ನ್ಯಾಮತಿ: ತಾಲೂಕಿನ ಮಾದನಬಾವಿ ಗ್ರಾಮದ ಎರಡು ರೈತರಿಗೆ ಸೇರಿದ ಸ್ವಂತ ಕಣದ ಜಾಗದಲ್ಲಿ ಸಂಗ್ರಹಿಸಿಟ್ಟಿದ್ದ ಹುಲ್ಲಿನ ಬಣೆವೆಗೆ ಭಾನುವಾರ ರಾತ್ರಿ 8.30 ರ ಸಮಯಕ್ಕೆ ಆಕಸ್ಮಿಕವಾಗಿ ಬೆಂಕಿ ಬಿದ್ದು ಅವಘಡ ಸಂಭವಿಸಿದೆ.
ರೈತರಾದ ಕಾಡಸಿದ್ದಪ್ಪ ಎಂ ಕೆ ಮತ್ತು ಎಂ,ಕೆ ಗೌರಪ್ಪ ಎಂಬುವರ ಎರಡು ರೈತರಿಗೆ ಸೇರಿದ ಸುಮಾರು 3 ರಿಂದ 4 ಲಕ್ಷ ಮೌಲ್ಯದ ಹುಲ್ಲಿನ 2 ಬಣವೆಗೆ ಬೆಂಕಿ ಬಿದ್ದು ಪರಿಣಾಮವಾಗಿ ಬೆಂಕಿ ನಂದಿಸಲು ಅಗ್ನಿಶಾಮಕ ದಳದವರು ಮತ್ತು ಗ್ರಾಮಸ್ಥರು ಸೇರಿ ಅಗ್ನಿ ನಂದಿಸುವ ಕೆಲಸವನ್ನು ಮಾಡಿದರೂ ಸಹ ಹುಲ್ಲಿನ ಬಣ್ಣವೆಗಳನ್ನ ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ, ನಮ್ಮ ದನ ಕರುಗಳಿಗೆ ಮೇವ್ ಇಲ್ಲದಂತಾಗಿದೆ ಎಂದು ರೈತರು ಅಳುವನ್ನು ತೋಡಿಕೊಂಡರು.ಸಂಬಂಧ ಪಟ್ಟ ಕಂದಾಯ ಇಲಾಖೆ ಮತ್ತು ಕೃಷಿ ಇಲಾಖೆಯವರು ಆದಷ್ಟು ಬೇಗ ಪರಿಹಾರವನ್ನ ನೀಡಬೇಕು ಎಂದು ಅಧಿಕಾರಿಗಳಿಗೆ ರೈತರು ಮನವಿ ಮಾಡಿದ್ದಾರೆ.ಈ ಪ್ರಕರಣ ಕುರಿತು ನ್ಯಾಮತಿ ಪೆÇಲೀಸ್ ಠಾಣೆಗೆ ದೂರು ದಾಖಲಿಸಿದ್ದಾರೆ.