ದಾವಣಗೆರೆ, ಕೃಷಿ ಇಲಾಖೆ ಹಾಗೂ ತೋಟಗಾರಿಕೆ ಇಲಾಖೆ ಜೊತೆಗೂಡಿ ರೈತರಿಗೆ ತರಬೇತಿ ಕಾರ್ಯಕ್ರಮ ಹಮ್ಮಿಕೊಂಡಿದ್ದು, IIHR ಬೆಂಗಳೂರು ರವರು ಅಭಿವೃದ್ಧಿ ಪಡಿಸಿರುವ ಆರ್ಕಾ ಸಾನ್ವಿ ಮೆಣಸಿಕಾಯಿ ಬೆಳೆ ಕ್ಷೇತ್ರೋತ್ಸವ ಹಾಗೂ ಮಣ್ಣು ಉಳಿಸಿ ಅಭಿಯಾನ ಕಾರ್ಯಕ್ರಮವನ್ನು ಮಲ್ಲಿಗೇನಹಳ್ಳಿ ಗ್ರಾಮದ ಶ್ರೀ ಪ್ರಕಾಶ್ ರವರ ಸಮಗ್ರ ಕೃಷಿ, ಅಡಿಕೆ, ಪಪ್ಪಾಯ, ಆರ್ಕಾ ಸಾನ್ವಿ ಮೆಣಸಿಕಾಯಿ,

ಚೆಂಡುಹೂವು, ಬೆಳೆಗಳಿಗೆ ಹನಿನೀರಾವರಿ, ರಸಾವಾರಿ ಪದ್ಧತಿ ಅಳವಡಿಸಿಕೊಂಡಿರುವ ತಾಕಿನಲ್ಲಿ ಮಾನ್ಯ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರೊಂದಿಗೆ ತರಬೇತಿಯಲ್ಲಿ ಪಾಲ್ಗೊಂಡು ರೈತರಿಗೆ ಬರನಿರ್ವಹಣೆ, ಸಮಗ್ರ ಕೃಷಿ, ಅಡಿಕೆ ಬೆಳೆಯಲ್ಲಿ ನೀರು ನಿರ್ವಹಣೆ, ತೋಟಗಾರಿಕೆ ಬೆಳೆಗಳಿಗೆ ಹನಿನೀರಾವರಿ, ರಸಾವರಿ ಪದ್ದತಿಯನ್ನು ಅಳವಡಿಸಿಕೊಳ್ಳಬೇಕೆಂದು ತಾಂತ್ರಿಕ ಮಾಹಿತಿ ನೀಡಲಾಯಿತು, ಹಾಗೂ ಬೆಳಗುತ್ತಿ ಗ್ರಾಮದ ತೀರ್ಥಲಿಂಗಪ್ಪ, ಯೋಗೇಶಪ್ಪ, ನಾಗರಾಜಪ್ಪ ರವರ ಅಡಿಕೆ, ಕಾಳುಮೆಣಸು ತೋಟಗಳಿಗೆ ಬೇಟಿ. ನೀಡಿ ತಾಂತ್ರಿಕ ಮಾಹಿತಿ ನೀಡಲಾಯಿತು.
