ನ್ಯಾಮತಿ:ಪಟ್ಟಣದ ವಿವಿಧ ಬ್ಯಾಂಕುಗಳ ಎಟಿಎಂಗೆ ಹಣತುಂಬಲು ಬಂದಿದ್ದ ವಾಹನವನ್ನು ವಶಪಡಿಸಿಕೊಂಡು ಅದರಲ್ಲಿಇದ್ದಇದ್ದರೂ. 73,98,400 ರೂಗಳನ್ನು ಜಪ್ತಿ ಮಾಡಲಾಗಿದೆಎಂದು ಪೊಲೀಸ್ ಇನ್ಸ್‍ಪೆಕ್ಟರ್ ಎನ್.ಎಸ್.ರವಿ ತಿಳಿಸಿದರು.
ಪಟ್ಟಣದ ವಿವಿಧ ಬ್ಯಾಂಕುಗಳ ಎಟಿಎಂಗೆ ಹಣತುಂಬಲು ಬಂದಿದ್ದ ಸಿಎಂಎಸ್ ಕಂಪನಿಯ ವಾಹನ ಹಣ ತುಂಬುವ ಅವಧಿ ಉಲ್ಲಂಘನೆ ಮಾಡಿದ ಹಿನ್ನಲೆಯಲ್ಲಿ ವಾಹನ ಜಪ್ತಿ ಮಾಡಲಾಗಿದ್ದು.ಜಪ್ತಿ ಹಣವನ್ನು ಟ್ರಜರಿಯಲ್ಲಿ ಇಡಲಾಗಿದೆ ಎಂದರು.
ಈ ಸಂದರ್ಭದಲ್ಲಿ ಸಬ್‍ಇನ್ಸ್‍ಪೆಕ್ಟರ್ ಪ್ರವೀಣ, ಹೆಡ್‍ಕಾನ್ಸ್‍ಸ್ಟೇಬಲ್ ಮಂಜಪ್ಪ, ಚುನಾವಣಾ ತನಿಖಾ ದಳದ ಅಧಿಕಾರಿ ಮಾಲತೇಶ ಮತ್ತು ಸಿಬ್ಬಂದಿ ಇದ್ದರು.

Leave a Reply

Your email address will not be published. Required fields are marked *