ದಾವಣಗೆರೆ : ಜಗಳೂರು ವಿಧಾನಸಭಾ ಕ್ಷೇತ್ರದ ಜಿಕ್ಕುಜ್ಜನಿ ಹಾಗೂ ಮರಿಕಟ್ಟೆ ಗ್ರಾಮದ ಮುಖಂಡರು ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾದರು. ಚಿಕ್ಕುಜ್ಜನಿ, ಮರಿಕಟ್ಟೆ ಗ್ರಾಮದ ಸುಪುತ್ರಪ್ಪ, ನಂಜುಂಡ ಸ್ವಾಮಿ, ಮಡಿವಾಳರ ಉಮೇಶ್, ಬಣವಿಕಲ್ಲು ಸಿದ್ದೇಶ್, ಪತ್ರೇಶ್, ಬಿ.ಅಜ್ಜಯ್ಯ, ಗ್ರಾ.ಪಂ.ಸದಸ್ಯ ಹನುಮಂತಪ್ಪ, ಬಸಲಿಂಗಪ್ಪ, ಗ್ರಾ.ಪಂ. ಮಾಜಿ ಅಧ್ಯಕ್ಷ ಮರಿಕಟ್ಟೆ ರಾಮಣ್ಣ, ರಾಜಶೇಖರ್, ಬಸವರಾಜ್, ಮಂಜುನಾಥ್ ಅವರು ಮಾಜಿ ಶಾಸಕ ಎಸ್.ವಿ.ರಾಮಚಂದ್ರಪ್ಪ ಹಾಗೂ ಸಂಸದ ಜಿ.ಎಂ.ಸಿದ್ದೇಶ್ವರ್ ಅವರ ಸಮ್ಮುಖದಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾದರು. ಈ ಸಂದರ್ಭದಲ್ಲಿ ಮಾಜಿ ತಾ.ಪಂ ಸದಸ್ಯ ಅಂಜಿನಪ್ಪ ಇದ್ದರು…