ಶಿವಮೊಗ್ಗ:

ಕೇಂದ್ರ ಗೃಹಸಚಿವ ಅಮಿತ್ ಶಾ ಅವರು ದೆಹಲಿಗೆ ಕರೆದಾಗ ಅವರಿಗೆ ಗೌರವಕೊಟ್ಟು ನಾನು ದೆಹಲಿಗೆ ಹೋಗಿದ್ದೆ. ಆದರೆ, ಅವರು ಭೇಟೆಯಾಗದೆ ನಾನು ಸ್ಪರ್ಧೆ ಮಾಡುವುದಕ್ಕೆ ಅಸ್ತು ಎಂದಿದ್ದಾರೆ ಎಂದು ಸ್ವತಂತ್ರ ಅಭ್ಯರ್ಥಿ, ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ನಾನು ಚುನಾವಣೆಯಿಂದ ಹಿಂದೆ ಸರಿಯುವುದು ಮುಗಿದು ಹೋದ ಕಥೆ.‌ ರಾಜೇಶ್ ಜೀ ಮನೆಗೆ ಭೇಟಿ ಮಾಡಲು ಸೂಚಿಸಿದ್ದರು. ಅಮಿತ್ ಶಾ ಕಚೇರಿಯವರು ಅವರ ಕರೆ ಬಂದ ಮೇಲೆ ಕರೆತೀವಿ ಎಂದರು. ನಂತರ ಅವರ ಭೇಟಿಯ ಅವಶ್ಯಕತೆ ಇಲ್ಲ ಎಂದಿದ್ದಾರೆ ಎಂದು ಕಚೇರಿಯವರು ತಿಳಿಸಿದರು. ಇದರ ಅರ್ಥ ನೀನು ಶಿವಮೊಗ್ಗಕ್ಕೆ ವಾಪಸ್‌ ಹೋಗು, ಹೋಗಿ ನೀನು ಸ್ಪರ್ಧಿಸಿ ಗೆಲ್ಲು ಎಂಬ ಸಂದೇಶವನ್ನು ಕೊಟ್ಟಿದ್ದಾರೆ ಎಂದು ತಿಳಿಸಿದರು.

ಈ ಹಿಂದೆ ಅವರು ನನಗೆ ಕಾಲ್‌ ಮಾಡಿದಾಗ ನಾನ್ನ ಸ್ಪರ್ಧೆಯ ಸ್ಪಷ್ಟ ಉದ್ದೇಶವನ್ನು ಅವರಿಗೆ ತಿಳಿಸಿದ್ದೆ. ರಾಜ್ಯದಲ್ಲಿ ಬಿಜೆಪಿಯ ಶುದ್ಧೀಕರಣ ಅನಿರ್ವಾಯಕ್ಕಾಗಿ ಸ್ಪರ್ಧೆ ಎಂದಿದ್ದೆ. ಪಕ್ಷ ಶುದ್ಧೀಕರಣ, ಕುಟುಂಬ ರಾಜಕಾರಣ, ಹೊಂದಾಣಿಕೆ ರಾಜಕಾರಣದಲ್ಲಿ ಬಿ.ಎಸ್‌.ಡಯಿಯೂರಪ್ಪ ವಿರುದ್ಧ ನಾನು ಆಕ್ಷೇಪಿಸಿರುವ ಪ್ರಶ್ನೆಗೆ ಅಮಿತ್ ಶಾ ಬಳಿ ಯಾವುದೇ ಉತ್ತರ ಇರಲಿಲ್ಲ. ಹಾಗಾಗಿ ಅವರು ಹೊರಡು ಎಂದಿದ್ದಾರೆ ಎಂದರು

ಅಮಿತ್‌ ಶಾ ಅವರ ನಿರ್ಣಯವನ್ನು ಸ್ವಾಗತಿಸುವೆ. ಅವರು ಭೇಟಿಯಾಗಿದ್ದರೆ ಅವರಿಗೆ ಈ ಎಲ್ಲ ವಿಷಯವನ್ನು ಪ್ರಸ್ತಾಪ ಮಾಡುವವನಿದ್ದೆ. ಆದರೆ, ಅವರು ಭೇಟಿಯಾಗಲಿಲ್ಲ. ಇದು ನನ್ನ ಸ್ಪರ್ಧೆಗೆ ಭಗವಂತನೇ ಕೃಪೆ ತೋರಿದ್ದಾನೆ. ಅಮಿತ್‌ ಶಾ, ಮೋದಿ ಅಪೇಕ್ಷೆಯಂತೆ ನಾನು ಸ್ಪರ್ಧೆ ಮಾಡಿ, ಗೆದ್ದು ಮೋದಿ ಪ್ರಧಾನಿಯಾಗುವುದಕ್ಕೆ ಕೈ ಎತ್ತುತ್ತೇನೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಪಾಲಿಕೆ ಮಾಜಿ ಸದಸ್ಯರಾದ ಇ.ವಿಶ್ವಾಸ್‌, ಸುವರ್ಣ ಶಂಕರ್‌, ಆರ್.ಕೆ.ಪ್ರಕಾಶ್, ಲಕ್ಷ್ಮಿ ನಾಯಕ್, ರಮೇಶ್, ರಾಜು, ಶಂಕರ್ ನಾಯ್ಕ್ , ಭೂಪಾಲ್ , ಶ್ರೀಕಾಂತ್, ಜಾಧವ್ , ಉಮಾ ಮೂರ್ತಿ, ಕಾಂಚಿನಕಟ್ಟೆ ಸತ್ಯನಾರಾಯಣ, ಆರತಿ ಅ.ಮಾ.ಪ್ರಕಾಶ್, ಮಹಾಲಿಂಗಶಾಸ್ತ್ರಿ, ಶ್ರೀಪಾಲ್, ಅನಿತಾ, ಸತೀಶ್, ರೇಖಾ, ಲಕ್ಷ್ಮೀದೇವಿ, ರಾಧರಾಮಚಂದ್ರ, ಚಿದಾನಂದ್, ಮಹೇಶ್ ಮತ್ತಿತರರು ಇದ್ದರು.

ನಾನು ಮೋದಿಯನ್ನು ಹೃದಯದಲ್ಲಿ ಇಟ್ಟುಕೊಂಡಿದ್ದೇನೆ:

ಮೋದಿ ಪೋಟೋ ಬಳಸಿಕೊಳ್ಳಬಾರದು ಎನ್ನಲು ಮೋದಿ ಏನೂ ರಾಘವೇಂದ್ರ ಮನೆ ಆಸ್ತಿ ಅಲ್ಲ. ಮೋದಿ ವಿಶ್ವ ನಾಯಕ, ಮೋದಿನಾ ನಾನು ಹೃದಯದಲ್ಲಿ ಇಟ್ಟುಕೊಂಡಿದ್ದೇನೆ. ಆದರೆ, ಯಡಿಯೂರಪ್ಪ ಅವರ ಹೃದಯದಲ್ಲಿ ಬೇರೆಯವರೇ ಇದ್ದಾರೆ. ನಾನು ಕಡಿದರೂ ಮೋದಿನಾ ಬಿಡಲ್ಲ.

ಬಿ.ವೈ.ವಿಜಯೇಂದ್ರ ಅವರು ಈಶ್ವರಪ್ಪನ್ನು ಮನವೊಲಿಸಲಾಗುವುದು ಎಂದು ಹೇಳಿ ಎಲ್ಲರನ್ನೂ ದಾರಿತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಇನ್ನೂ ಯಾರೂ ಸಂಧಾನಕ್ಕೆ ಬರೊಲ್ಲ. ವಿಜೇಂದ್ರರಿಗೆ ಸಹೋದರನ ಸೋಲಿನ ಭೀತಿ‌ಯಿಂದ ಈ ರೀತಿ ಹೇಳಿಕೆ ಕೊಟ್ಟಿದ್ದಾರೆ. ಅವರಿಗೆ ಷಡ್ಯಂತ್ರ ಮಾಡಿಯೇ ಅಭ್ಯಾಸ. ಮತ್ತೊಮ್ಮೆ ಅವರು ಈಶ್ವರಪ್ಪನವರನ್ನ ಸಮಾಧಾನ ಗೊಳಿಸಲಾಗುವುದು ಎಂದು ಹೇಳಿಕೆ ಕೊಟ್ಟರೆ ಬೇರೆ ರೀತಿಯ ಭಾಷೆಯಲ್ಲಿ ಮಾತನಾಡ ಬೇಕಾಗುತ್ತದೆ ಎಂದು ಕೆ.ಎಸ್‌.ಈಶ್ವರಪ್ಪ ಎಚ್ಚರಿಕೆ ನೀಡಿದರು.

ನಾನು ಮೊದಲ ಬಾರಿ ಸಂಘಟನೆಯ ಸೂಚನೆಯನ್ನು ಮೀರಿ ಸ್ಪರ್ಧೆ ಮಾಡುತ್ತಿದ್ದೇನೆ. ಇದಕ್ಕೆ ಕ್ಷಮೆಯನ್ನೂ ಕೋರಿದ್ದೇನೆ. ಮತದಾರರೇ ನನ್ನ ಸ್ಟಾರ್ ಪ್ರಚಾರಕರು. ಕಾಂಗ್ರೆಸ್‌ ಅಭ್ಯರ್ಥಿ ಗೀತಾ ಅವರನ್ನು ಡಮ್ಮಿ ಎಂದು ಹಗುರವಾಗಿ ಹೇಳಿಲ್ಲ. ಗೀತಾ ನನ್ನ ಸಹೋದರಿ. ಬಿ.ಎಸ್‌.ಯಡಿಯೂರಪ್ಪ ಅವರು ಹೊಂದಾಣಿಕೆ ರಾಜಕಾರಣ ಮಾಡಿಕೊಳ್ತಾ ಇದ್ದಾರೆ ಎಂದು ಹೇಳಿದ್ದೇನೆ ಎಂದು ವಿವರಿಸಿದರು.

ಈ ಹಿಂದೆ ಶಿಕಾರಿಪುರದಲ್ಲಿ ಹೊಂದಾಣಿಕೆ ಮಾಡಿಕೊಂಡು ಲಿಂಗಾಯತ ನಾಯಕ ನಾಗರಾಜ್‌ಗೌಡ, ಹಿಂದುಳಿದ ನಾಯಕ ಗೋಣಿ ಮಾಲ್ತೇಶ್‌ ಅವರ ಭವಿಷ್ಯ ಹಾಳು ಮಾಡಿದರು. ಮಧು ಬಂಗಾರಪ್ಪ ಅವರು ಹೊಂದಾಣಿಕೆ ರಾಜಕೀಯ ಮಾಡಿಕೊಂಡಿಲ್ಲ ಎಂದು ಹೇಳಲಿ. ಮತ್ತೆ ದಹಲಿಯಿಂದ ಕರೆ ಬಂದರೆ ಅವರಿಗೆ ಗೌರವ ಕೊಟ್ಟು ಹೋಗುತ್ತೇನೆ. ಆದರೆ, ಚುನಾವಣೆಯಿಂದ ಹಿಂದೆ ಸರಿಯಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ReplyReply allForwardYou can’t react with an emoji to a large group

Leave a Reply

Your email address will not be published. Required fields are marked *