ನ್ಯಾಮತಿ: ಪಟ್ಟಣದಲ್ಲಿಂದು ಮರಾಠ ಕ್ಷತ್ರಿಯ ಸಮಾಜದ ವತಿಯಿಂದ ಶ್ರೀ ಛತ್ರಪತಿ ಶಿವಾಜಿ ಮಹಾರಾಜರ ಜಯಂತೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ನ್ಯಾಮತಿ ಮರಾಠ ಕ್ಷತ್ರಿಯ ಸಮಾಜದ ಬಾಂಧವರು ಕುಲದೈವರರಾದ ವಿಠಲ ಮತ್ತು ರುಖುಮಾಯಿ ದೇವರುಗಳಿಗೆ ಪೂಜೆ ಸಲ್ಲಿಸಿ. ವಾಹನದಲ್ಲಿ ಶಿವಾಜಿ ಮಹಾರಾಜರ ಕಂಚಿನ ಪುಥ್ಥಳಿಗೆ ತಿಲಕ ಇಟ್ಟು ಮುತ್ತೈದೆಯರಿಂದ ಮಹಾಮಂಗಳಾರತಿಯೊಂದಿಗೆ ಪ್ರಮುಖ ರಾಜ ಬೀದಿಗಳಲ್ಲಿ ಮೆರವಣಿಗೆಯೊಂದಿಗೆ ಬೈಕ್ ರ್ಯಾಲಿಯೂ ಸಹ ಮಾಡಲಾಯಿತು.
ಶ್ರೀ ಛತ್ರಪತಿ ಶಿವಾಜಿ ಮಹಾರಾಜರ ಜಯಂತೋತ್ಸವ ಕಾರ್ಯಕ್ರಮವನ್ನು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂಪಿ ರೇಣುಕಾಚಾರ್ಯರವರು ಉದ್ಘಾಟಿಸಿ ನಂತರ ಮಾತನಾಡಿ ಶಿವಾಜಿ ಮಹಾರಾಜರು ಕ್ಷತ್ರಿಯ ಸಮಾಜಕ್ಕೆ ಮಾತ್ರ ಮೀಸಲು ಅಲ್ಲ, ಅವರು ಬ್ರಿಟಿಷರ ಮತ್ತು ಮುಸ್ಲಿಮ್ಸ್ ರನ್ನು ಸದೆಬಡೆದು ಅವರ ವಿರುದ್ಧ ಹೋರಾಡಿ ಹಿಂದೂ ಸಮಾಜದ ನಾಯಕರಾಗಿದ್ದಾರೆ ಎಂದು ತಿಳಿಸಿದರು.
ಜೆಡಿಎಸ್ ಪಕ್ಷದ ಮುಖಂಡರಾದ ಬಿಜಿ ಶಿವಮೂರ್ತಿಗೌಡ್ರು ನಂತರ ಮಾತನಾಡಿ ಶಿವಾಜಿ ಮಹಾರಾಜರು ಹೋರಾಟದ ಫಲವಾಗಿ ಹಿಂದೂ ಸಮಾಜ ನೆಮ್ಮದಿ ಜೀವನವನ್ನು ನಡೆಸುತ್ತಿದ್ದಾರೆ. ಇಂಥ ಪುಣ್ಯಾತ್ಮರು ನಿಮ್ಮ ಸಮಾಜದಲ್ಲಿ ಹುಟ್ಟಿರೋದಕ್ಕೆ ಕ್ಷತ್ರಿಯ ಸಮಾಜಕ್ಕೆ ಅಭಿನಂದನೆಯನ್ನು ಸಲ್ಲಿಸುತ್ತಿದ್ದೇನೆ ಎಂದು ಹೇಳಿದರು.
ಛತ್ರಪತಿ ಶಿವಾಜಿ ಮಹಾರಾಜರ ಕುರಿತು ಕಾಂಗ್ರೆಸ್ ಮುಖಂಡ ಬಿ ಸಿದ್ದಪ್ಪ ಮಾತನಾಡಿ ಸಿಂಪಿ ಸಮಾಜ ನಮಗೆ ಬಟ್ಟೆಯನ್ನು ಒಲೆದು ಕೊಟ್ಟಿದ್ದರಿಂದ
ನಾವುಗಳು ಗೌರವಹಿತವಾಗಿ ಸಮಾಜದಲ್ಲಿ ಓಡಾಡುತ್ತಿದ್ದೇವೆ ಎಂದು ತಿಳಿಸಿದರು. ಹಾಗಾಗಿ ಆ ಸಮುದಾಯಕ್ಕೆ ಎಷ್ಟೇ ಗೌರವ ಕೊಟ್ಟರು ಸಾಲದು ಎಂದು ತಿಳಿಸಿದರು.
ಅಧ್ಯಕ್ಷರಾದ ರಾಜಾರಾಮ್ ಮಾತನಾಡಿ ಜೈ ಶಿವಾಜಿ ಜೈ ಭವಾನಿ ಜೈ ಶ್ರೀ ರಾಮ್ ಮತ್ತು ಪರಶುರಾಮ್ ನಮ್ಮ ಸಮಾಜದಲ್ಲಿ ಹುಟ್ಟಿರುವುದಕ್ಕೆ ನಮ್ಮ ಜೀವನ ಪಾವನವಾಗಿದೆ ಎಂದರು.
ಸಮಾಜದ ಅಧ್ಯಕ್ಷರಾದ ನಾಗರಾಜ್ ಮಾತನಾಡುತ್ತ ಹಿಂದೂ ಧರ್ಮ ಉಳಿಯಬೇಕಾದರೆ ಛತ್ರಪತಿ ಶಿವಾಜಿ ಮಹಾರಾಜರು ಕಾರಣ ಅವರು ಮರಾಠ ಸಮಾಜಕ್ಕೆ ಮಾತ್ರ ಸೀಮಿತವಾಗಿಲ್ಲ, ಇಡೀ ಹಿಂದೂತ್ವ ಸಮಾಜವನ್ನು ಉಳಿಸಿದ್ದಾರೆ ಮತ್ತು ಬೆಳೆಸಿದ್ದಾರೆ ಎಂದುರು.
ಶ್ರೀಮತಿ ಸುನಿತಾ ಹನುಮಂತರಾವ್ ಮತ್ತು ಸಂಗಡಿಗರಿಂದ ಪ್ರಾರ್ಥನೆಯನ್ನು ನಡೆಸಿಕೊಟ್ಟರು.
ಪ್ರಾಸ್ತಾವಿಕ ನುಡಿಯನ್ನು ಕಾರ್ಯದರ್ಶಿ ಹನುಮಂತರಾವ್ ನಡೆಸಿದರು.
ಈ ಸಂದರ್ಭದಲ್ಲಿ ಅಧ್ಯಕ್ಷರಾದ ಸತೀಶ್ ಎಸ್, ಖಜಾಂಚಿ ಮನೋಹರ್, ಕಾರ್ಯದರ್ಶಿ ಹನುಮಂತರಾವ್, ತಹಸಿಲ್ದಾರ್ ಗಿರೀಶ್ ಬಾಬು.,ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿ ಗಣೇಶ್ ರಾವ್ ಪಿ, .ಗೃಹರಕ್ಷಕ ದಳದ ಅಧಿಕಾರಿ ರಾಘವೇಂದ್ರ ಮೊಳೆಕರ್, ಸೋಮ ಸುಂದರ್ ಇತರೆ ಮರಾಠ ಸಮಾಜದ ಮುಖಂಡರು ಸಹ ಪಾಲ್ಗೊಂಡಿದ್ದರುಸಹ ಪಾಲ್ಗೊಂಡಿದ್ದರು.