ನ್ಯಾಮತಿ: ಜೀವನದಲ್ಲಿ ಮೋಕ್ಷ ಪ್ರಾಪ್ತಿಗೆ ಭಕ್ತಿ ಮಾರ್ಗ ಅತ್ಯುತ್ತಮವಾದದ್ದು ಆದ್ದರಿಂದ ಎಲ್ಲರೂ ಗುರಿ ಹಿರಿಯರಲ್ಲಿ ದೇವರುಗಳಲ್ಲಿ ಭಯ ಭಕ್ತಿಯಿಂದ ನಡೆದು ಕೊಂಡು ತನ್ಮೂಲಕ ಮೋಕ್ಷ ಹೊಂದಬೇಕು ಎಂದು ಸಿರಿಗೆರೆ ಬೃಹನ್ಮಠದ ತರಳುಬಾಳು ಜಗದ್ಗುರು 1108 ಡಾ// ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.
ನ್ಯಾಮತಿ ತಾಲೂಕಿನ ಮಲ್ಲಿಗೇನಹಳ್ಳಿ ಗ್ರಾಮದಲ್ಲಿ ಶನಿವಾರ ಶ್ರೀ ಆಂಜನೇಯ ಸ್ವಾಮಿ, ಶ್ರೀ ಭೂತಪ್ಪ ಸ್ವಾಮಿ, ಶ್ರೀ ದುರ್ಗಮ್ಮ ದೇವಿ, ಶ್ರೀ ಮರಿಯಮ್ಮ ದೇವಿ, ಶ್ರೀ ಮಾತೆಂಗಮ್ಮ ದೇವಿ, ದೇಗುಲ ಪ್ರವೇಶ ಮತ್ತು ಸದರಿ ದೇವರ ಶಿಲಾ ಮೂರ್ತಿಗಳ ಪ್ರತಿಷ್ಠಾಪನೆ, ಕರಿಯಮ್ಮ ದೇವಿಯ ಕಳಸಾರೋಹಣ ಧರ್ಮಸಭೆಯಲ್ಲಿ ಮಾತನಾಡಿದ ಅವರು
“ಕೆಟ್ಟ ಮಗು ಹುಟ್ಟುಬಹುದು. ಕೆಟ್ಟ ತಾಯಿ ಹುಟ್ಟಲಿಕ್ಕೆ ಸಾಧ್ಯವಿಲ್ಲ. ನೀವು ಮಗುವಿಗೆ ಜನ್ಮ ಕೊಟ್ಟಿರೋ. ಮಗು ನಿಮಗೆ ಜನ್ಮ ಕೊಟ್ಟಿದಿಯೋ, ಅದರ ಅರ್ಥವನ್ನು ಸವಿಸ್ತಾರವಾಗಿ ತಿಳಿಸಿದ ಶ್ರೀಗಳು ಮಗುವಿಗೆ ಜನ್ಮ ಕೊಟ್ಟಾದ ಮೇಲೆ ತಾಯಿ ಆಗಿವಿರಿ, ಧಾರ್ಮಿಕ ಸಭೆಯಲ್ಲಿ ಆಂಜನೇಯ ಸ್ವಾಮಿ ಕುರಿತು ಮಾತನಾಡಿದ ಅವರು ಆಂಜನೇಯ ಸ್ವಾಮಿ ದೇವರು ಅನಿಸಿಕೊಂಡಿದ್ದು ನಿಮ್ಮಿಂದ ಆದ ಭಕ್ತಿಯಿಂದ. ಪ್ರಾಣ ಪ್ರತಿಷ್ಠಾಪನೆ ಉಂಟಾದರೆ, ನೀ ಪ್ರಸವ ಆದಮೇಲೆ ನೀವು ಬದುಕಿದರೆ ನಿಮ್ಮ ಭಕ್ತಿ ಆಂಜನೇಯ ಸ್ವಾಮಿ ದೇವರಾಗಿದ್ದು ಎಂದು ಭಕ್ತಿಯ ಆಶೀರ್ವಚನ ನೀಡಿದರು.
ಕೋಡಿಹಳ್ಳಿ ಆದಿ ಜಾಂಬವ ಬೃಹನ್ಮಠದ ಷಡಕ್ಷರಿ ಮುನಿ ದೇಸಿಕೇಂದ್ರ ಸ್ವಾಮೀಜಿ ಧಾರ್ಮಿಕ ಸಭೆಯನ್ನು ಕುರಿತು ಮಾತನಾಡಿದ ಅವರು ಇಂದಿನ ದಿನಗಳಲ್ಲಿ ಎಲ್ಲಾ ಕ್ಷೇತ್ರಗಳಲ್ಲಿ ಸ್ಪರ್ಧೆ ಇದ್ದು, ಅದನ್ನು ಬುದ್ದಿ ಬಲ ಮತ್ತು ಪರಿಶ್ರಮದಿಂದ ಗೆಲ್ಲಲು ಸಾಧ್ಯ.. ಜೀವನದಲ್ಲಿ ಗೆಲುವಿನ ಕಡೆ ನಾವು ಹೆಚ್ಚಿನ ಆಸಕ್ತಿ ತೋರಬೇಕು. ನಾವು ಕೆಳಸಮುದಾಯ ಅನ್ನುವ ಭಾವನೆ ಬೇಲಿ ದಾಟಿ ಬಂದು, ನಾವು ವಾಸಿಸುವ ಸ್ಥಳದಲ್ಲಿ ಪ್ರತಿಯೊಂದು ಸಮುದಾಯದವರ ಜೊತೆ ಪರಸ್ಪರ ಪ್ರೀತಿ ವಿಶ್ವಾಸ ಶಾಂತಿ ಸೌಹಾರ್ದತೆಯಿಂದ ಬದುಕು ನಡೆಸಿದರೆ, ನಾವು ನಂಬಿದ ದೇವರನ್ನು ಅಲ್ಲಿ ಕಾಣಬಹುದು ಎಂದು ಹೇಳಿದರು.
ರಾಂಪುರದ ಹಾಲಸ್ವಾಮಿ ಮಠದ ಶಿವಕುಮಾರಸ್ವಾಮೀಜಿ, ಶ್ರೀ ಆಂಜನೇಯ ಸ್ವಾಮಿ ದೇವರ ಜೀರ್ಣೋದ್ಧಾರ ಸೇವ ಸಮಿತಿ ಅಧ್ಯಕ್ಷರಾದ ಎಂ ಬಸವರಾಜಪ್ಪ ಮಾತನಾಡಿದರು. ದೇವಸ್ಥಾನ ಸಮಿತಿಯ ಕಾರ್ಯದರ್ಶಿ, ಪರಮೇಶಪ್ಪನವರು ತ್ರಿಮೂರ್ತಿ ಮಠಾದಿಶರುಗಳಿಗೂ ಹಾಗೂ ದೇವಸ್ಥಾನ ಕಟ್ಟಲಿಕ್ಕೆ ಸಹಕರಿಸಿದ ಸರ್ವ ಭಕ್ತರಿಗೂ ಮತ್ತು ಕಟ್ಟಡದ ಕಾರ್ಮಿಕರಿಗೂ ಶಿಲ್ಪಿಗಳಿಗೂ ಸನ್ಮಾನಿಸಿದರು.
ಶಾಸಕ ಡಿಜೆ ಶಾಂತನಗೌಡ್ರು, ಮಾಜಿ ಶಾಸಕ ಎಂ ಪಿ ರೇಣುಕಾಚಾರ್ಯ, ಡಿಸಿಸಿ ಬ್ಯಾಂಕ್ ನಿರ್ದೇಶಕ ಡಿಜಿ ವಿಶ್ವನಾಥ್, ನ್ಯಾಮತಿ ಮತ್ತು ಹೊನ್ನಾಳಿ ಸಾಧು ವೀರಶೈವ ಸಮಾಜದ ಅಧ್ಯಕ್ಷರಾದ ಶಿವಪ್ಪ ಕೊಡಿಕೊಪ್ಪ. ಗದ್ಗೇಶ್ ಹೆಚ್ ಎ ,ಕ್ಷತ್ರಿಯ ಸಮಾಜದ ರಾಜ ಉಪಾಧ್ಯಕ್ಷ ಬಿ ಎಂ ರವಿಕುಮಾರ್, ಇಂಜಿನಿಯರ್ ಡಿಜಿ ಸೋಮಶೇಖರ್, ಮಾಸ್ಡಿ ಗಣೇಶ್ ಆಚಾರ್ ಸೇರಿದಂತೆ ದೇಗುಲಗಳ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರು, ಪದಾಧಿಕಾರಿಗಳು, ಊರಿನ ಗ್ರಾಮಸ್ಥರು ಸರ್ವ ಭಕ್ತಾದಿಗಳು ಭಾಗವಹಿಸಿದ್ದರು.