ಹುಣಸಘಟ್ಟ: ಹೊನ್ನಾಳಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಫೆಬ್ರವರಿ 26ರ ಭಾನುವಾರದಂದು 8ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಹಮ್ಮಿಕೊಂಡಿದ್ದು ಸಾಸ್ವೆಹಳ್ಳಿಯ ಅವರ ನಿವಾಸದಲ್ಲಿ ವಿಶ್ರಾಂತ ಉಪನ್ಯಾಸಕ ಹಿರಿಯ ಸಾಹಿತಿ ಸಮ್ಮೇಳನಾಧ್ಯಕ್ಷ ಕೆ ಪಿ ದೇವೇಂದ್ರಯ್ಯ ಅವರನ್ನು ತಾಲೂಕು ಕಸಾ ಪ ಅಧ್ಯಕ್ಷ ಜಿ ಮುರಿಗೆಪ್ಪ ಗೌಡ್ರು ನೇತೃತ್ವದಲ್ಲಿ ಅಧಿಕೃತವಾಗಿ ಆಹ್ವಾನ ಪತ್ರಿಕೆ ನೀಡಿ ಆಹ್ವಾನಿಸಲಾಯಿತು.
ಈ ಸಂದರ್ಭದಲ್ಲಿ ಕಸಾಪ ಅಧ್ಯಕ್ಷ ಜಿ ಮುರಿಗೆಪ್ಪ ಗೌಡ್ರು ಪತ್ರಿಕೆಯೊಂದಿಗೆ ಮಾತನಾಡಿ ಹೊನ್ನಾಳಿ ಸರ್ಕಾರಿ ಆಸ್ಪತ್ರೆ ಎದುರಿನ ಡಾ. ಬಿ ಆರ್ ಅಂಬೇಡ್ಕರ್ ಭವನದಲ್ಲಿ ಫೆಬ್ರವರಿ 26ರಂದು ತಾಲೂಕು 8ನೇ ಕನ್ನಡ ಸಾಹಿತ್ಯ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ. ಅಂದು ಬೆಳಿಗ್ಗೆ ಉಪ ವಿಭಾಗಾಧಿಕಾರಿ ಹುಲ್ಲು ಮನಿ ತಿಮ್ಮಣ್ಣ ರಾಷ್ಟ್ರಧ್ವಜಾರೋಹಣ ನೆರವೇರಿಸುವರು ಹಾಗೂ ನಾಡ ಧ್ವಜವನ್ನು ಪುರಸಭೆ ಅಧ್ಯಕ್ಷ ಸುಮಾ ಮಂಜುನಾಥ್ ಆರೋಹಣ ಮಾಡಲಿದ್ದಾರೆ.
ರಾಷ್ಟ್ರಕವಿ ಡಾ. ಜಿ ಎಸ್ ಶಿವರುದ್ರಪ್ಪನವರ ಮಹಾದ್ವಾರವನ್ನು ತಾಲೂಕು ಪಂಚಾಯಿತಿ ಇ ಓ ರಾಮಭೂವಿ ಉದ್ಘಾಟಿಸಲಿದ್ದಾರೆ. ಜಾನಪದ ವಿವಿಧ ಕಲಾ ಮೇಳಗಳೊಂದಿಗೆ ಅಧಿಕಾರಿಗಳು, ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಸಾಹಿತ್ಯ ಚಿಂತಕರು ಪರಿಷತ್ತಿನ ಸದಸ್ಯರ ಅದ್ದೂರಿ ಮೆರವಣಿಗೆಗೆ ತಹಶಿಲ್ದಾರ್ ತಿರುಪತಿ ಪಟೇಲ್ ಪುರಸಭೆ ಅಧ್ಯಕ್ಷ ಸುಮಾ ಮಂಜುನಾಥ್ ಚಾಲನೆ ಗೊಳಿಸುವರು. ಪುರಸಭೆ ಸದಸ್ಯರು ಪೊಲೀಸ್ ಇನ್ಸ್ಪೆಕ್ಟರ್ ಸಿದ್ದನಗೌಡ ಭಾಗವಹಿಸಲಿದ್ದಾರೆ.
ಕೃತಿ ಲೋಕಾರ್ಪಣೆ: ಬೆಳಿಗ್ಗೆ 10:30 ಕ್ಕೆ ನಡೆಯಲಿರುವ ಉದ್ಘಾಟನಾ ಸಮಾರಂಭದ ಸಾನಿಧ್ಯವನ್ನು ಹಿರೇಕಲ್ ಮಠದ ಡಾ. ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ವಯಸ್ಸಲ್ಲಿದ್ದಾರೆ. ಶಾಸಕ ಎಂ ಪಿ ರೇಣುಕಾಚಾರ್ಯ ಉದ್ಘಾಟಿಸಲಿದ್ದಾರೆ. ಡಾ. ರಾಜಕುಮಾರ್ ಅಧ್ಯಕ್ಷತೆ ವಹಿಸಲಿದ್ದು ಕಸಾಪ ಜಿಲ್ಲಾಧ್ಯಕ್ಷ ವಾಮದೇವಪ್ಪ ಆಶಯ ನುಡಿ ನುಡಿಯಲಿದ್ದಾರೆ. ಇದೇ ವೇಳೆ ಸಾಹಿತಿಗಳ ಕೃತಿಗಳ ಲೋಕಾರ್ಪಣೆ ಕಾರ್ಯಕ್ರಮ ನಡೆಯಲಿದೆ.
ಮಧ್ಯಾಹ್ನ ಸಾಹಿತ್ಯ ಗೋಷ್ಠಿ ಅಧ್ಯಕ್ಷತೆ ಸಾಹಿತಿ ಯುಎನ್ ಸಂಗನಾಳ ಮಠ ವಹಿಸಲಿದ್ದು ಹೊನ್ನಾಳಿ ತಾಲೂಕು ಸಾಹಿತ್ಯ ಮತ್ತು ಸಾಂಸ್ಕೃತಿಕ ಹಿನ್ನೆಲೆ ವಿಷಯವಾಗಿ ಸಹ ಪ್ರಾಧ್ಯಾಪಕ ಡಾ. ಲೋಕೇಶ್ ಎಂಆರ್, ಹೊನ್ನಾಳಿ ಪದದ ನಿಷ್ಪತ್ತಿ ವಿಷಯವಾಗಿ ಉಪನ್ಯಾಸಕ ಗುರುಬಸವೇಶ್ವರ ಸ್ವಾಮಿ ಜಿಎಂ, ಉಪನ್ಯಾಸ ನೀಡಲಿದ್ದಾರೆ. ಕವನ ವಾಚನ ಗೋಷ್ಠಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಾಹಿತಿ ಡಾ. ಎಚ್ ಎಸ್ ರುದ್ರೇಶ್ ವಹಿಸಲಿದ್ದಾರೆ. ಸಂಜೆ ಸಮಾರೋಪ ಸಮಾರಂಭ ನಡೆಯಲಿದ್ದು ಹೊಟ್ಯಾಪುರ ಹಿರೇಮಠದ ಶ್ರೀ ಗಿರಿ ಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ ಸಾನಿಧ್ಯ ವಹಿಸಲಿದ್ದು ಅಧ್ಯಕ್ಷತೆಯನ್ನು ಮಾಜಿ ಶಾಸಕ ಡಿಜಿ ಶಾಂತನಗೌಡರು ವಹಿಸಲಿದ್ದಾರೆ. ಸಮ್ಮೇಳನಾಧ್ಯಕ್ಷ ಕೆ ಪಿ ದೇವೇಂದ್ರಯ್ಯ ಸಮೀಕ್ಷಾ ನುಡಿ ನುಡಿಯಲಿದ್ದಾರೆ. ವಿಶ್ರಾಂತ ಉಪನ್ಯಾಸಕ ಡಿ ಶಿವರುದ್ರಪ್ಪ ಸಮಾರೋಪ ಭಾಷಣ ಮಾಡಲಿದ್ದಾರೆ ಎಂದರು.
ಕಸಾಪ ಹೊನ್ನಾಳಿ ಕಾರ್ಯದರ್ಶಿ ಕೆ ಶೇಖರಪ್ಪ ಕೋಶಾಧ್ಯಕ್ಷ ಡಿಎಂ ನಿಜಲಿಂಗಪ್ಪ ಜಿಹೆಚ್ ರಾಜು ಎನ್ ಕೆ ಆಂಜುನೇಯ ಸಾಸ್ವೆಹಳ್ಳಿ ಹೋಬಳಿ ಘಟಕದ ಅಧ್ಯಕ್ಷ ಜೆಪಿ ಜಗನ್ನಾಥ್ ಪಟೇಲ್, ಎಚ್ ಕೆ ರಮೇಶ್ ಬೆನಕಪ್ಪ ಚಾರ್ ವನಜಾಕ್ಷಮ್ಮ ರಮೇಶ್ ಮಡಿವಾಳ ಹಾಲೇಶಪ್ಪ ಪರಮೇಶ್ವರಪ್ಪ ಧನರಾಜಪ್ಪ ಮತ್ತು ಸಾಹಿತ್ಯ ಚಿಂತಕರು ಉಪಸ್ಥಿತರಿದ್ದರು.