ನ್ಯಾಮತಿ: ತಾಲೂಕಿನ ಮರಿಗೊಂಡನಹಳ್ಳಿಯ ಸ. ಹಿ. ಪ್ರಾಥಮಿಕ ಶಾಲೆಗೆ ಶ್ರೀ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ ವತಿಯಿಂದ ಶುದ್ದಕುಡಿಯುವ ನೀರಿನ ಘಟಕವನ್ನು ಶ್ರೀ. ಕ್ಷೇ. ಧ. ಗ್ರಾ. ಯೋಜನೆಯ ಜಿಲ್ಲಾ ನಿರ್ದೇಶಕರಾದ ಶ್ರೀ ವಿಜಯಕುಮಾರ ನಾಗನಾಳ್ ಹಸ್ತಾಂತರಿಸಿದರು.
ಜಿಲ್ಲಾ ನಿರ್ದೇಶಕ ವಿಜಯಕುಮಾರ್ ನಾಗನಾಳ ಮಾತನಾಡಿ ಇಂದಿನ ಕಾಲದಲ್ಲಿ ಮಕ್ಕಳನ್ನು ಎಷ್ಟು ಚನ್ನಾಗಿ ಬೆಳೆಸುತ್ತೆವೆ ಅನ್ನುವದು ಮುಖ್ಯವಲ್ಲ, ಅವರಿಗೆ ಉತ್ತಮ ಸಂಸ್ಕಾರಯುತ ಶಿಕ್ಷಣ ಕೊಡಿಸುವದು ಪ್ರಮುಖ ಎಂದು ನುಡಿದರು.
ಪಾಲಕರು ಮಕ್ಕಳಿಗೆ ಶಾಲೆಯಲ್ಲಿ ಕಲಿಸಿದ ಪಾಠವನ್ನು ಪ್ರತಿದಿನ ಮನೆಯಲ್ಲಿ ಪಟಿಸುವಂತಾಗಬೇಕು ಹೇಳುತ್ತ, ಗ್ರಾಮಾಭಿವೃದ್ಧಿ ಯೋಜನೆವತಿಯಿಂದ ಶಾಲೆಗಳಿಗೆ ಪೂಜ್ಯ ಹೆಗ್ಗಡೆಯವರ ಆಶಯದಂತೆ ಮೂಲಬೂತ ಸೌಕರ್ಯಗಳಾದ ಕೊಠಡಿ, ಶೌಚಾಲಯ , ಪಿಠೊಪಕರಣ, ಸ್ವಯಂ ಸೇವಕ ಶಿಕ್ಷಕರನ್ನು ಒದಗಿಸುತ್ತಿದ್ದಾರೆ ಎಂದರು. ತಾಲೂಕು ಯೋಜನಾಧಿಕಾರಿ ಬಸವರಾಜ ಅಂಗಡಿ ಮಾತನಾಡಿ ವಿಮಾಗ್ರಾಮ ಕಾರ್ಯಕ್ರಮದಡಿಯಲ್ಲಿ ಈ ಊರಿನ ಶಾಲೆಗೆ ಶುದ್ದ ಕುಡಿಯುವ ನೀರಿನ ಘಟಕ ಒದಗಿಸಲಾಗಿದ್ದು ವಿದ್ಯಾರ್ಥಿಗಳು ಸರಿಯಾದ ರೀತಿಯಲ್ಲಿ ಸದುಪಯೊಗ ಪಡಿಸಿಕೊಳ್ಳಬೆಕೆಂದರು. ಎಸ್ ಡಿ ಎಂ ಸಿ ಅಧ್ಯಕ್ಷರಾದ ವಿಜಯ, ಮುಖ್ಯೋಪಾಧ್ಯಾರರಾದ ನರಸಿಂಹ, ಸಹಶಿಕ್ಷಕರು ಹಾಗೂ ಒಕ್ಕೂಟದ ಪದಾಧಿಕಾರಿಗಳು, ಸಂಘದ ಸದಸ್ಯರು, ಅಂಗವಾಡಿ ಕಾರ್ಯಕರ್ತರು, ಮೆಲ್ವಿಚಾರಕ ವಸಂತ, ಸೆವಾಪ್ರತಿನಿಧಿ ಆರತಿ ಮತ್ತು ಶಾಲಾ ವಿದ್ಯಾರ್ಥಿಗಳು
ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಶಿಕ್ಷಕ ಸಂದಿಪ ಕಾರ್ಯಕ್ರಮ ನಿರ್ವಹಿಸಿ ಸ್ವಾಗತಿಸಿದರು.

Leave a Reply

Your email address will not be published. Required fields are marked *