ನ್ಯಾಮತಿ: ಪಟ್ಟಣದಲ್ಲಿರುವ ಸರ್ಕಾರಿ ಮಹಿಳಾ ಪದವಿಪೂರ್ವ ಕಾಲೇಜಿನಲ್ಲಿಂದು ಗಣಕಯಂತ್ರ ಪ್ರಯೋಗಾಲಯದ (ಕಂಪ್ಯೂಟರ್ ತರಬೇತಿ ಕೇಂದ್ರ)ವನ್ನು ತರಳಬಾಳು ಜಗದ್ಗುರು ಶಾಖಾ ಮಠದ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಸಾಣೆಹಳ್ಳಿ ಇವರ ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು.
ಸಾಣೆಹಳ್ಳಿ ಶ್ರೀಗಳು ನಂತರ ಮಾತನಾಡಿ ಯಾವ ವ್ಯಕ್ತಿ ಸದಾ ಕ್ರಿಯಾಶೀಲರಾಗಿರುತ್ತಾರೋ ಅವರು ಬದುಕುತ್ತಾರೆ, ಕ್ರಿಯಾಶೀಲ ಅಲ್ಲದ ವ್ಯಕ್ತಿ ಬೇಗ ಮುಕ್ತಿಯನ್ನು ಹೊಂದುತ್ತಾರೆ. ಶಿವರಾತ್ರಿ ಶರಣರಿಗೆ ನಿತ್ಯ ಶಿವರಾತಿ,್ರ ಕಣ್ಣು ಮುಚ್ಚಿದರೆ ಶವರಾತಿ,್ರ ಕಣ್ಣ ತೆಗೆದರೆ ಶಿವರಾತ್ರಿ. ದೇವಸ್ಥಾನದ ಗಂಟೆ ಹೊಡೆಯುವುದಕ್ಕಿಂತ ಶಾಲೆಯ ಗಂಟೆ ಹೆಚ್ಚಾಗಿ ಒಡೆದರೆ ಜ್ಞಾನ ಬರುತ್ತದೆ. ದೇವರು ವರ ಮತ್ತು ಶಾಪ ಕೊಡಲಿಕ್ಕೆ ಸಾಧ್ಯವಿಲ್ಲ . ಮಕ್ಕಳೇ ನಿಜವಾದ ದೇವರು . ಮಕ್ಕಳಿಗೆ ವಿದ್ಯೆ ಕಲಿಸಿದರೆ ಶಿಕ್ಷಣ ದೊರೆತು ತಲೆಯೆತ್ತಿ ಬಾಳುವಂತಹ ಸ್ಥಿತಿ ಬರುತ್ತದೆ. ಶಾಲೆ ತೆರೆಯುವುದು ಎಷ್ಟು ಮುಖ್ಯವೋ ಆ ಶಾಲೆಗೆ ಮೂಲಭೂತ ಸೌಕರ್ಯ ಒದಗಿಸುವುದು ಅಷ್ಟೇ ಅತ್ಯವಶ್ಯಕ, ಈಗಿನ ಪೆÇೀಷಕರು ಸರ್ಕಾರಿ ಶಾಲೆಯಲ್ಲಿ ಸೇರಿಸುವುದಕ್ಕಿಂತ ಪ್ರವೇಟ್ ಶಾಲೆಗೆ ಸೇರಿಸುವುದು ಆಡಂಬರದ ಬದುಕು ಆಗಿದೆ. ಸರ್ಕಾರಿ ಶಾಲೆಯಲ್ಲಿ ಸಿಗುವ ಶಿಕ್ಷಣ ಉನ್ನತ ಮಟ್ಟದಲ್ಲಿರುತ್ತದೆ, ಪರಿಣತಿ ಹೊಂದಿರುವ ಶಿಕ್ಷಕರು ಇರುವುದರಿಂದ ಅಲ್ಲಿಗೆ ಮಕ್ಕಳನ್ನು ಸೇರಿಸಿ ಎಂದು ತಿಳಿಸಿದರು.
ಶ್ರೀಗಳು ಮಾತನ್ನು ಮುಂದುವರಿಸಿ ದಿವಂಗತ ಶ್ರೀಮತಿ ಬಸಮ್ಮ ಮತ್ತು ಡಾಕ್ಟರ್ ಜಿ ಶೇಖರಪ್ಪ ಮಾದನಬಾವಿ ಇವರ ಸ್ಮರ ಸ್ಮರಣಾರ್ಥವಾಗಿ ಅವರ ಮಕ್ಕಳು ಅವರು ಓದಿದ ಸರ್ಕಾರಿ ಶಾಲೆಗೆ 10,00,000 ಮೌಲ್ಯವುಳ್ಳ ಸುಮಾರು 25 ಕಂಪ್ಯೂಟರ್ ಶಾಲೆಗೆ ಉಚಿತವಾಗಿ ನೀಡಿರುವುದು ಶ್ಲಾಘನೀಯ. ಈ ಕೊಡುಗೆ ದಾನಿಗಳು ಕಂಪ್ಯೂಟರ್ ಅನ್ನು ಕೊಡಿಸಿರಬಹುದು ಆದರೆ ಕಂಪ್ಯೂಟರ್ ಅನ್ನ ಹೇಳಿಕೊಡಲಿಕ್ಕೆ ಸರ್ಕಾರದಿಂದ ಶಿಕ್ಷಕರು ಇರುವುದಿಲ್ಲ ಹಾಗಾಗಿ ಇಲ್ಲಿ ಸೇರಿರುವ ಯಾರಾದರೂ ಪ್ರತಿ ತಿಂಗಳು ಒಬ್ಬ ಟೀಚರಿಗೆ ಹಣವನ್ನು ಕೊಟ್ಟು ಹೇಳಿಕೊಡುವಂತಹ ಶಿಕ್ಷಕರ ಬೇಕಾಗಿರುವುದರಿಂದ.

ಯಾರಾದರೂ ಸಹಾಯ ಮಾಡಬಹುದು ಅಂತ ಶ್ರೀಗಳ ಪ್ರಶ್ನೆಗೆ ಹೊನ್ನಾಳಿ ತಾಲೂಕಿನ ಮಾಜಿ ಶಾಸಕ ಡಿಜಿ ಶಾಂತನಗೌಡ್ರು ಕಂಪ್ಯೂಟರ್ ಶಿಕ್ಷಕರಿಗೆ ಒಂದು ತಿಂಗಳಿನ ವೇತನವನ್ನು ಕಂಪ್ಯೂಟರ್ ತರಬೇತಿ ವಿದ್ಯಾರ್ಥಿಗಳು ಪಡೆಯುವವರೆಗೆ ವೇತನ ನೀಡುತ್ತೇನೆ ಎಂದು ಹೇಳಿಕೆಗೆ ಸುಮಾರು 8 ರಿಂದ 10 ದಾನಿಗಳು ಪ್ರತಿ ತಿಂಗಳು ನಾವು ಹಣವನ್ನು ಬರುಸುತ್ತೇವೆ ಎಂದು ಶ್ರೀಗಳ ಎದುರುಗಡೆ ಹೇಳಿದ ಘಟನೆ ನಡೆಯಿತು.
ಸಭೆಯಲ್ಲಿ ಪಾಲ್ಗೊಂಡ ಮಾಜಿ ಶಾಸಕ ಡಿಜಿ ಶಾಂತನಗೌಡ್ರು ಅವರು ಮಾತನಾಡಿ ಮಾದನ ಬಾವಿ ಶೇಖರಪ್ಪ ಮತ್ತು ಅವರ ಮಕ್ಕಳು ವಿದ್ಯಾರ್ಥಿಗಳಿಗೆ ಉಚಿತವಾಗಿ 10 ಲಕ್ಷ ಮೌಲ್ಯದ ಕಂಪ್ಯೂಟರ್ ಶಾಲೆಗೆ ಕೊಡಿಸಿರುವುದು ಶ್ಲಾಘನೀಯ. ಆದರೆ ನಮ್ಮಂತ ರಾಜಕಾರಣಿಗಳು ನಾವೇನಾದರೂ ಕಂಪ್ಯೂಟರ್ ಅನ್ನು ಕೊಡಿಸಿದ್ದರೆ ಬೀದಿ ಬೀದಿಗಳಲ್ಲಿ ಫ್ಲಕ್ಸ್ ಬ್ಯಾನರ್ ಹಾಕಿ ನಾಟಕವನ್ನು ಮಾಡುತ್ತಿದ್ದೆವು, ಆದರೆ ಮಾದನ ಬಾವಿಯ ಶೇಖರಪ್ಪ ಮತ್ತು ಮಕ್ಕಳು ಈ ರೀತಿ ಮಾಡದೆ ದೊಡ್ಡತನವನ್ನು ಮೆರೆದಿದ್ದಾರೆ ಎಂದು ಅವರನ್ನು ಸ್ಲಾಗಿಸಿ ಅವರ ಕುಟುಂಬಕ್ಕೆ ಇನ್ನೂ ದೇವರು ಆರ್ಥಿಕವಾಗಿ ಮುಂದುವರೆಯಲಿ ಅದರ ಜೊತೆಗೆ ಆರೋಗ್ಯವನ್ನು ವೃದ್ಧಿಸಿ ಅವರ ಕುಟುಂಬ ಶಾಂತಿಯುತವಾಗಿ ಬಾಳಲಿ ಎಂದು ದೇವರಲ್ಲಿ ಪ್ರಾರ್ಥಿಸಿದರು.
ಎಂಜಿ ರುದ್ರೇಗೌಡರು ಪ್ರಾಸ್ತಾವಿಕ ನುಡಿಯನ್ನು ನುಡಿಯುತ್ತಾ ನಾವು ಕಲಿತಿದ್ದೆ ಇದೇ ಶಾಲೆಯಲ್ಲಿ ದೇವರು ನಮಗೆ ಆರ್ಥಿಕವಾಗಿ ಸಬಲರ ಆಗಲಿಕ್ಕೆ ಕಾರಣರಾಗಿದ್ದು ಅದರಲ್ಲಿ ಅಲ್ಪ ಸ್ವಲ್ಪ ಸಹಾಯವನ್ನು ಯಾರಿಗೆ ಮಾಡಬೇಕು ಎಂದು ಯೋಚನೆ ಮಾಡಿ, ನಾವು ಕಲಿತ ಶಾಲೆಯಲ್ಲಿ ಬಡ ವಿದ್ಯಾರ್ಥಿಗಳು ಹಣವನ್ನು ಕೊಟ್ಟು ಕಂಪ್ಯೂಟರ್ ಕಲಿಲಿಕ್ಕೆ ಸಾಧ್ಯವಿಲ್ಲ, ಹಾಗಾಗಿ ನಾವು ಕೊಟ್ಟಂತ ದಾನ ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗಲಿ ಎಂದು ನಮ್ಮ ತಂದೆ ತಾಯಿಯರ ಸವಿನೆನಪಿಗಾಗಿ ಸುಮಾರು 10 ಲಕ್ಷ ಮೌಲ್ಯದ ಕಂಪ್ಯೂಟರ್ ಕೊಡಿಸಿದ್ದೇವೆ, ಈ ಶಾಲೆಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕಂಪ್ಯೂಟರ್ ನಿಂದ ಹೆಚ್ಚು ಜ್ಞಾನವನ್ನು ಪಡೆಯಿರಿ ಎಂದು ಮಾತನ್ನು ಮುಗಿಸಿದರು.
ಈ ಸಂದರ್ಭದಲ್ಲಿ ಎಸ್ ಡಿ ಎಮ್ ಸಿ ಅಧ್ಯಕ್ಷ ಸುಮಾ ಕರಿಬಸಪ್ಪ ಶಾಸಕರಾದ ಎಂಪಿ ರೇಣುಕಾಚಾರ್ಯ, ಬಿಇಓ ನಂಜರಾಜ, ಡಾ.ಪುಷ್ಪ ಪಾಲಾಕ್ಷಪ್ಪ ಡಾ. ಪಾಲಾಕ್ಷಪ್ಪ ಡಾ. ಉಮಾದೇವಿ, ಸರ್ವಮಂಗಳ, ರುದ್ರೇಗೌಡ, ಡಾಕ್ಟರ್ ಜಲೇಶ್ ಕುಮಾರ್, vice principal girijamma. ಶಾಲೆಯ ಹಳೆಯ ವಿದ್ಯಾರ್ಥಿಗಳು ಸಹ ಉಪಸ್ಥಿತಿಯಲ್ಲಿದ್ದರು.