಮಿತಿಯ ಉಪಾಧ್ಯಕ್ಷ ಡಾ ಎಲ್ ಈಶ್ವರ್ ನಾಯ್ಕ್ ಬೋಗ ಕಾರ್ಯಕ್ರಮದ ಉದ್ದೇಶಿಸಿ ಮಾತನಾಡಿ, ಮಾನವನ ಮುಕ್ಕೋಟಿ ಸಕಲ ಜೀವರಾಶಿಗಳ ಶ್ರೇಯಸ್ಸು ಬಯಸಿ ಮತ್ತು ಎಲ್ಲ ಜಾತಿ ಧರ್ಮ ದವರಿಗೆ ಕ್ರಿಮಿಕೀಟ (ರೇಡಾ ಮಕೋಡ) ಗಳಿಗೆ ಜಾನುವಾರುಗಳಿಗೆ, ದನ ಕಟ್ಟುವ ಗೂಟಕ್ಕೂ ಮತ್ತು ರೈತ ತಮ್ಮ ಜಮೀನಿನಲ್ಲಿ ಬೆಳೆದ (ಮುಂಗಲಿ) ಕಾಳು, ಕಡಿಗಳು ಸೇರಿದಂತೆ ರೈತ ಒಳ್ಳೆ ಮನಸ್ಸಿನಿಂದ ಮಣ್ಣನ್ನ ಕೈಯಲ್ಲಿ ಇಟ್ಟುಕೊಂಡಾಗ ಆ ಮಣ್ಣು ಬಂಗಾರವಾಗಬೇಕು ಅದರ ಜೊತೆಗೆ ನಮ್ಮ ಸಮಾಜದ ಓದುತ್ತಿರುವ ವಿದ್ಯಾರ್ಥಿಗಳಿಂದ ಹಿಡಿದು ಯಜಮಾನರವರೆಗೆ ಅವರು ಮಾಡುವ ಕೆಲಸಗಳಿಗೆ ಯಶಸ್ಸು ಕೊಡಬೇಕೆಂದು ಸೇವಾಲಾಲ್‍ರಲ್ಲಿ ಪ್ರಾರ್ಥಿಸುತ್ತಾರೆ ಎಂದು ಡಾ ಎಲ್ ಈಶ್ವರ್ ನಾಯ್ಕ್ ತಿಳಿಸುತ್ತಾ, ಇಡೀ ಬಣಜಾರ ಸಮಾಜದ ಧರ್ಮ ಪ್ರಚಾರವನ್ನು ಮಾಡಿ ಸಮಾಜದ ಒಳಿತಿಗಾಗಿ ತಮ್ಮ ಜೀವನವನ್ನೇ ತ್ಯಾಗ ಮಾಡಿದ ಯಾವುದಾದರೂ ಸಂತ ಇದ್ದರೆ ಅವರೇ ಶ್ರೀ ಸಂತ ಸೇವಾಲಾಲ್. ಇವರ ಶಕ್ತಿಯಿಂದಾಗಿ ಸಂತ ಸೇವಾಲಾಲ್ ದೇವಸ್ಥಾನಕ್ಕೆ ಲಕ್ಷಾಂತರ ಜನ ಸೇರುತ್ತಿರುವುದು ಅವರ ಶಕ್ತಿ ಮಹಿಮೆಯಿಂದ ನಮ್ಮ ಸಮುದಾಯ ಎಲ್ಲಾ ರಂಗದಲ್ಲೂ ಕೂಡ ಉನ್ನತ ಮಟ್ಟಕ್ಕೆ ಬರಲಿಕ್ಕೆ ಸಾಧ್ಯವಾಗಿದೆ ಎಂದು ಸೇವಾಲಾಲ್ ಅವರನ್ನು ಸ್ಮರಿಸಿ ಮಾತನ್ನು ಮುಗಿಸಿದರು.
ಈ ಸಂದರ್ಭದಲ್ಲಿ ತಾಂಡಾ ಅಭಿವೃದಿ ನಿಗಮದ ಅಧ್ಯಕ್ಷ ಪಿ ರಾಜೀವ್ ಕುಡುಚಿ, ಕಾರ್ಯದರ್ಶಿ ರಾಘವೇಂದ್ರ ನಾಯ್ಕ್ ಸುರೇಂದ್ರ ನಾಯ್ಕ್, ಮಾರುತಿ ನಾಯ್ಕ್, ಬೋಜ ನಾಯ್ಕ್, ಹಾಗೂ ಮಹಮಡ್ ಸರ್ವ ಸಮಿತಿಯ ಅಧ್ಯಕ್ಷರು ಉಪಾಧ್ಯಕ್ಷರು ನಿರ್ದೇಶಕರುಗಳು ಹಾಗೂ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ಶಿವರಾಮ ನಾಯ್ಕ್, ಗೋಪಾಲ್ ನಾಯ್ಕ್, ಆಡಳಿತ ಮಂಡಳಿಯ ಸಿಬ್ಬಂದಿ ವರ್ಗದವರು ಮಾಲಾಧಾರಿಗಳು ಸರ್ವ ಭಕ್ತಾದಿಗಳು ಸಹ ಉಪಸ್ಥಿತಿಯಲ್ಲಿದ್ದರು.