ನ್ಯಾಮತಿ: ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ 2ನೇ ನ್ಯಾಮತಿ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಫೆ.24ರಂದು ಎ.ಪಿ.ಎಂ.ಸಿ ಆವರಣದ ಸಭಾಂಗಣದಲ್ಲಿ ನಡೆಯಲಿದೆ.
ಫೆ. 24ರಂದು ಬೆಳಿಗ್ಗೆ 7-30ಕ್ಕೆ ಎಪಿಎಂಸಿ ಆವರಣದಲ್ಲಿ ತಹಶೀಲ್ದಾರ್ ಬಿ.ವಿ.ಗಿರೀಶಬಾಬು ಅವರು ರಾಷ್ಟ್ರ ಧ್ವಜಾರೋಹಣ, ಮುಖ್ಯಾಧಿಕಾರಿ ಪಿ.ಗಣೇಶರಾವ್ ನಾಡ ಧ್ವಜಾರೋಹಣ ಮತ್ತು ಕಸಾಪ ಅಧ್ಯಕ್ಷ ಡಿ.ಎಂ.ಹಾಲಾರಾಧ್ಯ ಅವರು ಪರಿಷತ್ತಿನ ಧ್ವಜಾರೋಹಣ ನೆರವೇರಿಸುವರು. ದೈಹಿಕ ಶಿಕ್ಷಣ ಶಿಕ್ಷಕರಾದ ಎ.ಮಲ್ಲೇಶಪ್ಪ, ಕೆ.ನಾಗರತ್ನಮ್ಮ,ವಿ.ಎಂ.ಈಶ್ವರಯ್ಯ, ಆರ್.ಯತಿರಾಜು, ಪ್ಲಟೂನ್ ರಾಘವೇಂದ್ರ ಮುಳೇಕರ್, ಎಂ.ಜಿ.ಕವಿರಾಜ, ಸಿ.ಕೆ.ಬೋಜರಾಜ, ಆರುಂಡಿ ನಾಗರಾಜ, ವಿವೇಕಾನಂದ ವಿದ್ಯಾಸಂಸ್ಥೆ ಬಾಲಕಿಯರ ಪ್ರೌಢಶಾಲೆ ವಿದ್ಯಾರ್ಥಿನಿಯರು ಇರುತ್ತಾರೆ.
ಮಾಜಿ ಶಾಸಕ ಡಾ.ಡಿ.ಬಿ.ಗಂಗಪ್ಪ ಅವರು ಆಸ್ಥಾನ ವಿದ್ವಾನ್ ಬಿ.ದೇವೇಂದ್ರಪ್ಪ ಮಹಾದ್ವಾರ ಉದ್ಘಾಟನೆ ನೆರವೇರಿಸುವರು.
ವೀರಭದ್ರೇಶ್ವರ ದೇವಸ್ಥಾನದಿಂದ ಬೆಳಿಗ್ಗೆ 8-45ಕ್ಕೆ ತಾಲ್ಲೂಕು ಕಾರ್ಯನಿರ್ವಾಹಕ ಅಧಿಕಾರಿ ರಾಮಭೋವಿ ಅವರು ಸಮ್ಮೇಳನಾಧ್ಯಕ್ಷರ ಮೆರವಣಿಗೆಗೆ ಚಾಲನೆ ನೀಡುವರು.
ರೈತ ಮುಖಂಡ ಎಚ್.ಎಸ್. ರುದ್ರಪ್ಪ ವೇದಿಕೆಯಲ್ಲಿ ನಡೆಯುವ ಕಾರ್ಯಕ್ರಮದ ನೇತೃತ್ವವನ್ನು ಒಡೆಯರ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ವಹಿಸುವರು. ನಿಕಟಪೂರ್ವ ಅಧ್ಯಕ್ಷ ಜೀನಹಳ್ಳಿ ಸಿದ್ಧಲಿಂಗಪ್ಪ ಅವರಿಂದ ಸಮ್ಮೇಳನಾಧ್ಯಕ್ಷ ಕುರುವ ಬಸವರಾಜ ಅವರು ಸರ್ವಾಧ್ಯಕ್ಷತೆ ಸ್ವೀಕರಿಸುವರು. ಶಾಸಕ ಎಂ.ಪಿ.ರೇಣುಕಾಚಾರ್ಯ, ಮಾಜಿ ಶಾಸಕ ಡಿ.ಜಿ.ಶಾಂತನಗೌಡ, ಡಾ.ಡಿ.ಬಿ.ಗಂಗಪ್ಪ, ಜಿಲ್ಲಾ ಕಸಾಪ ನಿಕಟಪೂರ್ವ ಅಧ್ಯಕ್ಷ ಮಂಜುನಾಥಕುರ್ಕಿ, ಎಸಿ ಹುಲ್ಲುಮನಿ ತಿಮ್ಮಣ್ಣ, ತಹಶೀಲ್ದಾರ್ ಬಿ.ವಿ.ಗಿರೀಶಬಾಬು, ಇಒ ರಾಮಭೋವಿ, ಡಾ.ಕೆಂಚಪ್ಪ ಭಂತಿ, ಪಿಐ ರಾಘವೇಂದ್ರ ಕಾಂಡಿಕಿ, ಶಿಕ್ಷಕg ಸಂಘದ ಜಿಲ್ಲಾ ಅಧ್ಯಕ್ಷ ಡಿ.ರಾಮಪ್ಪ, ಎನ್‍ಜಿಒ ಅಧ್ಯಕ್ಷ ಜಿ.ಬಿ.ವಿಜಯಕುಮಾರ, ನ್ಯಾಮತಿ ನಾಗರಾಜಪ್ಪ, ನಿಕಟಪೂರ್ವ ಅಧ್ಯಕ್ಷ ಜಿ.ನಿಜಲಿಂಗಪ್ಪ, ಅಧ್ಯಕ್ಷ ಡಿ.ಎಂ. ಹಾಲಾರಾಧ್ಯ ಉಪಸ್ಥಿತರಿರುತ್ತಾರೆ.
ಸಾಹಿತಿ ಎಸ್.ಆರ್. ಬಸವರಾಜಪ್ಪ ಅಧ್ಯಕ್ಷತೆಯಲ್ಲಿ ನಡೆಯಲಿರುವ ಗೋಷ್ಠಿ ಕಾರ್ಯಕ್ರಮದಲ್ಲಿ ಸ್ವಾತಂತ್ರ್ಯ ಹೋರಾಟದಲ್ಲಿ ನ್ಯಾಮತಿ ತಾಲ್ಲೂಕಿನ ಹೋರಾಟಗಾರರ ಕೊಡುಗೆ ಕುರಿತು ಶಶಿಧರಗೌಡ್ರು ಮತ್ತು ಮಹಿಳೆಯರ ಸಬಲೀಕರಣದ ಸವಾಲುಗಳು ಕುರಿತು ದಾವಣಗೆರೆ ಮಹಿಳಾ ಪ್ರಧಮದರ್ಜೆ ಕಾಲೇಜಿನ ಜಿ.ಕಾವ್ಯಾಶ್ರೀ ವಿಷಯ ಮಂಡನೆ ಮಾಡಲಿದ್ದಾರೆ.ಜಿಲ್ಲಾ ಕಸಾಪ ಕಾರ್ಯದರ್ಶಿ ಬಿ.ದಿಳ್ಯಪ್ಪ, ಪ್ರಾಂಶುಪಾಲ ಬಿ.ಆನಂದ, ಎಸ್.ಆರ್.ಗಿರಿಜಮ್ಮ, ವೀರಭದ್ರಸ್ವಾಮಿ ಉಪಸ್ಥಿತರಿರುತ್ತಾರೆ.
ನಾಗರಾಜಪ್ಪ ಅರ್ಕಾಚಾರ್ ಅಧ್ಯಕ್ಷತೆಯಲ್ಲಿ ನಡೆಯುವ ಕವಿಗೋಷ್ಠಿಯಲ್ಲಿ ಜಿಲ್ಲಾ ಕಸಾ¥ ಕಾರ್ಯದರ್ಶಿ ರೇವಣಸಿದ್ದಪ್ಪ ಅಂಗಡಿ, ವಿ.ಪಿ.ಪೂರ್ಣಾನಂದ, ಜೆ.ವಿ. ಭೀಮಾಕುಮಾರ, ತಾಲ್ಲೂಕು ಯೋಜನಾಧಿಕಾರಿ ಬಸವರಾಜ ಅಂಗಡಿ ಉಪಸ್ಥಿತರಿರುತ್ತಾರೆ.
ಗೋವಿನಕೋವಿ ಹಾಲಸ್ವಾಮಿಮಠದ ಸದ್ಗುರು ಶಿವಯೋಗಿ ಮಹಾಲಿಂಗ ಸ್ವಾಮೀಜಿ ನೇತೃತ್ವದಲ್ಲಿ ನಡೆಯುವ ಸಮಾರೋಪ ಸಮಾರಂಭದಲ್ಲಿಕುರುವ ಬಸವರಾಜ್ ಅವರು ಸರ್ವಾಧ್ಯಕ್ಷತೆ ವಹಿಸುವರು. ಎಸ್.ಎಚ್.ಹೂಗಾರ ಸಮಾರೋಪ ಭಾಷಣ ಮಾಡಲಿದ್ದು, ಕಸಾಪ ಅಧ್ಯಕ್ಷ ಡಿ.ಎಂ.ಹಾಲಾರಾಧ್ಯ ಅಧ್ಯಕ್ಷತೆ, ಕಸಾಪ ಕೋಶಾಧ್ಯಕ್ಷ ರಾಘವೇಂದ್ರ ನಾಯರಿ, ಡಿಡಿಪಿಐ ತಿಪ್ಪೇಶಪ್ಪ, ಮಾಜಿ ಅಧ್ಯಕ್ಷ ಉಜ್ಜಿನಪ್ಪ, ಬಿ.ಆನಂದ, ಮಹಾಂತಸ್ವಾಮಿ, ಎಚ್.ಎಲ್.ಉಮಾ, ಬಿ.ಕೆ.ಶ್ರೀನಿವಾಸ, ತಿಪ್ಪೇಶಪ್ಪ, ರುದ್ರಪ್ಪ, ಮೃತ್ಯುಂಜಯಸ್ವಾಮಿ ಉಪಸ್ಥಿತರಿರುತ್ತಾರೆ.
ಸಮ್ಮೇಳನದಲ್ಲಿ:
ಶಾಸಕ ಎಂ.ಪಿ.ರೇಣುಕಾಚಾರ್ಯ ಸಮ್ಮೇಳನಕ್ಕೆ ಬರುವವರಿಗೆ ಬೆಳಿಗ್ಗೆ ತಿಂಡಿ ಉಪ್ಪಿಟ್ಟು, ಕೇಸರಿಬಾತ್, ಮಧ್ಯಾಹ್ನ ಊಟಕ್ಕೆ ಗೋಧಿ ಪಾಯಸ, ಅನ್ನ ಸಾಂಬಾರು, ಪಲ್ಯ ವ್ಯವಸ್ಥೆ ಮಾಡಿರುತ್ತಾರೆ.
ಸಂಜೆ 6 ಗಂಟೆಗೆ ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ವಿವಿಧ ಶಾಲಾ-ಕಾಲೇಜು ಮಕ್ಕಳಿಂದ ನೃತ್ಯ ಪ್ರದರ್ಶನ, ಭರತನಾಟ್ಯ, ಜಾನಪದ ಹಾಡುಗಾರಿಕೆ ಇರುತ್ತದೆ.
ಬೆಂಗಳೂರಿನ ಪುಸ್ತಕ ಪ್ರಕಾಶನದಿಂದ ಪುಸ್ತಕಗಳ ಮಾರಾಟ ಮಳಿಗೆ ತೆರೆಯಲಿದೆ.

Leave a Reply

Your email address will not be published. Required fields are marked *