ನ್ಯಾಮತಿ: ತಾಲೂಕು ಮಲ್ಲಿಗೆನಹಳ್ಳಿ ಗ್ರಾಮದಲ್ಲಿ ಭಾರತದ ಚುನಾವಣಾ ಆಯೋಗದ ಆದೇಶದ ಹಿನ್ನೆಲೆಯಲ್ಲಿ “ಚುನಾವಣಾ ಪರ್ವ’ ದೇಶದ ಗರ್ವ”ಜಾಗೃತಿ ಮತದಾರರಾಗಿರಿ ಮತದಾರರ ಮಾರ್ಗದರ್ಶಿಯನ್ನ ಬಿ ಎಲ್ ಓ, ಶಾರದೆ ಕೆ ಯವರು ಮಲ್ಲಿಗೇನಹಳ್ಳಿ ಗ್ರಾಮದಲ್ಲಿ ಪ್ರತಿಯೊಂದು ಮನೆ ಮನೆಗೆ ಮತ್ತು ಸಾರ್ವಜನಿಕ ಸ್ಥಳಗಳಾದ ದೇವಸ್ಥಾನ ಆವರಣದಲ್ಲಿರುವ ಸುಮಾರು 50ಕ್ಕೂ ಹೆಚ್ಚು ಗ್ರಾಮಸ್ಥರು ಮತ್ತು ಮುಖಂಡರು ಸೇರಿದ್ದ ಸ್ಥಳಕ್ಕೆ ಭೇಟಿ ನೀಡಿ ಮತದಾನದ ಜಾಗೃತಿ ಮೂಡಿಸಿದರು. ಮಲ್ಲಿಗೆನಹಳ್ಳಿ ಗ್ರಾಮದ ಮುಖಂಡರು ಬಸವರಾಜಪ್ಪ, ಪರಮೇಶ್ವರಪ್ಪ ಮತ್ತು ಗ್ರಾಮಸ್ಥರು ಸೇರಿದಂತೆ ಅಂಗನವಾಡಿ ಕಾರ್ಯಕರ್ತೆ ಇಂದಿರಾ ಕೆ, ಆಶಾ ಕಾರ್ಯಕರ್ತೆ ಕವಿತಾ ಸಹ ಭಾಗವಹಿಸಿದ್ದರು.