ನ್ಯಾಮತಿ: ತಾಲೂಕು ಸೌಳಂಗ ಚೆಕ್ ಪೆÇೀಸ್ಟ್ ಬಳಿ ಗುರುವಾರ ಬೆಳಗ್ಗೆ 11:45 ಸಮಯಕ್ಕೆ ವಾಹನ ತಪಾಸಣೆ ಮಾಡುವಾಗ ಬೈಕಿನಲ್ಲಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 83 ,500 ರೂ ಪತೆಯಾಗಿದೆ. ಎಸ್ ಎಸ್ ಟಿ ಮತ್ತು ಎಫ್ ಎಸ್ ಟಿ ತಂಡದವರು ಉಪಖಜಾನೆ ಅಧಿಕಾರಿಗಳಿಗೆ ಸುಪರ್ದಿಗೆ ಒಪ್ಪಿಸಲಾಗಿದ್ದು ಜಿಲ್ಲಾ ಚುನಾವಣಾ ಅಧಿಕಾರಿಗಳಿಗೆ ದಾಖಲೆ ನೀಡಿ 24 ಗಂಟೆಯ ಒಳಗಡೆ ಹಣವನ್ನ ಪಡೆಯಬಹುದು ಎಂದು ಉಪ ವಿಭಾಗಾಧಿಕಾರಿ ಹಾಗೂ ಚುನಾವಣಾಧಿಕಾರಿಗಳಾದ ಅಭಿಷೇಕ್ ತಿಳಿಸಿದ್ದಾರೆ.
ಎಂಸಿಸಿ ನೋಡಲ್ ಆಫೀಸರ್ ನಟರಾಜ್, ಎಫ್ ಎಸ್ ಟಿ ಮತ್ತು ಎಸ್ ಎಸ್ ಟಿ ತಂಡದವರು ಹಾಗೂ ಪಿ ಎಸ ಐ ಪ್ರವೀಣ್ ಸಹ ಇದ್ದರು.
