ನ್ಯಾಮತಿ: ಪ್ರತಿಯೊಬ್ಬರಲ್ಲೂ ಒಂದು ಪ್ರತಿ¨ sÉಇರುತ್ತದೆ, ಅದನ್ನು ಗುರುತಿಸಿ ಹೊರತರುವಂತಹ ಕೆಲಸವನು ್ನಕನ್ನಡ ಸಾಹಿತ್ಯ ಪರಿಷತ್ತು ಹಮ್ಮಿಕೊಂಡಿರುವುದು ಶ್ಲಾಘನಿಯ ಎಂದು ವಿಶ್ರಾಂತ ಗುರುಗಳಾದ ನಾಗರಾಜಪ್ಪ ಅರ್ಕಾಚಾರ್ ತಿಳಿಸಿದರು.
ಪಟ್ಟಣದ ಕನ್ನಡ ಸಾಹಿತ್ಯ ಪರಿಷತ್ತು ಕಚೇರಿಯಲ್ಲಿ ಶನಿವಾರ ಪ್ರಥಮ ಸಾಹಿತ್ಯ ಸೌರ¨s Àತಾಲ್ಲೂಕು ಕನ್ನಡಿಗರ ಪ್ರತಿಭಾ ಪರಿಚಯ ಮಾಸಿಕ ಕಾರ್ಯಕ್ರಮವನ್ನು ಕವನ ವಾಚನ ಮಾಡುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರತಿ ತಿಂಗಳು ಎರಡನೇ ಶನಿವಾರ ಸಂಜೆ 4ರಿಂದ 6ರವರೆಗೆ ನಡೆಯುವ ಸಾಹಿತ್ಯ ಸೌರಭ ಕಾರ್ಯಕ್ರಮದಲ್ಲಿ ಶೈಕ್ಷಣಿಕ, ಸಾಮಾಜಿಕ, ಸಾಹಿತ್ಯ, ವೈದ್ಯಕೀಯ, ಜಾನಪದ, ವ್ಯಾಪರ ವಹಿವಾಟು, ರೈತರ ದಿನಚರಿಗಳು ಒಳಗೊಂಡಂತೆ ವಿವಿಧ ವಿಷಯಗಳ ಬಗ್ಗೆ ಕವನ ವಾಚನ, ಕಥೆ,ಕಾದಂಬರಿ ಬರವಣಿಗೆ, ಏಕಪಾತ್ರಾಭಿನಯ,ಸಂಗೀತ ಹೀಗೆ ಹಲವಾರು ಪ್ರತಿಭೆಗಳನ್ನು ಗುರುತಿಸುವ ಸಲುವಾಗಿ ಪರಿಷತ್ತು ಈ ಕಾರ್ಯಕ್ರಮ ಆಯೋಜಿಸಿದೆ ಎಂದು ಕಸಾಪ ಅಧ್ಯಕ್ಷ ಡಿ.ಎಂ.ಹಾಲಾರಾಧ್ಯ ತಿಳಿಸಿದರು.
ಸಾಹಿತ್ಯ ಸೌರಭ ಮಾಸಿಕ ಕಾರ್ಯಕ್ರಮವನ್ನು ನಿಕಟಪೂರ್ವ ಅಧ್ಯಕ್ಷ ಜಿ.ನಿಜಲಿಂಗಪ್ಪ, ಎಂ.ಎಸ್.ಜಗದೀಶ, ಚಂದನ ಜಂಗ್ಲೀ, ಈ ಸುಮಲತಾ ನಿರ್ವಹಣೆ ಮಾಡುವಂತೆ ಸಭೆಯಲ್ಲಿ ತೀರ್ಮಾನಿಸಲಾಯಿತು.
ಹೋಬಳಿ ಘಟಕದ ಅಧ್ಯಕ್ಷಎಂ.ಜಿ.ಕವಿರಾಜ, ಗಜಾನನ, ರವೀಂದ್ರಚಾರ್, ಕದಳಿ ಅಂಬಿಕಾ, ಪುಷ್ಪಾ, ಬೆಳಗುತ್ತಿ ರೇವಣಸಿದ್ದಪ್ಪ, ಸಿ.ಕೆ.ಬೋಜರಾಜ, ಪಾಲಾಕ್ಷಪ್ಪ ದಾನಿಹಳ್ಳಿ, ಎಸ್.ಜಿ.ಬಸವರಾಜ, ಎಂ.ಆರ್.ಮಮತಾ, ರೇಡಿಯೋ ಷಡಾಕ್ಷರಿ ಚರ್ಚೆಯಲ್ಲಿ ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *