ನ್ಯಾಮತಿ:ಚೀಲೂರು ಗ್ರಾಮದ ವೀರಭದ್ರೇಶ್ವರಸ್ವಾಮಿ ರಥೋತ್ಸವ ಬುಧವಾರ ನೂರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು.
ಈ ನಿಮಿತ್ತ ಮಂಗಳವಾರ ವೀರಭದ್ರಸ್ವಾಮಿ ಕೆಂಡದಾರ್ಚನೆ, ಲಕ್ಷ್ಮಿ ರಂಗನಾಥಸ್ವಾಮಿ ದೂಳಾರ್ಚನೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ನಡೆಯಿತು. ಬುಧವಾರ ಬೆಳಿಗ್ಗೆ ಆಲಂಕೃ ತಗೊಂಡ ರಥದಲ್ಲಿ ವೀರಭದ್ರೇಶ್ವರಸ್ವಾಮಿ ಪ್ರತಿಷ್ಠಾಪನೆ ಮಾಡಿ ಜಯ ಘೋಷದೊಂದಿಗೆ ರಥವನ್ನು ಎಳೆಯಲಾಯಿತು.
ಹರಕೆ ಹೊತ್ತ ಭಕ್ತರುರಥಕ್ಕೆ ಬಾಳೆಹಣ್ಣು, ಮಂಡಕ್ಕಿಎರಚುವ ಮೂಲಕ ಭಕ್ತಿ ಮೆರೆದರು. ದೇವಸ್ಥಾನ ವತಿಯಿಂದ ಸಾಮೂಹಿಕ ಅನ್ನಸಂತರ್ಪಣೆಏರ್ಪಡಿಸಲಾಗಿತ್ತು.
ಅರ್ಚಕರಾದ ಸುಭಾಷ್ಶಾಸ್ತ್ರಿ, ವೀರೇಶ ಪೂಜಾರ, ಚನ್ನಯ್ಯ, ನಿರಂಜನಸ್ವಾಮಿ,ಎಸ್.ಕೆ.ಶ್ರೀಧರಮೂರ್ತಿ, ಹನುಮಂತಯ್ಯಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ದೇವಸ್ಥಾನ ಸಮಿತಿ ಮತ್ತುಗ್ರಾಮಸ್ಥರುಎಲ್ಲಾಧಾರ್ಮಿಕ ಕಾರ್ಯಕ್ರಮಗಳ ನೇತೃತ್ವ ವಹಿಸಿದ್ದರು.